Thursday, 21 July 2011

ಕೆಪಿಗೆ ರಾಜೇವ್ ಭೇಟಿ

ಹೊಸ ಮಾಲಿಕ, ರಾಜ್ಯಸಭೆ ಸದಸ್ಯ ರಾಜೇವ್ ಚಂದ್ರಶೇಖರ್ ಮಂಗಳವಾರ ಕನ್ನಡಪ್ರಭ ಕಚೇರಿಗೆ ಮೊದಲ ಭೇಟಿ ನೀಡಿದ್ದಾರೆ. ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಲಾಭದ ಮಾತು ಆಡದಿರುವುದು ಕೆಪಿ ಸಿಬ್ಬಂದಿಯಲ್ಲಿ ಅಚ್ಚರಿ ಮೂಡಿಸಿದೆ.
 
"ಕನ್ನಡಪ್ರಭ ಕರ್ನಾಟಕದ ಪ್ರಭಾವಿ, ಪ್ರಾಮಾಣಿಕ ಮತ್ತು ಧೈರ್ಯ ಹೊಂದಿರುವ ಪತ್ರಿಕೆಯಾಗಬೇಕು. ಪ್ರಸಾರ, ಜಾಹೀರಾತಿನಲ್ಲಿ ನಂ ೧ ಆಗದಿದ್ದರು ತೊಂದರೆಯಿಲ್ಲ. ಜನ ಇಷ್ಟಪಡುವ ಪತ್ರಿಕೆಯಾಗಬೇಕು. ನಾನು ರಾಜಕೀಯ ಉದ್ದೇಶಕ್ಕಾಗಿ ಪತ್ರಿಕೆ ಖರೀದಿಸಿದೆ. ನನ್ನ ಉದ್ಯಮದ ಏಳ್ಗೆಗೆ ಬಳಸಿಕೊಳ್ಳುವ ಉದ್ದೇಶದಿಂದ ಪತ್ರಿಕೆ ಖರೀದಿಸಿದೆ ಎಂದೆಲ್ಲ ಹೇಳಲಾಗುತ್ತಿದೆ. ಆದರೆ ನನ್ನ ಉದ್ಯಮಕ್ಕೆ ಅಥವಾ ನನ್ನ ರಾಜಕೀಯಕ್ಕೆ ಮತ್ತು ಪತ್ರಿಕೆಗೆ ಸಂಬಂಧವಿಲ್ಲ" ಎಂದು ಹೇಳಿರುವುದು ಕೆಪಿ ಸಿಬ್ಬಂದಿಯಲ್ಲಿ ಅಚ್ಚರಿಗೆ ಕಾರಣವಾಗಿದೆ.

ಸಾಮನ್ಯವಾಗಿ ಮಾಲಿಕರು ಲಾಭದ ಮಾತಾಡುತ್ತಾರೆ. ಈ ವರ್ಷ ಈಷ್ಟು ಟಾರ್ಗೆಟ್ ಇದೆ. ಅಷ್ಟು ಲಾಭ ಮಾಡಬೇಕೆಂದುಕೊಂಡಿದ್ದೇವೆ ಎಂದೆಲ್ಲ ಮಾತನಾಡುತ್ತಾರೆ. ಆದರೆ ರಾಜೀವ್ ಚಂದ್ರಶೇಖರ್ ಮೊದಲಬಾರಿಗೆ ಬೇರೆ ಧಾಟಿಯಲ್ಲಿ ಮಾತನಾಡಿದ್ದಾರಂತೆ.

ನೋಡೋಣ ಏನೇನ್ ಮಾಡ್ತಾರೆ ಅಂತ!

4 comments:

Anonymous said...

ಸುಮಾರು 11 ವರ್ಷಗಳ ಕಾಲ ದುಡಿದ ವಿಜಯ ಕರ್ನಾಟಕದಿಂದ ದೂರವಾಗುತ್ತಿದ್ದೇನೆ. ಕಂಪನಿ ನನ್ನಿಂದ ಬಲವಂತದ ಡೈವೋರ್ಸ್ ಕೇಳಿದೆ.ನಕ್ಸಲ್, ಮಂಗಳೂರು ಟೆರರ್, ಅಂಡರ್ ವಲ್ಡ್, ಸರಣಿ ಹಂತಕ ಮೋಹನ, ಬೀದಿ ಮಕ್ಕಳ ಕುರಿತ ಸಾಮಾಜಿಕ ಕಳಕಳಿ, ಬುಡಕಟ್ಟು ಜನಾಂಗ ಕೊರಗರ ಬಗ್ಗೆ ಸರಣಿ ಲೇಖಗಳಿಗೆ ವಡ್ಡರ್ಸೆ, ಗ್ರಾಮೀಣ ವರದಿಗಾರಿಕೆಗೆ ಪ.ಗೋ. ಇತ್ತೀಚೆಗೆ ಮಾನವೀಯ ವರದಿಗಳಿಗೆ ಗವರ್ನರ್ ಕೈಯಲ್ಲಿ ಚರಕ ಅವಾರ್ಡ್ ಕೂಡಾ ಪಡೆದಿದ್ದೆ. ವಿಮಾನ ದುರಂತ ವರದಿಗಾಗಿ ಸಂಪಾದಕರಿಂದ ಶಹಬ್ಬಾಸ್ ಪತ್ರ, ಸಿಇಒ ರಿಂದ ವಿಶೇಷ ಪ್ರಶಂಸಾಪತ್ರ ಬಂದ ಆರೇ ತಿಂಗಳಲ್ಲಿ ಗಂಗಾವತಿಗೆ ವರ್ಗಾವಣೆ ಮಾಡಿಸಿದರು. ಸಂಪಾದಕರಿಂದ ಶಿಫಾರಸು, ಸಿ ಇ ಒ ನಿಂದ ಮೆಚ್ಚುಗೆ ಪತ್ರ ನೀಡಿದ್ದರೂ ವಿಶ್ವೇಶ್ವರ ಭಟ್ಟರು ವಿಕೆ ಬಿಟ್ಟ ಬಳಿಕ ನನಗೆ ವರ್ಗಾವಣೆ ಪತ್ರ ಕೊಟ್ಟರು. ಗಂಗಾವತಿಯಲ್ಲಿ ನನಗೆ ಆಫೀಸ್ ಅಸಿಸ್ಟೆಂಟ್ ಕೆಲಸ ನೀಡಿ ಅವಮಾನಿಸಿದರು. ಈಗ ರಾಜೀನಾಮೆ ಪತ್ರ ಕೇಳಿದರು. ಕಿರುಕುಳಕ್ಕೆ ನೊಂದು ರಾಜೀನಾಮೆ ನೀಡಿದ್ದೇನೆ. ಹಣತಿನ್ನುವ ಭ್ರಷ್ಟರೇ ನನ್ನ ಮೇಲೆ ಸವಾರಿ ಮಾಡಿದರು ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಇದೆಂಥ ಅನ್ಯಾಯ?
ಸದ್ಯಕ್ಕೆ ಮನೆವಾಸವೇ ಗತಿ.-ಜಿತೇಂದ್ರ ಕುಂದೇಶ್ವರ ಮಾಜಿ ಪ್ರಧಾನ ವರದಿಗಾರ ವಿಕೆ.

Anonymous said...

avara kampeneege avru bandreeenu dodda vishaya. idoo ondu suddina..aavara kampeni karchulalli avarige editor gift kottidde maha dodda suddi.

Anonymous said...

I dont know why that anaynomous sad. If he really has 10+ years of exp and is good journalists, sky is the limit. Anyway VK belongs to Times which dont have any emotional attachment. So move to other paper/channel and make your career! And I am sure you will do it :)

Anonymous said...

Its obvious. No CEO eat his employees head at first meeting with profit and circulation and no1. Its maatter between CEO and Editor. Its Editors headache to keep performing. If Paper not performed Editor is replaced so the editor will pass his responsibility, frustratrion whatever. CEO will be above board in employees image!!