Thursday, 31 March 2011

ಅಂದು ಬರೆದಿದ್ದು ಇಂದು ನಿಜವಾಗಿದೆ

ರಂಗ ಸುವರ್ಣ ಬಿಟ್ಟಿದ್ದಾರಂತೆ.

ಹೀಗೆ ಯಾರೋ ಕಾಮೆಂಟ್ ಹಾಕಿದ್ದಾರೆ. ಯಾರೋ ಗೊತ್ತಿಲ್ಲ.

ನಾವು ಅಂದೇ ಹೇಳಿದ್ದೆವು. ನಾವು ಸುಳ್ಳು ಬರೆಯೋಲ್ಲ. ಬರೆದಿದ್ದು ಸುಳ್ಳಾಗೊಲ್ಲ ಅಂತ. ಕೆಲವರು ಕಾಮೆಂಟಿನಲ್ಲಿ ನಮಗೆ ಉಗಿದಿದ್ದರು. ಪರಿಸ್ಥಿತಿ ಹಾಗಿತ್ತು. ಉಗಿಸಿಕೊಂಡೆವು. ಕಾಮೆಂಟ್ಗಳ ಪ್ರಕಾರ ಈಗ ನಾವು ಬರೆದಿದ್ದು ನಿಜವಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಲಭ್ಯವಾದ ತಕ್ಷಣ ಪ್ರಕಟಿಸಲಾಗುವುದು.

ಆಗ ನಮಗೆ ಉಗಿದವರಿಗೆ ಈಗ ಮೇಲ್ಮುಖ ಮಾಡಿ ಉಗಿದುಕೊಂಡಂತೆ ಆಗಿರಬಹುದು.

ಅದಕ್ಕೆ ಅವರೇ ಜವಾಬ್ದಾರರು.

ಜೆಪಿ ನಾಪತ್ತೆ!

ಜೆಪಿ ೨ ವಾರ ವಿಕ ಕಚೇರಿಯಲ್ಲಿ ಕಾಣಿಸಿಕೊಂಡಿರಲಿಲ್ಲ!
ಪೊಲೀಸರು ಹುಡುಕಿಕೊಂಡು ಬಂದರು ಎಂಬ ಕಾರಣಕ್ಕೆ ಹೀಗೆ ಎಂದು ಪ್ರತ್ಯೇಕವಾಗಿ ಹೇಳಬೇಕೇ?
ವಿಕ ಕಚೇರಿಯಲ್ಲಿ ಎಲ್ಲರು ಜೆಪಿ ತಲೆಮರೆಸಿಕೊಂಡಿದ್ದಾರೆ ಎಂದು ಅಂದುಕೊಂಡಿದ್ದರು. ಆದರೆ ೨ ದಿನದಿಂದ ಅವರು ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದಕ್ಕಿಂತ ತಾಜಾ ಸುದ್ದಿಯೆಂದರೆ ಜೆಪಿಯನ್ನು ಬೆಂಬಲಿಸಬೇಕು ಎಂದು ವಿಕ ಮ್ಯಾನೇಜ್ಮೆಂಟ್ ತೀರ್ಮಾನಿಸಿದೆಯಂತೆ. ಹಾಗೆ ತೀರ್ಮಾನಿಸಿದ್ದೆ ಆದರೆ ನಾವು ವಿಕ ಮ್ಯಾನೇಜ್ಮೆಂಟ್ಗೆ ಕೆಲವು ಪ್ರಶ್ನೆ ಎತ್ತಬೇಕಾಗುತ್ತದೆ.

ಇಲ್ಲಿ ನಾವು ಎತ್ತಿದ್ದ ಪ್ರಶ್ನೆ ತಾತ್ವಿಕವಾದದ್ದು. ವಯಕ್ತಿಕವಾದುದಲ್ಲ. ಓದುಗ ಮಹಾಶಯರೊಬ್ಬರು ವಿ.ಭಟ್ಟರು, ಜೋಗಿ ಬರೆದಿಲ್ಲವೇ? ಎಂಬ ಮಹಾನ್ ಪ್ರಶ್ನೆ ಎತ್ತಿದ್ದಾರೆ. ಹೌದು. ಬರೆದಿದ್ದಾರೆ. ಅವರವರ ಹೆಸರಿನಲ್ಲಿ ಫೋಟೋ ಹಾಕಿ ಬರೆದಿದ್ದಾರೆ. ಪರ್ಮಿಶನ್ ಪಡೆದು ಬರೆದಿದ್ದಾರೆ. ಜೆಪಿಯ  ಹಾಗೆ ಕದ್ದು ಮುಚ್ಚಿ, ಯಾರದ್ದೋ ಹೆಸರಿನಲ್ಲಿ ಬರೆದಿಲ್ಲ. ಮುಖ್ಯವಾಗಿ ಅವರಿಬ್ಬರ ಬರಹದಿಂದ ಯಾರು ಸತ್ತಿಲ್ಲ. 

ಜೆಪಿ ಗುಪ್ತವಾಗಿ, ಪರ್ಮಿಶನ್ ಇಲ್ಲದೆ ಬರೆದಿದ್ದು ಮಾಧ್ಯಮಗಳ ಅಲಿಖಿತ ಸಂವಿಧಾನದ ಪ್ರಕಾರ ತಪ್ಪು. ಹಾಗಿಲ್ಲವಾದಲ್ಲಿ ಯಾರು, ಯಾರ ಹೆಸರಿನಲ್ಲಿ ಏನು ಬೇಕಾದರೂ, ಎಲ್ಲಿಗೆ ಬೇಕಾದರೂ ಬರೆಯಬಹುದು ಎಂದಾಗುತ್ತದೆ. ಹಾಗೆ ಬರೆಯಬಾರದು ಎಂದಾದರೆ ವಿಕ ಮ್ಯಾನೇಜ್ಮೆಂಟ್ ಯಾಕೆ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ? ಕ್ರಮ ಕೈಗೊಳ್ಳದೆ ಹೋದರೆ ಜೆಪಿ ಮಾಡಿದ್ದನ್ನು ಸಮರ್ಥಿಸಿದಂತಾಯಿತು. ಹಾಗಾದರೆ ಶಿವಮೊಗ್ಗದಲ್ಲಿ ನಡೆದ ಇಬ್ಬರ ಸಾವಿನ ಹೊಣೆ ಹೊರಲು ವಿಕ ಮ್ಯಾನೇಜ್ಮೆಂಟ್ ಸಿಧ್ಧವಿದೆಯೇ?

ವಿಕ ಮ್ಯಾನೇಜ್ಮೆಂಟ್ ಮುಂದೆ ಈಗ ಎರಡು ಆಯ್ಕೆಗಳಿವೆ. ೧) ಜೆಪಿ ಮೇಲೆ ಕ್ರಮ ಕೈಗೊಳ್ಳಬೇಕು. ೨) ೨ ಸಾವಿನ ಹೊಣೆ ಹೊರಬೇಕು. ಸುನೀಲ್ ರಾಜಶೇಖರ ಮತ್ತು ಈ. ರಾಘವನ್ ಯಾವುದನ್ನು ಆರಿಸಿಕೊಳ್ಳುತ್ತಾರೆ ಕಾದುನೋಡೋಣ.

Tuesday, 29 March 2011

ಜಯಪ್ರಕಾಶ ಹೀಗೆ ಮಾಡುವುದೇ? ನಾರಾಯಣ ನಾರಾಯಣ!

ಸ್ಪೋಟಕ ಸುದ್ದಿ ಅದೇನು ಕೊಟ್ಟೀರಿ ಎಂದು ಒಬ್ಬ ಓದುಗ ಮಹಾಪುರುಶರೊಬ್ಬರು ಕೇಳಿದ್ದಾರೆ.

ಇಲ್ಲಿದೆ ನೋಡಿ!
ಕಪ್ರದಲ್ಲಿ ಪ್ರಕಟವಾದ ಬರಹಕ್ಕೆ ವಿಕ ವರದಿಗಾರನೋಬ್ಬನಿಗೆ ಪೋಲೀಸ್ ನೋಟೀಸ್ ಜಾರಿಯಾಗಿದೆ!

ಇದು ವಿಚಿತ್ರ. ಆದರೂ ಸತ್ಯ. ನಂಬಿ ಪ್ಲೀಸ್!

೧-೨ ವರ್ಷದ ಹಿಂದೆ ಕಪ್ರದಲ್ಲಿ ತಸ್ಲೀಮ ನಸ್ರೀನ್ ಬರೆದ ಪರ್ದಾ ಕುರಿತು ಸಾಪ್ತಾಹಿಕದಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದರಿಂದಾಗಿ ಸಾಕಷ್ಟು ಗಲಾಟೆಯೂ ಆಗಿತ್ತು. ಶಿವಮೊಗ್ಗದಲ್ಲಿ ಗೋಲಿಬಾರ್ ಆಗಿ ಇಬ್ಬರು ಮೃತಪಟ್ಟಿದ್ದರು. ನಿಮಗೆ ನೆನಪಿರಬಹುದು.

ವಿಚಿತ್ರವೆಂದರೆ ಅದನ್ನು ಬರೆದವರು ವಿಕದಲ್ಲಿರುವ ಜಯಪ್ರಾಕಾಶ ನಾರಾಯಣ!

ತಸ್ಲೀಮ ನಸ್ರೀನ್ ಅವರ ಪರ್ದಾ ಲೇಖನವನ್ನು ಜಯಪ್ರಕಾಶ್ ನಾರಾಯಣ ಭಾಷಾಂತರಿಸಿದ್ದರು. ಅದನ್ನು ವಿಕದಲ್ಲಿ ಪ್ರಕಟಿಸುವುದು ಅವರ ಉದ್ದೇಶವಾಗಿತ್ತು. ಆದರೆ ಕೋಮುವಾದಿ ಎಂದು ಬುದ್ದಿಜೀವಿಗಳಿಂದ ಕರೆಸಿಕೊಂಡಿರುವ ವಿ.ಭಟ್ಟರು ಕೂಡ ಅದನ್ನು ಪ್ರಕಟಿಸಲು ನಿರಾಕರಿಸಿದರು. ಸುಮ್ಮನೆ ಒಂದು ಲೇಖನ ವೇಸ್ಟ್ ಆಗಿಬಿಡುತ್ತಲ್ಲ ಎಂದು ಕುಬುದ್ದಿ ಕರ್ಚು ಮಾಡಿದ ಜಯಪ್ರಕಾಶ್ ನಾರಾಯಣ ಲೇಖನವನ್ನು ಕಪ್ರಕ್ಕೆ ಕಳುಹಿಸಿದರು.

ಅಲ್ಲಿ ಸಂಪಾದಕ ಶಿವಸುಬ್ರಮಣ್ಯ ಮತ್ತು ಸಾಪ್ತಾಹಿಕ ಮುಖ್ಯಸ್ಥ ಡಾ.ವೆಂಕಿ ಸೇರಿ ಅದನ್ನು ಸಾಪ್ತಾಹಿಕದಲ್ಲಿ ಪ್ರಕಟಿಸಿಬಿಟ್ಟರು. ಆಮೇಲೆ ಶಿವ ಶಿವ ಎನ್ನಬೇಕಾಯ್ತು!

ಗಲಾಟೆಗಳೆಲ್ಲ ಮುಗಿದು ಪೋಲೀಸ್ ವಿಚಾರಣೆ ಆರಂಭವಾಯಿತು. ಯಾವಾಗ ಕುತ್ತಿಗೆಗೆ ಬಂತೊ ಆಗ ಇಬ್ಬರು ಜೆಪಿ ನಾಮಸ್ಮರಣೆ ಆರಂಭಿಸಿದ್ದಾರೆ. ಯಾವ ಜೆಪಿ ಎಂದು ಹುಡುಕುತ್ತ ಹೊರಟ ಪೋಲೀಸ್ ಜೀಪು ವಿಕ ಕಚೇರಿ ತಲುಪಿದೆ!
ಈಗ ಪೊಲೀಸರು ವಿಕದ ಜಯಪ್ರಕಾಶ್ ನಾರಾಯಣನಿಗೂ ನೋಟೀಸ್ ನೀಡಿದ್ದಾರೆ. ವಿಕ ಆಡಳಿತ ವರ್ಗಕ್ಕೂ ಇ ಮಾಹಿತಿ ದೊರೆತಿದೆ.

ನಮ್ಮ ಪ್ರಶ್ನೆ ಇರುವುದು ಒಂದು ಪತ್ರಿಕೆಯಲ್ಲಿ ಇದ್ದುಕೊಂಡು ಇನ್ನೊಂದು ಪತ್ರಿಕೆಗೆ ಬರೆಯುವುದು ಸರಿಯೆ? ಇದು ಗೊತ್ತಾಗಿಯೂ ವಿಕ ಆಡಳಿತ ಸುಮ್ಮನಿರುವುದೇಕೆ? ಅದರರ್ಥ ಜಯಪ್ರಕಾಶ್ ನಾರಾಯಣ ಬರೆದ ಲೇಖನವನ್ನು ವಿಕ ಆಡಳಿತ ಬೆಂಬಲಿಸುತ್ತಿದೆಯೆಂದೆ?

ಜಯಪ್ರಕಾಶ್ ನಾರಾಯಣ ಕಚೇರಿಯಲ್ಲಿ ಇನ್ನೊಬ್ಬರಿಗೆ ಪಾಠ ಮಾಡುವಲ್ಲಿ ಪ್ರವೀಣರು. ಇನ್ನೊಬ್ಬರಿಗೆ ಪಾಠ ಮಾಡುವವರು ಹೀಗೆ ಮಾಡಿದರೆ ಹೇಗೆ? ಇದನ್ನೆಲ್ಲಾ ನೋಡಿಕೊಂಡು ಸುರಾ (Sunil Rajshekhar) ಸುಮ್ಮನುಳಿಯುವರೆ?

Sunday, 27 March 2011

ಮಾಡಿದಮೇಲೆ ಕಂಡೆ ಕಾಣುತ್ತೆ ಬಿಡಿ!

 ಏನೇನ್ ಮಾಡ್ತೀವಿ ನೋಡ್ತಾ ಇರಿ!

ಹಾಗಂತ ಕಪ್ರ ಜಾಹೀರಾತು ಪ್ರಕಟಿಸುತ್ತಿದೆ. ಜಾಹೀರಾತುಗಳೇನೋ ಚೆನ್ನಾಗಿವೆ. ಆದರೆ ಪತ್ರಿಕೆಯಲ್ಲಿ ತುಂಬಾ ಹೊಸದೇನು ಕಾಣುತ್ತಿಲ್ಲ. ಒಂದೆರಡು ಅಂಕಣಕಾರರು, ಸ್ವಲ್ಪ ವಿನ್ಯಾಸದಲ್ಲಿ ಬದಲಾವಣೆ ಹೊರತುಪಡಿಸಿ ಹೊಸದೇನು ಓದುಗರಾದ ನಮಗೆ ಕಂಡಿಲ್ಲ.

ಹೀಗಾಗಿ ನಮ್ಮ ದ್ರಷ್ಟಿಯಲ್ಲಿ ಏನೇನ್ ಮಾಡ್ತೀವಿ ನೋಡ್ತಾ ಇರಿ ಎಂಬುದು ಸ್ವಲ್ಪ ಧಿಮಾಕಿನ ಮಾತು. ಪತ್ರಿಕೆಯಲ್ಲಿ ಏನೇ ಹೊಸತು ಮಾಡಿದರು ಎಲ್ಲರಿಗು ಕಾಣುತ್ತದೆ. ಕಂಡಾಗ ನೋಡುತ್ತಾರೆ. ಅದು ಬಿಟ್ಟು ಏನೇನ್ ಮಾಡ್ತೀವಿ ನೋಡ್ತಾ ಇರಿ!ಅಂದ್ರೆ?

ನಮಗೇನು ಅದೇ ಕೆಲಸಾನ? ಕಪ್ರ ದವರು ಏನು ಮಾಡಿದ್ರು? ಅದ್ರಲ್ಲಿ ಹೊಸದೇನು? ಎಂದು ಹುಡುಕ್ತಾ ಕೂತ್ಕೊಬೇಕ?

ಜನಕ್ಕೆ ಅದೆಲ್ಲ ಬೇಕಾಗಿಲ್ಲ. ಬೆಳಗ್ಗೆದ್ದು ಪೇಪರ್ ಓದುವಾಗ ಅದು ಇಷ್ಟವಾಗಬೇಕು. ಆಸಕ್ತಿಕರವಾಗಿ ಓದಿಸಿಕೊಂಡು ಹೋಗಬೇಕು. ಆಕರ್ಷಕವಾಗಿರಬೇಕು. ಇಷ್ಟೇ. ಅದು ಬಿಟ್ಟು ನೀವು ಏನೇನ್ ಮಾದಿದ್ರು ನೋಡ್ತಾ ಇರೋಕೆ ಜನಕ್ಕೆ ಪುರುಸೊತ್ತಿಲ್ಲ.

ಗೊತ್ತಾಯ್ತ ಸ್ವಾಮಿ ಸಂಪಾದಕರೆ?

ಸ್ವಲ್ಪ ಧಿಮಾಕು ಕಡಿಮೆ ಮಾಡ್ಕೊಳ್ಳಿ. ಅದು ಆರೋಗ್ಯಕ್ಕೆ ಒಳ್ಳೇದಲ್ಲ.

ಪೋಸ್ಟ್ ಮಾಡದೆ ಇರುವುದಕ್ಕೆ ಸಾರಿ

ಕೆಲಸದ ನಿಮಿತ್ತ ಪರ ಊರಿಗೆ ಹೋಗಿದ್ದೆ. ಇಷ್ಟು ದಿನ ಪೋಸ್ಟ್ ಮಾಡಿರಲಿಲ್ಲ.

ಆದರು ಓದುಗರು ಬಂದು ಹೋಗಿದ್ದೀರಿ. ಧನ್ಯವಾದಗಳು.

ಕೆಲವರು ಕೇಸಿಗೆ ಹೆದರಿ ಪೋಸ್ಟ್ ಮಾಡಿಲ್ಲವೇ ಎಂದು ಕಿಚಾಯಿಸಿದ್ದಾರೆ. ನಾವು ಹೇಗೆ ಬೇರೆಯವರ ಬಗ್ಗೆ ವಿಚಾರ ಮಾಡುತ್ತೇವೆಯೋ ಹಾಗೆ ಅವರೂ ನಮ್ಮ ಬಗ್ಗೆ ವಿಚಾರ ಮಾಡಲು ಸ್ವತಂತ್ರರು. ಕೇಸಿಗೆ ಹೆದುರವಂತದ್ದು ಏನೂ ಇಲ್ಲ. ಕೇಸು ಹಾಕುವಂತದ್ದು ಏನು ಬರೆದಿಲ್ಲ. ಅಸ್ತರಮೇಲು ಕೇಸು ಹಾಕಿದರೆ ಇದಕ್ಕಿಂತ ಹೆಚ್ಚಿನ ಸ್ಪೋಟಕ ಮಾಹಿತಿ ಇದೆ. ಪ್ರಕಟಿಸೋಣ ಬಿಡಿ.

ಹೇಗೂ ಓದುಗರು ನೀವಿದ್ದಿರಲ್ಲ!

Monday, 21 March 2011

ಉದಯವಾಣಿಯಿಂದ ೩ ಜನ ವಿಕಕ್ಕೆ ಇದು ಸುಪರ್ ಮೂನ್ ಎಫೆಕ್ಟ್ ಅಲ್ಲ!

ವಿ.ಭಟ್ಟರು ವಿಕ ಬಿಡುವುದರ ಮೂಲಕ ಆರಂಭವಾದ ತಲ್ಲಣದ ಅಲೆಗಳು ಇನ್ನು ನಿಂತಿಲ್ಲ. ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ವಲಸೆ ಇನ್ನು ಕೆಲವು ದಿನ ಹೀಗೆ ಇರಬಹುದು ಎಂಬ ಶಂಕೆಯಿದೆ. ಸಂಖ್ಯೆಗಳ ಕುರಿತು ನಿಖರ ಮಾಹಿತಿ ಇಲ್ಲ.

ಈ ಅಲೆಯ ಪರಿಣಾಮವಾಗಿಯೇ ೩ ಜನ ಉದಯವಾಣಿಯಿಂದ ವಿಕಕ್ಕೆ ವಲಸೆ ಹೊರಟಿದ್ದಾರೆ.  ವೈ.ಗ. ಜಗದೀಶ್, ಹುದ್ರಣ್ಣ ಪರ್ತಿಕೋಟಿ, ಲಕ್ಷ್ಮಿನಾರಾಯಣ ಎಂಬವರೇ ವಿಕಕ್ಕೆ ಹೊರಟವರು. ವಿಕ ಚೀಫ್ ರಿಪೋರ್ಟರ್ ಎಲ್. ಪ್ರಕಾಶನೆ ಇವರನ್ನು ಕರೆತರುತ್ತಿದ್ದಾನೆ.

ಅತ್ತ ಉದಯವಾಣಿ ಸಂಪಾದಕ ರವಿ ಹೆಗಡೆ ಅವತಾರಕ್ಕೆ ಹೊಸ ಸಂಚಲನ ಮೂಡಿದೆ. ತುಂಬಾ ಜನ ಉದಯವಾಣಿಯಲ್ಲಿ ಓತ್ಲಾ ಹೊಡೆದುಕೊಂಡಿದ್ದರು. ಅವರಿಗೆಲ್ಲ ರವಿ ಹೆಗಡೆ ಚುರುಕು ಮುಟ್ಟಿಸಿದ್ದಾರೆ. ಹಿರಿ-ಕಿರಿಯರೆನ್ನದೆ ರವಿ ಹೆಗಡೆಯವರು ಏಕವಚನದಲ್ಲಿ ಕರೆಯುವುದು ನೋಡಿ ಉದಯವಾಣಿಯ ಜನತೆ ದಂಗಾಗಿದೆ.

ಕಂಕ ಮೂರ್ತಿ ಸೀನಿಯರ್ ಮನುಷ್ಯ. ಅವರು ೮:೦೦ ಗಂಟೆಗೆ ಬ್ಯಾಗು ಹಿಡಿದು ಮನೆಗೆ ಹೊರಟಾಗ ರವಿ ಹೆಗಡೆ ಕರೆದು "ಏನು ಮನೆಗೆ ಹೊರಟದ್ದಾ? ಇಷ್ಟು ಬೇಗ ಮನೆಗೆ ಹೋಗುವಂತಿಲ್ಲ. ಮನೆಗೆ ಹೋಗುವುದು ೧೧ರ ಮೇಲೆಯೆ' ಎಂದು ಹೇಳಿದ್ದಾರೆ. ಇದೆ ಅನುಭವ ಹುದ್ರಣ್ಣ ಪರ್ತಿಕೋಟಿಗೂ ಆಗಿದೆ. 'ನೀವು ಶ್ಯಾಮರಾಯರನ್ನು ನೋಡಿದ್ದೀರಿ. ನಾನು ೧೦೦ ಶ್ಯಾಮರಾಯರಿಗೆ ಸಮ. ನಾನು ಈವರೆಗೆ ೨೦೦ ಜನರನ್ನು ಕೆಲಸದಿಂದ ಕಿತ್ತು ಹಾಕಿದ್ದೇನೆ. ೨೪೦ ಜನರನ್ನು ಕೆಲಸಕ್ಕೆ ತೆಗೆದುಕೊಂಡಿದ್ದೇನೆ' ಎಂದು ರವಿ ಹೆಗಡೆ ಹೇಳಿರುವುದು ಉದಯವಾಣಿಯಲ್ಲಿ ಓತ್ಲಾ ಹೊಡೆದುಕೊಂಡು ಇದ್ದವರಿಗೆ ಚಿರುಕುರುಳಿ ಸೊಪ್ಪು ತೀಡಿದಂತಾಗಿದೆ. ರವಿ ಹೆಗಡೆ ಒಳ್ಳೆಯವರು ಆದರೆ ರಂಗನ ಜೊತೆ ಸೇರಿ ಹೀಗಾಗಿದ್ದಾರೆ ಎಂದು ಉದಯವಾಣಿಯ ಜನ ಮಾತಾಡಿಕೊಳ್ಳುತ್ತಿದ್ದಾರೆ.

ಮುಗಿಸುವ ಮೊದಲು ಒಂದು ಸೂಚನೆ: ಇದೆಲ್ಲ ಸೂಪರ್ ಮೂನ್ ಪರಿಣಾಮ ಅಲ್ಲ.

ಕಾಮೆಂಟಿಗರೆ ದಯವಿಟ್ಟು ಗಮನಿಸಿ

ನಾವು ಯಾರ ಕುರಿತು ಕೂಡ ಕೀಳಾಗಿ ಬರೆಯಲಾರೆವು. ಆದ್ದರಿಂದ ಕಾಮೆಂಟು ಮಾಡುವವರು ಕೂಡ ಇದನ್ನು ಪಾಲಿಸಬೇಕು ಎಂಬುದು ನಮ್ಮ ವಿನಂತಿ.
ಇನ್ನು ಮುಂದೆ ಯಾವುದೇ ರೀತಿಯ ಬೈಗುಳ, ನಿಂದನೆ ಇರುವ ಕಾಮೆಂಟುಗಳನ್ನು ನಿರ್ದಯವಾಗಿ ಡಿಲಿಟ್ ಮಾಡಲಾಗುವುದು. ನಿಮ್ಮ ಆಕ್ರೋಶ, ಬೇಸರ ಏನೇ ಇರಲಿ ಅದನ್ನು ಸಾತ್ವಿಕ ಶಬ್ದಗಳಲ್ಲೇ ತಿಳಿಸಿ. ಪ್ರಕಟಿಸೋಣ. ಇಲ್ಲವಾದಲ್ಲಿ ಇಲ್ಲ. 

ಇಲ್ಲಿ ಆರೋಗ್ಯಕರ ಚರ್ಚೆಗೆ ಮಾತ್ರ ಅವಕಾಶ.

Saturday, 19 March 2011

ವಿಕಕ್ಕೆ 'ಶಕ್ತಿ' ತುಂಬಲು 'ರೆಸಾರ್ಟ್' ಪ್ರವಾಸ

ರಾಜಕೀಯಕ್ಕೆ ಸೀಮಿತವಾಗಿದ್ದ ರೆಸಾರ್ಟ್ ರಾಜಕೀಯ ಈಗ ಪತ್ರಿಕೋದ್ಯಮಕ್ಕೂ ಕಾಲಿರಿಸಿದೆ!

ವಿ.ಭಟ್ಟರು ಬಿಟ್ಟನಂತರ ವೀಕ್ ಆಗಿರುವ ವಿಕಕ್ಕೆ 'ಶಕ್ತಿ' ತುಂಬಲು 'ರೆಸಾಟ್೯' ರಾಜಕಾರಣದಿಂದ ಸ್ಪೂತಿ೯ ಪಡೆದ ಟೈಮ್ಸ್ ಮ್ಯಾನೇಜ್ಮೆಂಟ್ ರೆಸಾಟ್೯ ಮೊರೆ ಹೋಗಿದೆ.

ವಿಕ ಸಿಬ್ಬಂದಿಗೆ ಶನಿವಾರ ಶಕ್ತಿ ಹಿಲ್ ರೆಸಾಟ್೯ ಪ್ರವಾಸ ಏಪ೯ಡಿಸಲಾಗಿದೆ. ಬೆಳಗ್ಗೆ 10.00 ಗಂಟೆಯಿಂದ ಸಂಜೆ 4.00 ಗಂಟೆವರೆಗೆ ವಿಕ ಸಿಬ್ಬಂದಿ ರೆಸಾಟ್೯ನಲ್ಲಿ ಕಳೆಯಲಿದ್ದಾರೆ. ಇಲ್ಲಿ ಭಜ೯ರಿ ಈಟಿಂಗ್ ಜೊತೆಗೆ ಮೀಟಿಂಗ್ ಇದೆಯಂತೆ. ಸಿಬ್ಬಂದಿಗೆ ಔಟಿಂಗೂ ಆದಂತಾಯಿತು.

ಟೈಮ್ಸ್ ಮ್ಯಾನೇಜ್ಮೆಂಟ್ ವಿಕ ಸಿಬ್ಬಂದಿಗೆ ಶಕ್ತಿ ತುಂಬಲು ಹೊರಡಲು ಮೂಲ ಕಾರಣ ಪ್ರಸಾರ ಸಂಖ್ಯೆ ಮತ್ತು ಜಾಹೀರಾತು ಸಂಖ್ಯೆ ಕುಸಿತ. ವಿ. ಭಟ್ಟರು ಬಿಟ್ಟು ಕಪ್ರ ಸೇರಿದ ಮೇಲೆ ಕಪ್ರದ ಪ್ರಸಾರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರದಿದ್ದರೂ, ವಿಕ ಪ್ರಸಾರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಪತ್ರಿಕೆ ಗುಣಮಟ್ಟದ ಬಗ್ಗೆ ಸಾಕಷ್ಟು ದೂರು-ದುಮ್ಮಾನಗಳಿವೆ.

ಅದೇನು ವಿಚಿತ್ರವೊ. ವಿ.ಭಟ್ಟರು ಸಂಪಾದಕರಾಗಿದ್ದರೂ, ಅವರು ಬಿಟ್ಟಮೇಲೆ ಜಾಹೀರಾತುಗಳು ಗಣನೀಯವಾಗಿ ಕುಸಿದಿವೆ. ಇದು ಟೈಮ್ಸ್ ಮ್ಯಾನೇಜ್ಮೆಂಟ್ಗೆ ತಲೆ ಬಿಸಿ ಮಾಡಿದೆ. ಟೈಮ್ಸ್ ಮ್ಯಾನೇಜ್ಮೆಂಟ್ ಪ್ರಕಾರ ಪತ್ರಿಕೆ ಒಳ್ಳೆಯದಾಗಿ ಬರುತ್ತೊ, ಬಿಡುತ್ತೊ, ಜಾಹೀರಾತು ಬರಬೇಕು. ಅದು ಬರಲಿಲಲ್ಲವೆಂದರೆ ಪತ್ರಿಕೆ ಮುಚ್ಚಲು ಅವರು ಹಿಂದೆಮುಂದೆ ನೋಡುವವರಲ್ಲ.

ಈಗ ಸಿಬ್ಬಂದಿಯನ್ನು ಶಕ್ತಿಹಿಲ್ ರೆಸಾಟ್೯ಗೆ ಕರೆದುಕೊಂಡು ಹೋಗಿರುವುದನ್ನು ಗಮನಿಸಿದರೆ ಅಷ್ಟು ಅಶಕ್ತಿಯಾಗಿದೆಯೆಂದು ಅರ್ಥವಲ್ಲವೆ? ಅಥವಾ ಸಿಬ್ಬಂದಿಯ ವಿಶ್ವಾಸ ಗಳಿಸಿ ಅವರನ್ನು ವಿಕದಲ್ಲೇ ಉಳಿಸಿಕೊಳ್ಳುವ ಯತ್ನವಾ?

ವಿಶೇಷವೆಂದರೆ ಈ ಶಕ್ತಿ ಹಿಲ್ ರೆಸಾಟ್೯ ವಿ.ಭಟ್ಟರ ಮನೆಯಿಂದ ಕೂಗಳತೆ ದೂರದಲ್ಲಿದೆಯಂತೆ!

Friday, 18 March 2011

ವಿಕ ಸುದ್ದಿ ಹೊರಗೆ 'ಹಾಯ್'ಸುವವರಾರು?

ವಿಕದಲ್ಲಿ ಏನಾದರು ಅದು ಸಿಇಒ ಸುನೀಲ್ ರಾಜಶೇಖರ್ ಗೆ ಗೊತ್ತಾಗುವ ಮೊದಲು ಬೆಳೆಗೆರೆ ಕಿವಿ ತಲುಪಿರುತ್ತದೆ!

ಇದು ವಿಕ ವಿಶೇಷ!

ಬೆಳೆಗೆರೆ ಕಿವಿಗೆ ಬಿದ್ದ ಮೇಲೆ ಮುಗಿಯಿತು. ಅದು 'ಹಾಯ್' ನಲ್ಲಿ ಪ್ರಕಟವಾಗುತ್ತದೆ. ಈ ಬಾರಿ ಹಾಗೆ ಆಗಿದೆ. ವಿಕದಿಂದ 3 ಜನ ಕಪ್ರಕ್ಕೆ ಹೋಗುತ್ತಾರೆ ಎಂಬ ವರದಿ ಪ್ರಕಟವಾಗಿದೆ. ವಿಕದಲ್ಲಿ ನಡೆವ ಪ್ರತಿಯೊಂದು ಸಂಗತಿಯನ್ನು ಬೆಳೆಗೆರೆಗೆ ಹಾಯ್ ಸುವವರು ಯಾರು?

ಅಲ್ಲಿನ ಆ್ಯಕ್ಟಿಂಗ್ ಚೀಫ್ ರಿಪೋರ್ಟರ್!

ಈ ಆ್ಯಕ್ಟಿಂಗ್ ಚೀಫ್ ರಿಪೋರ್ಟರ್ ವಿಕಕ್ಕೆ ವರದಿ ಮಾಡುವುದಕ್ಕಿಂತ ಹೆಚ್ಚಾಗಿ ಹಾಯ್ ಗೆ ವರದಿ ಮಾಡುತ್ತಾರೆ. ಹೀಗೇಕೆ ಹೇಳುತ್ತೀರಿ ಎಂದು ನೀವು ಕೇಳಬಹುದು. ಆ್ಯಕ್ಟಿಂಗ್ ಚೀಫ್ ರಿಪೋರ್ಟರ್ ಇತ್ತೀಚೆಗೆ ವರದಿ ಮಾಡಿದ್ದನ್ನು ಯಾರು ನೋಡಿಲ್ಲ. ಅವರು ನಿಜವಾದ ಅರ್ಥದಲ್ಲಿ ಆ್ಯಕ್ಟಿಂಗ್ ಚೀಫ್ ರಿಪೋರ್ಟರ್!

ಬರೀ ಆ್ಯಕ್ಟ್ ಮಾಡುತ್ತಿದ್ದಾರೆ!

ಅವರ ಹೆಸರು ಎಲ್. ಪ್ರಕಾಶ್.

ವಿ.ಭಟ್ಟರು ವಿಕದಲ್ಲಿದ್ದಾಗ ಅವರಿಗೆ ಬಕೆಟ್ ಹಿಡಿದುಕೊಂಡು ಓಡಾಡಿದ. ಈಗ ಈ ರಾಘವನ್ ಗೆ ಬಕೆಟ್ ಕಾಯಕ ಮುಂದುವರಿಸಿದ್ದಾರೆ. ಬೆಳೆಗೆರೆಗೆ ಅವರು ಬಕೆಟ್ ಹಿಡಿಯಲಾರಂಭಿಸಿ ದಶಕಗಳು ಕಳೆದಿವೆ. ಪದ್ಮನಾಭನಗರಕ್ಕೆ ಹೋದಾಗ ಬೆಳೆಗೆರೆಗೆ ಕಾಲು ಒತ್ತುತ್ತಿರುವುದನ್ನು ನೋಡಿದವರಿದ್ದಾರೆ. ಇದನ್ನು ನೋಡಿದವರು ಮೊದಲಕ್ಷರ ಎಲ್. ಅಂದರೆ ಲೆಗ್ ಎಂದು ಗೇಲಿ ಮಾಡುತ್ತಾರೆ.

ಪದ್ಮನಾಭನಗರದಲ್ಲಿ ಕಾಲು ಒತ್ತುವ ಈತ ಆಚೆ ಬಂದು ಬೆಳೆಗೆರೆಗೆ ಹಿಗ್ಗಾಮುಗ್ಗಾ ಹಿಯಾಳಿಸುತ್ತಾನೆ. ಬೆಳೆಗೆರೆ-ಯಶೋಮತಿಯನ್ನು ಮದುವೆಯಾದಾಗ ಎಲ್ಲರೆದುರು ಬೈದುಕೊಂಡು ತಿರುಗಾಡಿದ್ದ. ಕೇಳಿದರೆ ನಾನು ಬೆಳೆಗೆರೆ ಋಣದಲ್ಲಿಲ್ಲ, ಅವರು ನನ್ನ ಋಣದಲ್ಲಿದ್ದಾರೆ. ನಾನು ಅವರಿಗೆ 20 ವಷ೯ದ ಹಿಂದೆ  500 ರೂಪಾಯಿ ಕೊಟ್ಟಿದ್ದೆ ಎಂದು ಜಂಭದಿಂದ ಹೇಳಿಕೊಳ್ಳುತ್ತಾನೆ.

ಈತ ವಿಚಿತ್ರ ವ್ಯಕ್ತಿ. ಅವನ ಪ್ರಕಾರ ತಾನೊಬ್ಬನೆ ಸಾಚಾ, ಉಳಿದವರೆಲ್ಲ ಅಧಮರು. ಇನ್ನೊಬ್ಬರ ಏಳ್ಗೆಯನ್ನು ಸಹಿಸದವ. ಎಲ್ಲರ ಬಗ್ಗೆ ಚಾಡಿ ಹೇಳುವುದು ಹವ್ಯಾಸ. ಯಾರ ಕುರಿತು ಚಾಡಿಹೇಳಲು ಆಗದಿದ್ದರೆ ತನ್ನ ಕುರಿತೇ ಚಾಡಿಹೇಳುವಷ್ಟು ಚಾಡಿಕೋರ. ಇಂಟರೆಸ್ಚಿಂಗ್ ಸಂಗತಿಯೊಂದಿದೆ. ಪ್ರಕಾಶ್ ಪತ್ನಿ ಶಾಂತಾ ಸಂಕದಲ್ಲಿದ್ದರು. ಅವರಿದೆ ಚೀಫ್ ರಿಪೋರ್ಟರ್ ಆಗುವ ಅವಕಾಶ ಸೖಷ್ಟಿಯಾಗಿತ್ತು. ತನಗಿಂತ ಮೊದಲೆ ಹೆಂಡತಿ ಚೀಫ್ ರಿಪೋರ್ಟರ್ ಆಗುವುದನ್ನು ಸಹಿಸದೆ, ಹುಣಸವಾಡಿ ರಾಜನ್ ಜೊತೆ ಜಗಳ ಮಾಡಿ. ಆಕೆ ಚೀಫ್ ರಿಪೋರ್ಟರ್ ಆಗದಂತೆ ನೋಡಿಕೊಂಡ!
ಹೀಗೂ ಉಂಟಾ?
ಅಶೋಕರಾಮನ ತಂಗಿ ಮದುವೆಗೆ ಬೆಳೆಗೆರೆಯಿಂದ 8 ಲಕ್ಷ ಕೊಡಿಸಿದ್ದಾಗಿ ಇದೆ ಪ್ರಕಾಶ ಕೆಲ ಕಾಲ ಹೇಳಿಕೊಂಡು ತಿರುಗಾಡುತ್ತಿದ್ದ.
ವಿಕ ಸುದ್ದಿಯನ್ನು ಪ್ರಕಾಶನಂತಹ ಕೆಲವರು ಹೊರಗೆ ಹಾಯ್ ಸುತ್ತಿದ್ದರೆ ಸಿಇಒ ಸುನೀಲ್ ರಾಜಶೇಖರ್ ಮಾತ್ರ ಈ ರಾಘವನ್ ಅವರು ರಾಜ್ಯ ಬಜೆಟ್ ಕುರಿತು ಬರೆದ ವಿಶ್ಲೇಷಣೆ ಓದುತ್ತ, ಅರ್ಥವಾಗದೆ ಚಡಪಡಿಸಿ, ಅದರ ಕುರಿತೇ ಚಿಂತೆ ಮಾಡುತ್ತಿದ್ದಾರಂತೆ.

Thursday, 17 March 2011

ನಾವು ಸುಳ್ಳು ಬರೆಯಂಗಿಲ್ಲ, ಬರೆದಿದ್ದು ಸುಳ್ಳಾಗಂಗಿಲ್ಲ!

ಹೌದು. ರಂಗ ಚಾನಲ್ ನಲ್ಲಿ ಕಾಣಿಸಿಕೊಂಡಿದ್ದಾರೆ!

ಇದರರ್ಥ ಅವರನ್ನು ಚಾನಲ್ ನಿಂದ ಕಿತ್ತುಹಾಕಿಲ್ಲ ಎಂದಲ್ಲ. ಬುಧವಾರ ಸಂಜೆ ಇಬ್ಬರು (ಸಂಜಯ ಪ್ರಭು ಹಾಗು ಇನ್ನೊಬ್ಬರು) ಕಚೇರಿಗೆ ಬಂದು ರಂಗನ ಜೊತೆ ಮಾತನಾಡಿ, ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ. ಇದಾದ ಮೇಲೆಯೇ ರಂಗನ ಮುಖದ ರಂಗು ಇಳಿದಿದ್ದು. ನಂತರ ರಂಗ ಕಚೇರಿಯಿಂದ ಹೋಗಿದ್ದರು. ಇದು 100% ಸತ್ಯ.

ಅದರ ನಂತರ ರಂಗ ಯಾರ್ಯಾರಿಗೆ ಫೋನು ತಿರುಗಿಸಿದ ಎಂಬುದು ಅವರಿಗೇ ಗೊತ್ತು. ಹೇಗೊ ಸ್ವಲ್ಪ ದಿನದ ಜೀವದಾನ ಪಡೆದಿದ್ದಾರೆ. ಇದು ತೆರೆಮರೆಯಲ್ಲಿ ನಡೆದಿದ್ದು.
"ಯಾವನೋ ಏನೋ ಬರೆದ ಅಂತ ನೀವು ನಂಬಿದಿರೇನೊ' ಎಂದು ಕೆಲವರ ಮುಂದೆ ರಂಗ ರೋಪ್ ಹಾಕಿದ್ದಾರೆ. ಅವರ ಆತ್ಮಕ್ಕೆ ನಿಜ ಗೊತ್ತು.

ಈಗ ನಾವೇನು ಹೇಳಿದರೂ ನೀವು ನಂಬುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ರಾಜೀನಾಮೆ ನೀಡಿದ್ದಾರೆ ಎಂದು ಬರೆದ ನಂತರ ಅವರು ಅದೇ ಚಾನಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸಧ್ಯದಲ್ಲೇ ನಾವು ಬರೆದದ್ದು ನಿಜವಾಗಲಿದೆ. ಆಗ ನೀವು ಒಪ್ಪಿಕೊಳ್ಳುತ್ತೀರಿ ಎಂಬ ವಿಶ್ವಾಸವಿದೆ.

ನಮ್ಮ ಮೂಲಗಳನ್ನು ನಾವು ನಂಬುತ್ತೇವೆ. ಬರೆದಿದ್ದಕ್ಕೆ ಬದ್ಧರಾಗಿದ್ದೇವೆ.

ನಾವು ಸುಳ್ಳು ಬರೆಯಂಗಿಲ್ಲ, ಬರೆದಿದ್ದು ಸುಳ್ಳಾಗಂಗಿಲ್ಲ!

Wednesday, 16 March 2011

ರಂಗ ರಾಜೀನಾಮೆ

 ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ಎಚ್. ಆರ್. ರಂಗನಾಥ ರಾಜೀನಾಮೆ ನೀಡಿದ್ದಾರೆ.
ಇದು ಈ ಕ್ಷಣದ ಬ್ರೆಕಿಂಗ್ ನ್ಯೂಸ್!
ರಂಗನಾಥ್ ಸುವರ್ಣ ಚಾನಲ್ ಬಿಟ್ಟು ಸಮಯ ಖರೀದಿಸುತ್ತಾರೆ, ಕಸ್ತೂರಿಗೆ ಹೋಗುತ್ತಾರೆ ಎಂದೆಲ್ಲ ಹರಡಿದ್ದ ಸುದ್ದಿಗಳೆಲ್ಲ ಗಾಳಿಯಲ್ಲಿ  ಲೀನವಾಗಿ ಸುವರ್ಣ ನ್ಯೂಸ್ ಚಾನಲ್ ನಿಂದ ಅವರು ಹೊರಹಾಕಿಸಿಕೊಳ್ಳುವುದರಲ್ಲಿ ಪರ್ಯಾವಸಾನವಾಗಿದೆ. ಅವರಿಗೆ    ಗುರುವಾರದಿಂದ ಕಚೇರಿಗೆ ಬರದಂತೆ ಮ್ಯಾನೆಜ್ಮೆಂಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ರಂಗ ರಾತ್ರಿ ನ್ಯೂಸ್ ನಲ್ಲಿ ಕಾಣಿಸಿಕೊಂಡಿಲ್ಲ.
ರಂಗ ಅವರ ಜೊತೆಗೆ ಅವರ ಎಷ್ಟು ಸಹೋದ್ಯೋಗಿಗಳು ಅವರನ್ನು ಹಿಂಬಾಲಿಸುತ್ತಾರೆ ಎಂಬುದು ಗೊತ್ತಾಗಿಲ್ಲ. ರಂಗ ಅವರ ಬಗ್ಗೆ ಕಳೆದ  ಕೆಲವು "ಸಮಯ"ದಿಂದ ಮ್ಯಾನೆಜ್ಮೆಂಟ್ಗೆ ಅಸಮಾಧಾನ ಇತ್ತು. ಸಮಯ ಚಾನಲ್ ಖರೀದಿಸಲು ರಂಗ ಮುಂದಾದಾಗಿನಿಂದ ಈ ಅಸಮಾದಾನ ಹೆಚ್ಚಾಗಿತ್ತು. ಆದರೆ ರಂಗ ಮಾತ್ರ ಪರದೆ ಮೇಲೆ ಮೆರೆಯುತ್ತಲೇ ಇದ್ದರು.
ಈಗ ಅದಕ್ಕೆಲ್ಲ ಬ್ರೇಕ್ ಬಿದ್ದಿದೆ.