Tuesday 27 December 2011

ಮಾಧ್ಯಮ ಅಕಾಡೆಮಿಯಿಂದ ಗೇಟ್ ಪಾಸ್ !

ಮಾಧ್ಯಮ ಅಕಾಡೆಮಿಯಿಂದ ಪೊನ್ನಪ್ಪ ಹಾಗೂ ಇತರ ಪದಾಧಿಕಾರಿಗಳಿಗೆ ಸರಕಾರ ಒಂದೇ ವಾರದಲ್ಲಿ ಗೇಟ್ ಪಾಸ್ ನೀಡಿದೆ!
ಅಕಾಡೆಮಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ನೇಮಕದಲ್ಲಿ 'ಜಗದೀಶ್'ರ ಮಹಾತ್ಮೆ ಅರಿತ ಸರಕಾರ ತನ್ನ ತಪ್ಪಿನ ಅರಿವಾಗಿ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಮಹತ್ವವಾದ ನಿರ್ಣಯ ಮಾಡಿದೆ.
ಹೀಗಾಗಿ ಪೊನ್ನಪ್ಪ ಎಷ್ಟು ಧಾವಂತದಲ್ಲಿ ಅಧಿಕಾರ ಸ್ವೀಕರಿಸಿದರೋ ಅದೇ ಸ್ಪೀಡಿನಲ್ಲಿ ರಿವರ್ಸ್ ಗೆರ್ನಲ್ಲಿ ಪ್ರೆಸ್ ಕ್ಲಬ್ ಹೋಗಿ, ಎಂಜಿ ರೋಡ್ ಕಡೆ ಹೋಗಿದ್ದಾರೆ. ಪೊನ್ನಪ್ಪ ಅಧಕ್ಷಗಿರಿ ಹೋಗಲು ಮುಖ್ಯವಾಗಿ ಎರಡು ಕಾರಣವೆಂದು ಮೂಲಗಳು ತಿಳಿಸಿವೆ.
ಪೊನ್ನಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷರು ಆಗಿರುವುದು ಮುಖ್ಯಮಂತ್ರಿಯ ಗಮನಕ್ಕೆ ಬಂದಿದೆ. ಒಬ್ಬರಿಗೆ ಎರಡು ಹುದ್ದೆ ಬೇಡ ಎಂದು ನಿರ್ಧರಿಸಿದರಂತೆ. ಮತ್ತೊಂದೆಡೆ ಪೊನ್ನಪ್ಪ ಅವರನ್ನು ಕುರ್ಚಿಲಿ ಕೂರಿಸಲು ಆರ್.ಪಿ.ಜಗದೀಶ್ ಪ್ರಯತ್ನಿಸಿರುವುದು ಗಮನಕ್ಕೆ ಬಂದಿದೆ. ಇದರಿಂದೆ ಮುಂದೆ ತಮ್ಮ ಮೇಲೆ ಮಾಧ್ಯಮ ಮಿತ್ರರು ಮುನಿಸಿಕೊಂಡಾರು ಎಂಬ ಜಾಣತನವನ್ನು ಸದಾನಂದ ಗೌಡರು ತೋರಿಸಿದ್ದಾರೆ. ಇದರಿಂದ ಅಕಾಡೆಮಿಯಿಂದ ಪೋ ಎಂದು ಸಂದೇಶ ನೀಡಲಾಗಿದೆ.
ಪದಾಧಿಕಾರಿಗಳ ನೇಮಕವನ್ನು ರದ್ದು ಮಾಡಲು ಕಾರಣ ಸದಸ್ಯರ ಆಯ್ಕೆಯಲ್ಲಿನ ಗೊಂದಲ ಎಂದು ತಿಳಿದುಬಂದಿದೆ. ಹಿರಿಯ ವರದಿಗಾರ ಶೃಂಗೇಶ್ ಅವರಿಗೆ ನಕ್ಸಲೈಟ್ ಜೊತೆ ಸಂಬಂಧ ಇದೆ ಎನ್ನುವುದೇ ಹಿನ್ನಡೆ ಆಗಿದೆ. ಇನ್ನು ಗಂಗಾಧರ್ ಮೂದಲಿಯಾರ್ ಮತ್ತೊಮ್ಮೆ ಸದಸ್ಯರಾಗಿದ್ದು ಸರಕಾರದ ಗಮನಕ್ಕೆ ಬಂದಿದೆ. ಶಿವರಾಜ್ ತಂಗಡುರ್ ಅಕ್ರಡಿಶನ್ ಸಮಿತಿಯ ಸದಸ್ಯರಾಗಿದ್ದು ಮತ್ತೆ ಅಕಾಡೆಮಿ ಪದಾಧಿಕಾರಿಯಾಗಿದ್ದು ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ.
ಇವೆಲ್ಲ ಕಾರಣಗಳಿಂದ ಯಾವುದೇ ಗೊಂದಲವಿಲ್ಲದಂತೆ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲು ಸರಕಾರ ನಿಶ್ಚಯಿಸಿದೆ.

Thursday 15 September 2011

ಸಮಯ ಸಾಧಕನ ಕಚೇರಿ ಎದುರು ಪ್ರತಿಭಟನೆ ಸಿದ್ಧತೆ

ಸಮಯ ಚಾನಲ್ ಮಾಲಿಕರ ವಿರುದ್ಧ ಪತಿ ಬೇರೊಂದು ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದಕ್ಕೆ, ಪತ್ನಿ ಮಾನಸ ಪುದುಬೆಟ್ಟುವನ್ನು ಕೆಲಸದಿಂದ ಕಿತ್ತುಹಾಕಿದ ಸಮಯ ಸಾಧಕ ಜಿ.ಎನ್. ಮಾಹನ್ ಕಚೇರಿ ಎದುರು ಪ್ರತಿಭಟನೆ ಸಿದ್ಧತೆ ನಡೆದಿದೆ. ಇದಕ್ಕೆ ಹುಬ್ಬಳ್ಳಿಯಲ್ಲಿ ಹಿಂದು ಪತ್ರಿಕೆ ವರದಿಗಾರರಾಗಿದ್ದ ಹಿರಿಯ ಪತ್ರಕರ್ತ ಮದನ್ ಮೋಹನ್ ಕೂಡ ಭಾಗವಹಿಸಲಿದ್ದಾರೆ.
ಈರೀತಿಯ ಒಕ್ಕಣೆ ಇರುವ ಇಮೇಲ್ ಮಾದ್ಯಮ ವಲಯದಲ್ಲಿ ಓಡಾಡುತ್ತಿದೆ. ಅಚ್ಚರಿಯೆಂದರೆ ಈ ಇಮೇಲ್ ಮಾಜಿ ಪತ್ರಕರ್ತ ಸತೀಶ್ ಚಪ್ಪರಿಕೆ ಹೆಸರಿನಲ್ಲಿದೆ. ಎಲ್ಲ ಪತ್ರಕರ್ತರು ಭಾಗವಹಿಸಬೇಕು ಎಂದು ಸತೀಶ್ ಚಪ್ಪರಿಕೆ ಮನವಿ ಮಾಡಿದ್ದಾರೆ.
ಇದೇ ಮೊದಲಲ್ಲ. ಪತ್ರಕರ್ತರು ಸಮಾಜದಲ್ಲಾಗುವ ಅನ್ಯಾಯ, ದೌರ್ಜನ್ಯಗಳ ಕುರಿತು ವರದಿ ಮಾಡುತ್ತಾನೆ. ಆದರೆ ಆತನಿಗೆ ಅನ್ಯಾಯವಾದಾಗ ಧ್ವನಿ ಇಲ್ಲದೆ ಸೊರಗುತ್ತಾನೆ. ಅಂತಹ ಪತ್ರಕರ್ತರ ಪರವಾಗಿ ಮಾಜಿ ಪತ್ರಕರ್ತರು, ಹಿರಿಯ ಪತ್ರಕರ್ತರು ಧ್ವನಿಯಾಗಲಿ. ಜಿ.ಎನ್. ಮೋಹನ್ ನಂತಹ ಆಷಾಢಭೂತಿಗಳ ಬಣ್ಣ ಬಯಲಾಗಲಿ.
ಸತೀಶ್ ಚಪ್ಪರಿಕೆ ಹೆಸರಿನಲ್ಲಿ ಸುತ್ತಾಡುತ್ತಿರುವ ಇಮೇಲ್ ನಿಮ್ಮ ಅವಗಾಹನೆಗಾಗಿ ಇಲ್ಲಿ ನೀಡಲಾಗಿದೆ. ಪ್ರತಿಭಟನೆ ಕೇವಲ ಇಮೇಲ್ ಗೆ ಸೀಮಿತವಾಗದೆ, ಪ್ರತಿಭಟನೆ ನಡೆದರೆ ನೀವೂ ಹೋಗಿ.
Dear friends,
First of all, there is a non-breaking news. Now I am not a journalist. Am proud that I am not journalist.
But, still I am a human being and I strongly feel lot about journalism. So, am writing this mail. After I saw this mail from Madan Mohan Sir, I thought it is better not to keep mum.
I think it is right time raise voice. Today it happened to Suresh Puduvettu family. Tomorrow it may happen to anyone else. I am sorry to say that, the same people who preach about journalism act like HITLER (I think he is better than our so called celebrated, corrupt heroes of Kannada Journalism) once they become head of a news channel or newspaper. Either they have to stop preaching or they have to show guts to back up their own subordinates. In public these cowards (heads) act like they are the saviors of Kannada Journalism. But in reality this is their avatar.
I strongly feel that, all sensitive journalists has to join their hands and at least stage a protest in front of 'Samaya News Channel'. I know nothing will happen from that. At least the people (HITLERS) who are heading that channel will think twice to repeat the same mistake in future.
Come on... if everyone of you say 'YES' , Madan Mohan Sir himself will come to Bangalore and sit with you all.
Regards
Satish Chapparike
NON Journalist, Common Man

Tuesday 13 September 2011

ಮೋಹನ ರೋಗಕ್ಕೆ ಮಾನಸ ಬಲಿ!

ಗಂಡ ಬರೆದ ಲೇಖನಕ್ಕೆ ಹೆಂಡತಿ ಕೆಲಸ ಕಳೆದುಕೊಂಡಿದ್ದಾಳೆ! ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರು ಅಂತಾರಲ್ಲ ಹಾಗೆ.  ಇಂತಹ ಹೇಯ ಕೃತ್ಯ ಎಸಗಿದ್ದು 'ಸಂಪಾದಕೀಯ' ಬ್ಲಾಗ್ ಮೂಲಕ ಸಿಕ್ಕಸಿಕ್ಕವರಿಗೆ ಉಪದೇಶ ನೀಡುವ ಸಮಯ ಚಾನಲ್ ಮಖ್ಯಸ್ಥ ಜಿ.ಎನ್. ಮೋಹನ್. ಸುರೇಶ್ ಪುದುಬೆಟ್ಟು ಎಂಬ ತುಸು ಅಂಗವಿಕಲ ಪತ್ರಕರ್ತನಿದ್ದಾನೆ. ಮೊದಲು ವಿಜಯ ಕನಾFಟಕದಲ್ಲಿದ್ದ. ಜನಶ್ರಿ ಯಾತ್ರೆ ಮುಗಿಸಿ ಈಗ ಉದಯವಾಣಿಯಲ್ಲಿದ್ದಾನೆ. ಈತ ಇತ್ತೀಚೆಗೆ ಸಮಯ ಚಾನಲ್ ಮಾಲಿಕ ಮುರುಗೇಶ್ ನಿರಾಣಿ ವಿರುದ್ಧ ಒಂದು ಲೇಖನ ಬರೆದಿದ್ದ.  ಸುರೇಶ್ ಪುದುಬೆಟ್ಟು ಪತ್ನಿ ಮಾನಸ ಪುದುಬೆಟ್ಟು ಸಮಯ ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದಳು. ಅವಳನ್ನು ಕರೆದ ಜಿ.ಎನ್. ಮೋಹನ, ಮುರುಗೇಶ್ ನಿರಾಣಿ ವಿರುದ್ಧ ಬರೆಯದಂತೆ ನಿನ್ನ ಗಂಡನಿಗೆ ಹೇಳು ಎಂದು ಮಾನಸ ಪುದುಬೆಟ್ಟುಗೆ ಸೂಚಿಸಿದ್ದಾರೆ. ಅದಕ್ಕೆ ಆಕೆ "ಸರ್ ಅವರದ್ದು ಬೇರೆ ಸಂಸ್ಥೆ. ನಾನು ಹಾಗೆ ಹೇಳುವುದು ಸರಿಯಾಗುವುದಿಲ್ಲ" ಎಂದಿದ್ದಾಳೆ.
ಪ್ರಕಟವಾದ ವರದಿಗೆ ನಿರಾಣಿ ಕಡೆಯಿಂದ ಸ್ಪಷ್ಟೀಕರಣ ನೀಡಲಾಗಿತ್ತು. ಅದನ್ನು ಉದಯವಾಣಿ ಚಿಕ್ಕದಾಗಿ ಪ್ರಕಟಿಸಿತ್ತು. ಇದರ ಕುರಿತೂ ಜಿ.ಎನ್. ಮೋಹನ, ಮಾನಸಳ ಮೂಲಕ ಒತ್ತಡ ಹೇರಲು ಯತ್ನಿಸಿದ. ಮಾನಸ ಜಗ್ಗಲಿಲ್ಲ. ಕೆಲಸದಿಂದ ಕಿತ್ತುಹಾಕುವ ಬೆದರಿಕೆ ಹಾಕಲಾಯಿತು. ಆಗಲೂ ಪ್ರಯೋಜನವಾಗದಿದ್ದಾಗ ಮಾನಸಳನ್ನು ಗುಲ್ಬರ್ಗಕ್ಕೆ ವರ್ಗ ಮಾಡಲಾದೆ. ಇದನ್ನು ಖಂಡಿಸಿ ಮಾನಸ ರಾಜಿನಾಮೆ ಸಲ್ಲಿಸಿದ್ದಾಳೆ.
ಬೇರೆ ಪತ್ರಿಕೆಯಲ್ಲಿ ಕೆಲಸ ಮಾಡುವ ಗಂಡ ಲೇಖನಕ್ಕೆ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಆತನ ಪತ್ನಿಯನ್ನು ಕೆಲಸದಿಂದ ಕಿತ್ತು ಹಾಕಿದ ಜಿ.ಎನ್. ಮೋಹನ, ಟಿವಿ ಪರದೆಯ ಮೇಲೆ ನಟ ದರ್ಶನ್ ಪ್ರಕರಣದಲ್ಲಿ ನಟಿ ನಿಖಿತಾಗೆ ೩ ವರ್ಷ ನಿಷೇಧ ಹೇರಿದ್ದು ತಪ್ಪು ಎಂದು ವಾದಿಸುತ್ತಿದ್ದ. ನಾಚಿಕೆಗೇಡು.
ಸಾಕಷ್ಟು ಪತ್ರಕರ್ತರ ದಂಪತಿಗಳು ಹೀಗೆ ಬೇರೆ ಬೇರೆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸ್ಥಿತಿಯನ್ನು ಮಾಲಿಕರೂ ಅರ್ಥಮಾಡಿಕೊಂಡಿದ್ದಾರೆ. ಆದರೆ ಜಿ.ಎನ್. ಮೋಹನನಂತಹ ಕೀಳು ಮನಸ್ಸಿನ ಪತ್ರಕರ್ತರು ಮಾತ್ರ ಮಾಲಿಕರನ್ನು ಮೆಚ್ಚಿಸಲು ಇಂತಹ ಕೆಲಸ ಮಾಡುತ್ತಾರೆ.

Tuesday 26 July 2011

'ಸಮಯ' ಸಾಧಕರಾಗಲಿದ್ದಾರೆಯೆ ಮೋಹನ್?

ಶಶಿಧರ ಭಟ್ಟರಿಗೆ ಎಲ್ಲು ನಿಲ್ಲಲಾಗುತ್ತಿಲ್ಲ. ಸಮಯದಲ್ಲೂ ಅವರ 'ಅವಧಿ' ಮುಗಿಯುತ್ತಿರುವ ಸೂಚನೆ ಕಾಣುತ್ತಿದೆ. ಅದಕ್ಕೆ ಹೊಸ ಮುಖ್ಯಸ್ಥರಾಗಿ ಜಿ.ಎನ್. ಮೋಹನ್ ಬರಲಿದ್ದಾರೆ ಎಂಬ ಸುದ್ದಿಯನ್ನು ಅವರು ಮತ್ತು ಅವರ ಚೇಲಾ ನಡೆಸುತ್ತಾರೆ ಎನ್ನಲಾಗುವ ಬ್ಲಾಗ್ ನಲ್ಲಿ ಬರೆಯಲಾಗಿದೆ.
 
ಅವರಂತಹ ಸಮಯ ಸಾಧಕ ಖಂಡಿತವಾಗಿ ಸಿಗಲಾರರು!
ಜಿ.ಎನ್. ಮೋಹನ್ ಎಡಪಂಥೀಯ. ಸಂಘ ಪರಿವಾರವನ್ನು, ಬಿಜೆಪಿಯನ್ನು ಟೀಕಿಸುತ್ತಿದ್ದರು, ಆಮೇಲೆ ಮಾಡಿದ್ದೇನು? ಬಿಜೆಪಿ ಸರಕಾರದ ಹಲವಾರು ಪುಸ್ತಕಗಳ ಗುತ್ತಿಗೆ ಪಡೆದರು. ಅವರು ಹಲವು ಬಾರಿ ವಿಶ್ವೇಶ್ವರ ಭಟ್ಟರನ್ನು ಮತ್ತು ವಿಜಯ ಕರ್ನಾಟಕವನ್ನು ಟೀಕಿಸಿದ್ದರು. 

ಈ ಮಧ್ಯದಲ್ಲಿ ಅವರು ಬೆಳೆಸಲು ನೋಡಿದ ಮೇಫ್ಲವರ್ ಗಿಡ ಬಾಡಿಹೋಯಿತು. ಅದನ್ನು ದೊಡ್ಡಮೊತ್ತಕ್ಕೆ ಮಾರಿದೆ ಎಂದು ಜನರ ಕಿವಿಯ ಮೇಲೆ ಹೂ ಇಟ್ಟರು.

ಯಾರೂ ಕರೆದು ಮಾತನಾಡಿಸದ ಸ್ಥಿತಿಯಲ್ಲಿದ್ದ ಮೋಹನ್ ಗೆ ವಿಶ್ವೇಶ್ವರ ಭಟ್ಟರು ಕರೆದು 'ಮೀಡಿಯಾ ಮಿರ್ಚಿ' ಅಂಕಣ ನೀಡಿದರು. ಕೆಲವೇ ದಿನದಲ್ಲಿ ಮೋಹನ್ ಹಿರಿಯ ಅಂಕಣಕಾರರು ಎಂದು ಹಾಕಿಕೊಳ್ಳಲಾರಂಭಿಸಿದರು.

ಅಂಕಣ ಬರೆಯುವಾಗ ಹಿಂದೆ ಭಟ್ಟರನ್ನು ಮತ್ತು ಪತ್ರಿಕೆಯನ್ನು ಟೀಕಿಸಿದ್ದನ್ನು ಮರೆತು ಪ್ರತಿ ಶನಿವಾರ ತಮಗಾಗದವರ ವಿರುದ್ಧ ಮಿರ್ಚಿ ಅರೆಯಲಾರಂಭಿಸಿದರು. ಅಂಕಣದಲ್ಲಿ ಬರೆದದ್ದು ಬರೀ ಆತ್ಮರತಿ. ಇದನ್ನು ಗಮನಿಸಿದರೂ ಭಟ್ಟರು ಈ ಆತ್ಮರತಿಗೊಂದು ಗತಿ ಕಾಣಿಸುವ ಕಾಯಕಕ್ಕೆ ಕೈ ಹಾಕಲಿಲ್ಲ. ಮೋಹನ್ ಅವರ ಸಾಧನೆ ಏನು ಎಂಬುದನ್ನು ಮಂಗಳೂರು ಜನರ ಬಳಿ ಕೇಳಬೇಕು. ಆತ್ಮರತಿಯ ಅಂಕಣದಲ್ಲಿ ಅದರ ವಿವರಗಳು ಬಾರದಿರುವುದು ಅಚ್ಚರಿ.
 
ಈಗ ಅದೇ ಸಮಯ ಸಾಧಕತನವನ್ನು ಮುಂದುವರಿಸಿದ್ದಾರೆ. ಬಿಜೆಪಿಯನ್ನು ಸದಾ ಟೀಕಿಸುತ್ತಿದ್ದ ಅವರು ಬಿಜೆಪಿಯ ಸಚಿವರೊಬ್ಬರ ಚಾನಲ್ ಮುಖ್ಯಸ್ಥರಾಗಲು ಕೋಟು ಹಾಕಿಕೊಂಡು ರೆಡಿಯಾಗಿ ನಿಂತಿದ್ದಾರೆ. ಸಚಿವ ನಿರಾಣಿಗೆ ಇವರಿಗಿಂತ ದೊಡ್ಡ ಸಮಯ ಸಾಧಕರು ಸಿಗಲು ಸಾಧ್ಯವೇ?

ಈಗಲಾದರೂ ಅವರು ಹೆಸರನ್ನು ಸಾರ್ಥಕಪಡಿಸಿಕೊಳ್ಳುತ್ತಾರಾ? ಕಾದುನೋಡೋಣ.

Thursday 21 July 2011

ಕೆಪಿಗೆ ರಾಜೇವ್ ಭೇಟಿ

ಹೊಸ ಮಾಲಿಕ, ರಾಜ್ಯಸಭೆ ಸದಸ್ಯ ರಾಜೇವ್ ಚಂದ್ರಶೇಖರ್ ಮಂಗಳವಾರ ಕನ್ನಡಪ್ರಭ ಕಚೇರಿಗೆ ಮೊದಲ ಭೇಟಿ ನೀಡಿದ್ದಾರೆ. ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಲಾಭದ ಮಾತು ಆಡದಿರುವುದು ಕೆಪಿ ಸಿಬ್ಬಂದಿಯಲ್ಲಿ ಅಚ್ಚರಿ ಮೂಡಿಸಿದೆ.
 
"ಕನ್ನಡಪ್ರಭ ಕರ್ನಾಟಕದ ಪ್ರಭಾವಿ, ಪ್ರಾಮಾಣಿಕ ಮತ್ತು ಧೈರ್ಯ ಹೊಂದಿರುವ ಪತ್ರಿಕೆಯಾಗಬೇಕು. ಪ್ರಸಾರ, ಜಾಹೀರಾತಿನಲ್ಲಿ ನಂ ೧ ಆಗದಿದ್ದರು ತೊಂದರೆಯಿಲ್ಲ. ಜನ ಇಷ್ಟಪಡುವ ಪತ್ರಿಕೆಯಾಗಬೇಕು. ನಾನು ರಾಜಕೀಯ ಉದ್ದೇಶಕ್ಕಾಗಿ ಪತ್ರಿಕೆ ಖರೀದಿಸಿದೆ. ನನ್ನ ಉದ್ಯಮದ ಏಳ್ಗೆಗೆ ಬಳಸಿಕೊಳ್ಳುವ ಉದ್ದೇಶದಿಂದ ಪತ್ರಿಕೆ ಖರೀದಿಸಿದೆ ಎಂದೆಲ್ಲ ಹೇಳಲಾಗುತ್ತಿದೆ. ಆದರೆ ನನ್ನ ಉದ್ಯಮಕ್ಕೆ ಅಥವಾ ನನ್ನ ರಾಜಕೀಯಕ್ಕೆ ಮತ್ತು ಪತ್ರಿಕೆಗೆ ಸಂಬಂಧವಿಲ್ಲ" ಎಂದು ಹೇಳಿರುವುದು ಕೆಪಿ ಸಿಬ್ಬಂದಿಯಲ್ಲಿ ಅಚ್ಚರಿಗೆ ಕಾರಣವಾಗಿದೆ.

ಸಾಮನ್ಯವಾಗಿ ಮಾಲಿಕರು ಲಾಭದ ಮಾತಾಡುತ್ತಾರೆ. ಈ ವರ್ಷ ಈಷ್ಟು ಟಾರ್ಗೆಟ್ ಇದೆ. ಅಷ್ಟು ಲಾಭ ಮಾಡಬೇಕೆಂದುಕೊಂಡಿದ್ದೇವೆ ಎಂದೆಲ್ಲ ಮಾತನಾಡುತ್ತಾರೆ. ಆದರೆ ರಾಜೀವ್ ಚಂದ್ರಶೇಖರ್ ಮೊದಲಬಾರಿಗೆ ಬೇರೆ ಧಾಟಿಯಲ್ಲಿ ಮಾತನಾಡಿದ್ದಾರಂತೆ.

ನೋಡೋಣ ಏನೇನ್ ಮಾಡ್ತಾರೆ ಅಂತ!

ಮೀಡಿಯಾ ಮನ ಮೊಬೈಲ್ ನಲ್ಲಿ!

ಬದಲಾವಣೆ, ಓದುಗರ ಅಗತ್ಯಗಳಿಗೆ ತಕ್ಕಂತೆ ಮೀಡಿಯಾ ಮನ ಬದಲಾಗಿದೆ. ಕೆಲಬು ದಿನದಿಂದ ಮೀಡಿಯಾ ಮನ ಮೊಬೈಲ್ ಫ್ರೆಂಡ್ಲಿಯಾಗಿದೆ. ನೀವು ನಿಮ್ಮ ಮೊಬೈಲ್ ನಲ್ಲಿ ಮೀಡಿಯಾ ಮನ ಬ್ಲಾಗನ್ನು ಸುಲಭವಾಗಿ ನೋಡಬಹುದು. ಬ್ಲಾಗ್ ಸ್ಪಾಟ್ ನವರು ಈ ಅವಕಾಶ ಒದಗಿಸುವ ಮೂಲಕ ಆಧುನಿಕ ತಂತ್ರಜ್ಞಾನಕ್ಕೆ ತಕ್ಕ ಬದಲಾವಣೆ ಮಾಡಿದ್ದಾರೆ.
 
ಈ ತಂತ್ರಜ್ಞಾನದಿಂದ ನೀವು ನಿಮ್ಮ ಮೊಬೈಲ್ ನಲ್ಲಿ ಮೀಡಿಯಾ ಮನ ಬ್ಲಾಗ್ ನೋಡಬಹುದು. ಆಗ ಪ್ರತಿ ಪೋಸ್ಟ್ ನ ಸ್ವಲ್ಪಭಾಗ ಮಾತ್ರ ಕಾಣಿಸುತ್ತದೆ. ಯಾವುದನ್ನು ಓದಬೇಕೊ ಅದನ್ನು ಕ್ಲಿಕ್ ಮಾಡಿದರೆ ಅದರ ಪೂರ್ಣಪಾಠ ನೋಡಬಹುದು.

ಇನ್ನು ನೀವು ಎಲ್ಲೇ ಇರಿ ಮೀಡಿಯಾ ಮನ ನಿಮ್ಮೊಂದಿಗಿರುತ್ತದೆ.

Monday 18 July 2011

ನೆರಳೇ ಆ ಮರಕ್ಕೆ ಉರುಳಾಯಿತು

ವಿಜಯ ಕರ್ನಾಟಕ ಪತ್ರಿಕೆ ಪರಿಸರದ ಬಗ್ಗೆ ಕಾಳಜಿ ತೋರುತ್ತದೆ. ಸ್ಯಾಂಕಿ ರಸ್ತೆಯಲ್ಲಿ ಮರ ಕಡಿಯುವ ಬಗ್ಗೆ ವಿಸ್ತ್ರತ ವರದಿ ಪ್ರಕಟಿಸುತ್ತದೆ. ಆದರೆ ಒಬ್ಬ ವ್ಯಕ್ತಿಯ ಮಾತುಕೇಳಿ, ಮೂಢನಂಬಿಕೆಗೆ ಕಟ್ಟುಬಿದ್ದು ಇನ್ನೇನು ಗೊನೆ ಬಿಡಬೇಕಿದ್ದ ಬಾಳೇಮರವನ್ನು ಕಡಿಸಿಹಾಕಿದೆ!
 
ಬಾಳೆಮರ ಕಡಿದಿದ್ದು ಸಣ್ಣ ವಿಷಯ. ಆದರೆ ಅದನ್ನು ಯಾಕೆ ಕಡಿದರು ಎ‌ಂಬುದು ದೊಡ್ಡ ವಿಷಯ. ನಡೆದ ಘಟನೆ ಹೀಗಿದೆ.

ವಿಜಯ ಕರ್ನಾಟಕದ ಚೀಪ್ ರಿಪೋರ್ಟರ್ ಎಲ್. ಪ್ರಕಾಶ ಕಾರನ್ನು ವಿಜಯ ಕರ್ನಾಟಕದ ಕಚೇರಿ ಹೊರಗೆ ನಿಲ್ಲಿಸಿದ್ದರು. ಅಲ್ಲೇ ಸಮೀಪದಲ್ಲಿದ್ದ ತೆಂಗಿನ ಮರದಿಂದ ಕಾಯಿ ನೇರವಾಗಿ ನಿಲ್ಲಿಸಿದ್ದ ಕಾರಿನ ಬಾನೆಟ್ ಮೇಲೆ ಬಿದ್ದಿದೆ. ಬಾನೆಟ್ ನುಜ್ಜುಗುಜ್ಜಾಗಿದೆ. ಇದನ್ನು ನೋಡಿ ಎಲ್. ಪ್ರಕಾಶ್ ಗೆ ಎದೆ ಒಡೆದಂತಾಗಿದೆ. ತೆಂಗಿನ ಮರಕ್ಕೆ ಶಾಪ ಹಾಕುತ್ತಿದ್ದರು. ಶಾಪ ಕೇಳಿದ್ದರಿಂದಲೋ ಏನೊ ನೋಡ ನೋಡುತ್ತಿದ್ದಂತೆ ಇನ್ನೊಂದು ತೆಂಗಿನಕಾಯಿ ರೊಂಯ್ಯನೆ ಬಂದು ಕಾರಿನ ಮೇಲೆ ಬಿದ್ದಿದೆ. ಎದುರಿನ ಗಾಜು ಚೂರು ಚೂರು.
ಬಾಳೇ ಗಿಡದ ದುರದೃಷ್ಟ!
ಆದರೆ ತೆಂಗಿನಕಾಯಿ ಕಾರಿನ ಮೇಲೆ ಬಿದ್ದಿದ್ದಕ್ಕೆ ಎಲ್. ಪ್ರಕಾಶ್ ದೂರಿದ್ದು ಬಾಳೇಗಿಡವನ್ನು!
ಇದೇ ವಿಶೇಷ!

ಕಾರಿನ ಮೇಲೆ ತೆಂಗಿನಕಾಯಿ ಬಿದ್ದಿದ್ದು, ವಿಜಯ ಕರ್ನಾಟಕದ ಪ್ರಸಾರಸಂಖ್ಯೆ ಕಡಿಮೆಯಾಗುತ್ತಿರುವುದು, ವರದಿಗಾರರಿಗೆ ವಿಶೇಷ ವರದಿಗಳು ಸಿಗದಿರುವುದು ಇದಕ್ಕೆಲ್ಲ ಈ ಬಾಳೇಗಿಡದ ನೆರಳು ವಿಜಯ ಕರ್ನಾಟಕದ ಕಚೇರಿ ಮೇಲೆ ಬೀಳುತ್ತಿರುವುದೇ ಕಾರಣ. ಆದ್ದರಿಂದ ಆ ಬಾಳೇಮರ ಕಡಿಯಬೇಕು ಎಂದು ಆಡಳಿತ ಮಂಡಳಿ ತಲೆಗೆ ತುಂಬಿದ್ದಾರೆ. ತಾನೇ ಮುಂದೆನಿಂತು ಬಾಳೇಮರ ಕಡಿಸಿದ್ದಾರೆ!

ಬಿದ್ದಿದ್ದು ತೆಂಗಿನಕಾಯಿ. ಒಣಗಿದ ಕಾಯಿ ತೆಗೆಸದೆ ಇದ್ದುದರಿಂದ ಕಾಯಿ ಬಿದ್ದಿದೆ. ಎಲ್.ಪ್ರಕಾಶ್ ಸಿಟ್ಟು ಬಂದು ತೆಂಗಿನ ಮರ ತೆಗೆಸಬಹುದಿತ್ತು. ಕಾಯಿ ತೆಗೆಯದವರನ್ನು ತರಾಟೆಗೆ ತೆಗೆದುಕೊಳ್ಳಬಹುದಿತ್ತು. ಅದೆಲ್ಲ ಬಿಟ್ಟು ಏನೂ ಮಾಡದ ಬಾಳೇಗಿಡಕ್ಕೆ ಕೊಡಲಿಯೇಟು ಹಾಕಿಸಿದ್ದಾರೆ. ಸಾಲದ್ದಕ್ಕೆ ವಿಶೇಷ ವರದಿಗಳು ಸಿಗದಿರುವುದು, ಪ್ರಸಾರಸಂಖ್ಯೆ ಕುಸಿಯುತ್ತಿರುವುದಕ್ಕೂ ಬಾಳೇಗಿಡದ ನೆರಳನ್ನೇ ಹೊಣೆಯಾಗಿಸಿದ್ದಾರೆ!

ಪತ್ರಕರ್ತರ ಮೌಢ್ಯಕ್ಕೆ ಬೆಂಕಿಹಾಕ!