Tuesday 29 March 2011

ಜಯಪ್ರಕಾಶ ಹೀಗೆ ಮಾಡುವುದೇ? ನಾರಾಯಣ ನಾರಾಯಣ!

ಸ್ಪೋಟಕ ಸುದ್ದಿ ಅದೇನು ಕೊಟ್ಟೀರಿ ಎಂದು ಒಬ್ಬ ಓದುಗ ಮಹಾಪುರುಶರೊಬ್ಬರು ಕೇಳಿದ್ದಾರೆ.

ಇಲ್ಲಿದೆ ನೋಡಿ!
ಕಪ್ರದಲ್ಲಿ ಪ್ರಕಟವಾದ ಬರಹಕ್ಕೆ ವಿಕ ವರದಿಗಾರನೋಬ್ಬನಿಗೆ ಪೋಲೀಸ್ ನೋಟೀಸ್ ಜಾರಿಯಾಗಿದೆ!

ಇದು ವಿಚಿತ್ರ. ಆದರೂ ಸತ್ಯ. ನಂಬಿ ಪ್ಲೀಸ್!

೧-೨ ವರ್ಷದ ಹಿಂದೆ ಕಪ್ರದಲ್ಲಿ ತಸ್ಲೀಮ ನಸ್ರೀನ್ ಬರೆದ ಪರ್ದಾ ಕುರಿತು ಸಾಪ್ತಾಹಿಕದಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದರಿಂದಾಗಿ ಸಾಕಷ್ಟು ಗಲಾಟೆಯೂ ಆಗಿತ್ತು. ಶಿವಮೊಗ್ಗದಲ್ಲಿ ಗೋಲಿಬಾರ್ ಆಗಿ ಇಬ್ಬರು ಮೃತಪಟ್ಟಿದ್ದರು. ನಿಮಗೆ ನೆನಪಿರಬಹುದು.

ವಿಚಿತ್ರವೆಂದರೆ ಅದನ್ನು ಬರೆದವರು ವಿಕದಲ್ಲಿರುವ ಜಯಪ್ರಾಕಾಶ ನಾರಾಯಣ!

ತಸ್ಲೀಮ ನಸ್ರೀನ್ ಅವರ ಪರ್ದಾ ಲೇಖನವನ್ನು ಜಯಪ್ರಕಾಶ್ ನಾರಾಯಣ ಭಾಷಾಂತರಿಸಿದ್ದರು. ಅದನ್ನು ವಿಕದಲ್ಲಿ ಪ್ರಕಟಿಸುವುದು ಅವರ ಉದ್ದೇಶವಾಗಿತ್ತು. ಆದರೆ ಕೋಮುವಾದಿ ಎಂದು ಬುದ್ದಿಜೀವಿಗಳಿಂದ ಕರೆಸಿಕೊಂಡಿರುವ ವಿ.ಭಟ್ಟರು ಕೂಡ ಅದನ್ನು ಪ್ರಕಟಿಸಲು ನಿರಾಕರಿಸಿದರು. ಸುಮ್ಮನೆ ಒಂದು ಲೇಖನ ವೇಸ್ಟ್ ಆಗಿಬಿಡುತ್ತಲ್ಲ ಎಂದು ಕುಬುದ್ದಿ ಕರ್ಚು ಮಾಡಿದ ಜಯಪ್ರಕಾಶ್ ನಾರಾಯಣ ಲೇಖನವನ್ನು ಕಪ್ರಕ್ಕೆ ಕಳುಹಿಸಿದರು.

ಅಲ್ಲಿ ಸಂಪಾದಕ ಶಿವಸುಬ್ರಮಣ್ಯ ಮತ್ತು ಸಾಪ್ತಾಹಿಕ ಮುಖ್ಯಸ್ಥ ಡಾ.ವೆಂಕಿ ಸೇರಿ ಅದನ್ನು ಸಾಪ್ತಾಹಿಕದಲ್ಲಿ ಪ್ರಕಟಿಸಿಬಿಟ್ಟರು. ಆಮೇಲೆ ಶಿವ ಶಿವ ಎನ್ನಬೇಕಾಯ್ತು!

ಗಲಾಟೆಗಳೆಲ್ಲ ಮುಗಿದು ಪೋಲೀಸ್ ವಿಚಾರಣೆ ಆರಂಭವಾಯಿತು. ಯಾವಾಗ ಕುತ್ತಿಗೆಗೆ ಬಂತೊ ಆಗ ಇಬ್ಬರು ಜೆಪಿ ನಾಮಸ್ಮರಣೆ ಆರಂಭಿಸಿದ್ದಾರೆ. ಯಾವ ಜೆಪಿ ಎಂದು ಹುಡುಕುತ್ತ ಹೊರಟ ಪೋಲೀಸ್ ಜೀಪು ವಿಕ ಕಚೇರಿ ತಲುಪಿದೆ!
ಈಗ ಪೊಲೀಸರು ವಿಕದ ಜಯಪ್ರಕಾಶ್ ನಾರಾಯಣನಿಗೂ ನೋಟೀಸ್ ನೀಡಿದ್ದಾರೆ. ವಿಕ ಆಡಳಿತ ವರ್ಗಕ್ಕೂ ಇ ಮಾಹಿತಿ ದೊರೆತಿದೆ.

ನಮ್ಮ ಪ್ರಶ್ನೆ ಇರುವುದು ಒಂದು ಪತ್ರಿಕೆಯಲ್ಲಿ ಇದ್ದುಕೊಂಡು ಇನ್ನೊಂದು ಪತ್ರಿಕೆಗೆ ಬರೆಯುವುದು ಸರಿಯೆ? ಇದು ಗೊತ್ತಾಗಿಯೂ ವಿಕ ಆಡಳಿತ ಸುಮ್ಮನಿರುವುದೇಕೆ? ಅದರರ್ಥ ಜಯಪ್ರಕಾಶ್ ನಾರಾಯಣ ಬರೆದ ಲೇಖನವನ್ನು ವಿಕ ಆಡಳಿತ ಬೆಂಬಲಿಸುತ್ತಿದೆಯೆಂದೆ?

ಜಯಪ್ರಕಾಶ್ ನಾರಾಯಣ ಕಚೇರಿಯಲ್ಲಿ ಇನ್ನೊಬ್ಬರಿಗೆ ಪಾಠ ಮಾಡುವಲ್ಲಿ ಪ್ರವೀಣರು. ಇನ್ನೊಬ್ಬರಿಗೆ ಪಾಠ ಮಾಡುವವರು ಹೀಗೆ ಮಾಡಿದರೆ ಹೇಗೆ? ಇದನ್ನೆಲ್ಲಾ ನೋಡಿಕೊಂಡು ಸುರಾ (Sunil Rajshekhar) ಸುಮ್ಮನುಳಿಯುವರೆ?

7 comments:

Anonymous said...

ಶಿವಸುಬ್ರಹ್ಮಣ್ಯ ಅವರಿಗೆ ಈ ಕರ್ಮಕಾಂಡ ಜೆಪಿಯದು ಎಂದು ಗೊತ್ತಿರಲಿಲ್ಲ. ಅವರ ಕಣ್ಣು ತಪ್ಪಿಸಿ ಡಾವೆಂಕಿ ಮಾಡಿದ ಅವಾಂತರ ಇದು. ಇದಕ್ಕೆ ಪುರಾವೆ ಬೇಕಿದ್ದರೆ ಅವರು ಸಾಪ್ತಾಹಿಕ ಡೆಡ್ ಲೈನ್ ಮರುದಿನ ಅರವಿಂದ ಚೊಕ್ಕಾಡಿಯವರ ಪುಸ್ತಕ ಬಿಡುಗಡೆಯಲ್ಲಿ ಪಾಲ್ಗೊಂಡಿದ್ದನ್ನು ಗಮನಿಸಬಹುದು. ಆ ಸಜ್ಜನರನ್ನು ಯಾಕೆ ನಡುವೆ ತರುತ್ತೀರಿ?

- ಕನ್ನಡಪ್ರಭದ ಅಧಿಕೃತ ಮೂಲ.

Anonymous said...

ಶಿವಸುಬ್ರಮಣ್ಯ ಸಂಪಾದಕನಾಗಿ ಮಾಡಿದ್ದು ಬೆಂಕಿ ಹಚ್ಚುವ ಕೆಲಸವೊಂದನ್ನೇ. ಬೇರೇನೂ ಒಳ್ಳೆ ಕೆಲಸವನ್ನು ಮಾಡಿಲ್ಲ. ಅಂತವರು ಬೇಗ ನಿರ್ಗಮಿಸಿದ್ದೆ ಒಳ್ಳೆದಾಯ್ತು.

Anonymous said...

ಶಿವಸುಬ್ರಮಣ್ಯ ಸಂಪಾದಕನಾಗಿ ಮಾಡಿದ್ದು ಬೆಂಕಿ ಹಚ್ಚುವ ಕೆಲಸವೊಂದನ್ನೇ. ಬೇರೇನೂ ಒಳ್ಳೆ ಕೆಲಸವನ್ನು ಮಾಡಿಲ್ಲ. ಅಂತವರು ಬೇಗ ನಿರ್ಗಮಿಸಿದ್ದೆ ಒಳ್ಳೆದಾಯ್ತು.

Anonymous said...

೧. ಸ್ವಭಾವತಃ ಸಜ್ಜನರಾದ ಜೆಪಿ ಯಾಕೆ ಹೀಗೆ ಮಾಡಿಕೊಂಡರೋ ಗೊತ್ತಿಲ್ಲ. ಆದರೆ ನಿಮ್ಮ ಈ ಟಿಪ್ಪಣಿಯಲ್ಲಿ ಅವರನ್ನು ವೈಯಕ್ತಿಕವಾಗಿ ನಿಂದಿಸಿದ್ದು ತಪ್ಪು.

೨. 'ಒಂದು ಪತ್ರಿಕೆಯಲ್ಲಿ ಇದ್ದುಕೊಂಡು ಇನ್ನೊಂದು ಪತ್ರಿಕೆಗೆ ಬರೆಯುವುದು ಸರಿಯೆ' ಅಂತ ನೀವು ಪ್ರಶ್ನೆ ಎತ್ತಿದ್ದೀರಿ. ಕ.ಪ್ರ. ಸಂಪಾದಕ ವಿ ಭಟ್ ವಿಜಯ ಕರ್ನಾಟಕ ಸಂಪಾದಕರಾಗಿದ್ದುಕೊಂಡೇ ಹಾಯ್ ಬೆಂಗಳೂರಿಗೆ ಲಾಲೂ ಪ್ರಸಾದ್ ಯಾದವ್ ಕುರಿತ ಕಾಲಂ ಬರೆಯುತ್ತಿದ್ದರು. ಜೋಗಿ ಕನ್ನಡಪ್ರಭದಲ್ಲಿದ್ದಾಗ, ನಂತರ ಸುವರ್ಣ ಚಾನೆಲ್ ಗೆ ವಲಸೆ ಹೋದಾಗ ಹಾಯ್ ಬೆಂಗಳೂರಿನಲ್ಲಿ ಜಾನಕಿ ಕಾಲಂ ಬರೆಯುತ್ತಿದ್ದರು. ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಈಗಲೂ ಅವರ ಅಂಕಣ ಮುಂದುವರಿಯುತ್ತಿದೆ.

೩. ಇನ್ನು ಯಾರದೋ ಬರಹಗಳಿಗೆ ತಮ್ಮ ಹೆಸರು ಹಾಕಿಕೊಂಡು ಪುಸ್ತಕ ಪ್ರಿಂಟ್ ಮಾಡುವವರಿಗೆ ಕೊರತೆಯೇನೂ ಇಲ್ಲ. ನಿಮ್ಮ ಬ್ಲಾಗ್ ನೋಡಿದರೆ ಇದು ವೈಯಕ್ತಿಕ ನಿಂದನೆಗಾಗಿ ಹುಟ್ಟಿಕೊಂಡ ಬ್ಲಾಗ್ ಅನಿಸುತ್ತಿದೆ. ಬರೀ ತೆಗಳಿಕೆ, ಗಾಸಿಪ್, ರೂಮರ್ ಇಂಥವುಗಳನ್ನು ಹೊರತುಪಡಿಸಿದರೆ ಇದರಲ್ಲಿ ಬೇರೆ ಯಾವ ಒಳ್ಳೆಯ ಬರಹಗಳೂ ಇಲ್ಲ. ಸಂಪಾದಕೀಯ ಬ್ಲಾಗ್ ನೋಡಿ ಕಲಿಯಿರಿ. ಮರೆಯಲ್ಲಿ ನಿಂತು ಕಲ್ಲೆಸೆಯುವ ನಿಮ್ಮಂಥ ಅನಾಮಿಕ ಬ್ಲಾಗಿಗರಿಗೆ ಧಿಕ್ಕಾರವಿರಲಿ.

ಈ ಲಿಂಕ್ ಓದಿಕೊಳ್ಳಿ : http://ashok-shettar.blogspot.com/2010/11/blog-post.html

(ಈ ಕಾಮೆಂಟ್ ಪ್ರಕಟಿಸದಿದ್ದರೆ ನೀವು ಅಂಥವರು ಎಂದು ಒಪ್ಪಿಕೊಂಡ ಹಾಗೆ!)

Anonymous said...

Times Group officials cant read Kannada.

Anonymous said...

eenu gangadhar tadahal avare lakkundiyinda bandu PRO agi kelasa madutta pradyapaka anta dodda pose nidodu kooda spotaka mahitina?

Anonymous said...

@ANONYMOUS,
1.ಸ್ವಭಾವತಃ ಸಜ್ಜನ MEANS WHAT. HIS INTENTION OF TRANSLATION OF ARTICLE WAS VERY CLEAR.
2. THIS ARGUMENT IS LIKE cm YADDY'S CORRUPTION TAKE.U MENTIONED ONLY TWO NAMES WHO THEY ARE ? ALL CLOSE FRIENDS & EDITORS.
HERE JP IS GHOST WRITER UNLIKE VBHT OR JOGI.

HERE SHIVA SUBRAMANYA IS SCAPEGOAT. HE CANT DISTINGUISH WHO IS GOOD HAND. HE ALWAYS RELIED ON WRONG PEOPLE.
BUT DON'T MAKE ANY UNNECESSARY COMMENTS HERE.