Tuesday 26 July 2011

'ಸಮಯ' ಸಾಧಕರಾಗಲಿದ್ದಾರೆಯೆ ಮೋಹನ್?

ಶಶಿಧರ ಭಟ್ಟರಿಗೆ ಎಲ್ಲು ನಿಲ್ಲಲಾಗುತ್ತಿಲ್ಲ. ಸಮಯದಲ್ಲೂ ಅವರ 'ಅವಧಿ' ಮುಗಿಯುತ್ತಿರುವ ಸೂಚನೆ ಕಾಣುತ್ತಿದೆ. ಅದಕ್ಕೆ ಹೊಸ ಮುಖ್ಯಸ್ಥರಾಗಿ ಜಿ.ಎನ್. ಮೋಹನ್ ಬರಲಿದ್ದಾರೆ ಎಂಬ ಸುದ್ದಿಯನ್ನು ಅವರು ಮತ್ತು ಅವರ ಚೇಲಾ ನಡೆಸುತ್ತಾರೆ ಎನ್ನಲಾಗುವ ಬ್ಲಾಗ್ ನಲ್ಲಿ ಬರೆಯಲಾಗಿದೆ.
 
ಅವರಂತಹ ಸಮಯ ಸಾಧಕ ಖಂಡಿತವಾಗಿ ಸಿಗಲಾರರು!
ಜಿ.ಎನ್. ಮೋಹನ್ ಎಡಪಂಥೀಯ. ಸಂಘ ಪರಿವಾರವನ್ನು, ಬಿಜೆಪಿಯನ್ನು ಟೀಕಿಸುತ್ತಿದ್ದರು, ಆಮೇಲೆ ಮಾಡಿದ್ದೇನು? ಬಿಜೆಪಿ ಸರಕಾರದ ಹಲವಾರು ಪುಸ್ತಕಗಳ ಗುತ್ತಿಗೆ ಪಡೆದರು. ಅವರು ಹಲವು ಬಾರಿ ವಿಶ್ವೇಶ್ವರ ಭಟ್ಟರನ್ನು ಮತ್ತು ವಿಜಯ ಕರ್ನಾಟಕವನ್ನು ಟೀಕಿಸಿದ್ದರು. 

ಈ ಮಧ್ಯದಲ್ಲಿ ಅವರು ಬೆಳೆಸಲು ನೋಡಿದ ಮೇಫ್ಲವರ್ ಗಿಡ ಬಾಡಿಹೋಯಿತು. ಅದನ್ನು ದೊಡ್ಡಮೊತ್ತಕ್ಕೆ ಮಾರಿದೆ ಎಂದು ಜನರ ಕಿವಿಯ ಮೇಲೆ ಹೂ ಇಟ್ಟರು.

ಯಾರೂ ಕರೆದು ಮಾತನಾಡಿಸದ ಸ್ಥಿತಿಯಲ್ಲಿದ್ದ ಮೋಹನ್ ಗೆ ವಿಶ್ವೇಶ್ವರ ಭಟ್ಟರು ಕರೆದು 'ಮೀಡಿಯಾ ಮಿರ್ಚಿ' ಅಂಕಣ ನೀಡಿದರು. ಕೆಲವೇ ದಿನದಲ್ಲಿ ಮೋಹನ್ ಹಿರಿಯ ಅಂಕಣಕಾರರು ಎಂದು ಹಾಕಿಕೊಳ್ಳಲಾರಂಭಿಸಿದರು.

ಅಂಕಣ ಬರೆಯುವಾಗ ಹಿಂದೆ ಭಟ್ಟರನ್ನು ಮತ್ತು ಪತ್ರಿಕೆಯನ್ನು ಟೀಕಿಸಿದ್ದನ್ನು ಮರೆತು ಪ್ರತಿ ಶನಿವಾರ ತಮಗಾಗದವರ ವಿರುದ್ಧ ಮಿರ್ಚಿ ಅರೆಯಲಾರಂಭಿಸಿದರು. ಅಂಕಣದಲ್ಲಿ ಬರೆದದ್ದು ಬರೀ ಆತ್ಮರತಿ. ಇದನ್ನು ಗಮನಿಸಿದರೂ ಭಟ್ಟರು ಈ ಆತ್ಮರತಿಗೊಂದು ಗತಿ ಕಾಣಿಸುವ ಕಾಯಕಕ್ಕೆ ಕೈ ಹಾಕಲಿಲ್ಲ. ಮೋಹನ್ ಅವರ ಸಾಧನೆ ಏನು ಎಂಬುದನ್ನು ಮಂಗಳೂರು ಜನರ ಬಳಿ ಕೇಳಬೇಕು. ಆತ್ಮರತಿಯ ಅಂಕಣದಲ್ಲಿ ಅದರ ವಿವರಗಳು ಬಾರದಿರುವುದು ಅಚ್ಚರಿ.
 
ಈಗ ಅದೇ ಸಮಯ ಸಾಧಕತನವನ್ನು ಮುಂದುವರಿಸಿದ್ದಾರೆ. ಬಿಜೆಪಿಯನ್ನು ಸದಾ ಟೀಕಿಸುತ್ತಿದ್ದ ಅವರು ಬಿಜೆಪಿಯ ಸಚಿವರೊಬ್ಬರ ಚಾನಲ್ ಮುಖ್ಯಸ್ಥರಾಗಲು ಕೋಟು ಹಾಕಿಕೊಂಡು ರೆಡಿಯಾಗಿ ನಿಂತಿದ್ದಾರೆ. ಸಚಿವ ನಿರಾಣಿಗೆ ಇವರಿಗಿಂತ ದೊಡ್ಡ ಸಮಯ ಸಾಧಕರು ಸಿಗಲು ಸಾಧ್ಯವೇ?

ಈಗಲಾದರೂ ಅವರು ಹೆಸರನ್ನು ಸಾರ್ಥಕಪಡಿಸಿಕೊಳ್ಳುತ್ತಾರಾ? ಕಾದುನೋಡೋಣ.

9 comments:

Anonymous said...

yalla hange shiva..

jagattu hege munde hogtide..

praamaanikaru yalli iddare alle iddare.. arakkerade murakkiliyade alle nintiddare..

hucchapatte matado jana yalla channle
olle salary ge kelasa madtidare..

videsahaddali heccina odige hogtini andorella EDITOR cum CEO agidare..

hege jagattu....

Anonymous said...

shashidhara bhattara bole swabhava avarige innondu sankashtavannu tandoddide anta kaanisutte.
mohanara "chela" srinivasa gowdaru bhattara vishwasa galisi, may flower media dinda tamma innitara "shsishya"rannu obbobbarante samyakke tandiddu guttenalla. konege, tamma gurugalaada GNM avaranne channel head aagi koorisiddu gowdara "talent"ige saakshi. innu idee media mirchi team samyadalli kaanisidare ashcharyavenilla.
bellagiruvudella haalu endu nambuva bhattarigu, bennige choori chuchchuva gowdarigu, idakkella kalshavittante shishyana moolaka channel head aagiruva "two-faced" mohan avarigu sariyaage ide bidi. liquor lobby ya sachin vakkaligara channel kattalu horatiddare ansutte.
banda 1 vaaradalli channel head annu odisida "gowravakke" paatraraagiruva gowdarige nijavaagiyu hats-off. jeevanadalli bahala munde hogteera bidri!
idellara madhye bhattara chamber innoo idda haageye ide. aadare avaru vaapassu hoguva saadhyate kadimeye.
- Raghavendra Shahapura

Anonymous said...

ಈ ಜಿ ಎನ್ ಮೋಹನ್ ಅನ್ನೋ ವ್ಯಕ್ತಿ ಕನ್ನಡ ಪತ್ರಿಕೋದ್ಯಮದ ಅತ ವಿಫಲ ವ್ಯಕ್ತಿ. ಇವನ ಮೇಫ್ಲವರ್‍ ಅನ್ನೋ ಕಂಪೆನಿಯೂ ಬಿಟ್ಟಿ ಬ್ಲಾಗುಗಳನ್ನೇ ಅವಲಂಬಿಸಿದ್ದರೂ ದೊಡ್ಡ ಇಂಟರ್‌ನೆಟ್ ಮಾಧ್ಯಮ ಅನ್ನೋ ಬಿಂಬ ಮೂಡಿಸಲು ಈತ ಯತ್ನಿಸಿದ. ಉಪ್ಪು ತಿಂದ ಸಂಸ್ಥೆಗಳೆಲ್ಲನ್ನೂ ಹೀಗಳೆಯುವ ದ್ರೋಹಿ ಕೆಲಸಗಾರ ಈತ. ಹಲವಾರು ವರ್ಷ ಅನ್ನ ಕೊಟ್ಟ, ಕ್ಯೂಬಾಕ್ಕೂ ಕಳಿಸಿದ ಪ್ರಜಾವಾಣಿಯನ್ನು ಬೈದ. ಈಟಿವಿಯಲ್ಲಿ ಮತ್ತೆ ಕೆಲಸ ಸಿಕ್ಕರೆ ಎಂದು ಬೈಯುವುದಕ್ಕೆ ಹಿಂಜರಿದ.
ಇಂಥ ಪತ್ರಕರ್ತರು ಇದ್ದೂ ಒಂದೇ, ಇಲ್ಲದಿದ್ದರೂ ಒಂದೇ. ಎಷ್ಟು ಕಾಲಾ'ವಧಿ' ಚರ್ಚೆ ಮಾಡಿದರೂ ಅದೆಲ್ಲ ಸಮಯ ವೇಸ್ಟ್. ಸಮಯಸಾಧಕರನ್ನು ದೂರ ಇಡಲು ಯಾವ ಮ್ಯಾನೇಜ್‌ಮೆಂಟ್‌ ಕೂಡಾ ಮನಸ್ಸು ಮಾಡದಿರುವುದು ದುರ್ದೈವ!!!

Manik Bhure said...

Samaya Sadhak alla. Samayad sadupyog maduvavaru. hosadannu hudukuvavaru
-Manik Bhure, Basavakalyan

Anonymous said...

yakri raghavendra shahapura nivu bhatru chela anisutte! nimge bejarragidre swayam krushi ge hogi yakandre, niv chennagi bhatru shishya kelsa madtira( bereyavara hotte mele hodiyo kelsa)

Anonymous said...

Mangaluurina aravinda navada Kannadaprabhakke kaalittiddarante hauda?

Anonymous said...

ಎಲ್ಲರೂ ಅಷ್ಟರವರೇ... ವಿಶ್ವೇಶ್ವರ ಭಟ್ ಕನ್ನಡಪ್ರಭಕ್ಕೆ ಬರಲು ಅನಂತಕುಮಾರ ಮೂಲಕ, ಅಡ್ವಾಣಿಯಿಂದ ಒತ್ತಡ ತಂದಿಲ್ವಾ. ರಾಜಕೀಯಕ್ಕಿಂತ ಪತ್ರಿಕೋಧ್ಯಮ ಭಿನ್ನವಾಗಿದೆಯೇ... ನನಗೆ ಇನ್ನಷ್ಟು ದಿನ ಕೆಲಸ ಇಲ್ಲದೆ ಇರಬಲ್ಲೆ ಆದರೆ, ಈ ರೀತಿ ಕೀಳು ರಾಜಕೀಯ ಮಾಡಲಾರೆ. ಎಂದು ಶಿವಸುಬ್ರಹ್ಮಣ್ಯ ಹೇಳುತ್ತಿದ್ದಾರೆ. ಆದರೆ, ಶಿವಸುಬ್ರಹ್ಮಣ್ಯ ಕೂಡ ಸಂಪಾದಕರಾಗುವಾಗ ಲಾಬಿ ಮಾಡಿದ್ದರು ಎನ್ನುವ ಆರೋಪ ಇದೆ.ಅದು ಎಷ್ಟು ನಿಜವೋ ಗೊತ್ತಿಲ್ಲ. ಅಂತವರಿಗೇ ಕಾಲ ಈಗ.

Anonymous said...

ಸೆಕ್ಸ್ ಪೋರ್ಟಲ್ thatskannada ಬಗ್ಗೆನೂ ಬರೆಯಿರಿ

Anonymous said...

ಯಾಕ್ರಿ ಸ್ವಾಮಿ ಇತ್ತೀಚೆಗೆ ಯಾವ ಹೊಸ ಸುದ್ದಿಯನ್ನೂ ಬರೆದಿಲ್ಲ. ಮಾಧ್ಯಮಜಗತ್ತಿನಲ್ಲಿ ಏನೆಲ್ಲಾ ನಡೀತಿದೆ. ನಿಮಗೆ ಏನೂ ಗೊತ್ತಾಗ್ತಿಲ್ವಾ