ಸಂಕೇಶ್ವರ ಅವರ ಹೊಸ ಪತ್ರಿಕೆ ಕಾರ್ಯ ಬಿರುಸಿನಿಂದ ಸಾಗಿದೆ. ಮೊದಲು ಸಂಕೇಶ್ವರ ಅವರ ಜೊತೆಗಿದ್ದ, ಅವರು ಪತ್ರಿಕೆ ಮಾರಾಟ ಮಾಡಿದಾಗ ಟೈಮ್ಸ್ ಗ್ರೂಪ್ ಗೆ ಹೋಗಿದ್ದ ಜಿ.ಎಸ್. ಕುಲಕರ್ಣಿ ವಿಜಯ ಕರ್ನಾಟಕಕ್ಕೆ ರಾಜೀನಾಮೆ ನೀಡಿ, ಸಂಕೇಶ್ವರರ ಜೊತೆ ಸೇರಿದ್ದಾರೆ. ಇವರೊಬ್ಬ ಪ್ರಿಂಟಿಂಗ್ ಡಾನ್ ಎನ್ನಬಹುದು!
ಮೂಲಗಳ ಪ್ರಕಾರ ಸಂಕೇಶ್ವರ ಅವರು ಒಂದೇ ಏಟಿಗೆ ೧೦ ಆವೃತ್ತಿ ಆರಂಭಿಸುವ ಹುಮ್ಮಸ್ಸಿನಲ್ಲಿದ್ದಾರೆ. ೧೦ ಕಡೆಯೂ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸುವ ಉದ್ದೇಶ ಅವರದ್ದು. ಬಲು ಜೋರಿನಿಂದಲೇ ಮಾರುಕಟ್ಟೆ ಪ್ರವೇಶಿಸುವುದು ಸಂಕೇಶ್ವರರ ಉದ್ದೇಶ. ಪೂನಾ ಮೂಲದ ಮೊನೋಗ್ರಾಪ್ ಕಂಪನಿಯಾ ಅಶ್ವಥ ಆರಾಯಣ ಎಂಬವರ ಜೊತೆ ಶನಿವಾರ ಮಾತುಕತೆ ನಡೆಸಿದ್ದಾರೆ.
ಸಾಕಷ್ಟು ಓದುಗರು ಮಂಗಳವಾರದ ಸಂಕೇಶ್ವರ-ಶಿವ ಭೇಟಿ ಏನಾಯ್ತು? ಎಂಬ ಕುತೂಹಲ ತೋರಿದ್ದಾರೆ. ನಮಗೂ ಆ ಕುತೂಹಲ ಇತ್ತು. ಆದರೆ ಹೇಳಿಕೊಳ್ಳುವಂತಹ ಬೆಳವಣಿಗೆ ಆಗಿಲ್ಲ. ಇನ್ನು ಕೆಲವು ದಿನದಲ್ಲಿ ತಿಳಿಸುವುದಾಗಷ್ಟೆ ಹೇಳಿದ್ದಾರೆ. ಶಿವಸುಬ್ರಹ್ಮಣ್ಯ ಅವರು (ಓದುಗರೊಬ್ಬರು ಏಕವಚನ ಬೇಡ ಎಂದಿದ್ದಾರೆ. ಅದಕ್ಕೆ ಬೆಲೆಕೊಟ್ಟು...) ತಮ್ಮ ಆಪ್ತರೊಬ್ಬರ ಬಳಿ 'ಸಭೆ ಚೆನ್ನಾಗಿ ನಡೆಯಿತು. ಆದರೆ ಅವರು ಯಾವುದಕ್ಕೂ ಕಮಿಟ್ ಆಗಿಲ್ಲ' ಎಂದು ಹೇಳಿಕೊಂಡಿದ್ದಾರೆ.
ವಿಜಯ ಸಂಕೇಶ್ವರರು ಇನ್ನು ೧೦-೧೫ ದಿನದಲ್ಲಿ ತಿಳಿಸುವುದಾಗಿ ಹೇಳಿದ್ದಾರೆ. ಅದಕ್ಕೆ ಶಿವಸುಬ್ರಹ್ಮಣ್ಯ ಅವರು ತೋಟಕ್ಕೆ, ಕಾಡಿಗೆ ಹೋಗುತ್ತಿರುತ್ತೇನೆ. ಆಗೆಲ್ಲ ಮೊಬೈಲ್ ನಾಟ್ ರೀಚೆಬಲ್ ಆಗಿರುತ್ತದೆ ಎಂದಿದ್ದಾರೆ. ಅದಕ್ಕೆ ಸಂಕೇಶ್ವರ ಅವರು ಪರವಾಗಿಲ್ಲ. ನಿಧಾನವಾಗೆ ತಿಳಿಸುತ್ತೇವೆ ಎಂದಿದ್ದಾರೆ.
ವಿಶೇಷವೆಂದರೆ ನಿನ್ನೆಯ ಭೇಟಿ ಸಂದರ್ಭದಲ್ಲಿ ಸಂಕೇಶ್ವರರ ಜೊತೆ ತಿಮ್ಮಪ್ಪ ಭಟ್ ಕೂಡ ಇದ್ದರು!
ಇದು ಸಂಕೇಶ್ವರರ ಚಾಲಾಕಿ ನಡೆ. ಭೇಟಿ ಸಂದರ್ಭ ತಿಮ್ಮಪ್ಪ ಭಟ್ ಅವರನ್ನು ಇರಿಸಿಕೊಳ್ಳುವ ಮೂಲಕ ಶಿವಸುಬ್ರಹ್ಮಣ್ಯ ಅವರಿಗೆ ಈಗಾಗಲೇ ಒಬ್ಬರು ಇದ್ದಾರೆ ಎಂಬ ಸಂದೇಶ ರವಾನಿಸಿದ್ದಾರೆ. ಇದೆ ಸಮಯದಲ್ಲಿ ತಿಮ್ಮಪ್ಪ ಭಟ್ ಅವರಿಗೆ ಇನ್ನೊಬ್ಬ ಪೈಪೋಟಿಗಿದ್ದಾನೆ ಎಂಬುದನ್ನು ತೋರಿಸಿದ್ದಾರೆ.
ಇದನ್ನೆಲ್ಲಾ ಸಂಕೆಶ್ವರರಿಗೆ ಹೇಳಿಕೊಡಬೇಕಾಗಿಲ್ಲ ಬಿಡಿ!!
4 comments:
nodri ravi belagere office ge bandidrante sankeshwar avaru
vrl ge thimmappa bhat nanthara patrakarthara agamana kuda arambavagide anthe. udayavaniya bahuthekaru(old team) bhattaranna contacgt madiddare anno suddi ide. idakke poorakavagi udayavaniya hosa vinyasa dalli pramukaragidda muvaru resign madiddaranthe.
papa en madodu elli sigthare jana antha group editor allada ravi hegde thale kediskondiddaranthe.
ಮೇಷ್ಟ್ರೇ...
"ಉದಯವಾಣಿ ಹೊಸತನದಲ್ಲಿ ನಕಲಿನ ಘಮಲು" ಎಂಬ ನಿಮ್ಮ ಪೋಸ್ಟ್ ಗೆ ರವಿ ಹೆಗ್ಡೆಯವರ ಉತ್ತರ bit.ly/mtpT23,ಈ ಲಿಂಕ್ ನಲ್ಲಿ ಇದೆ. ದಯವಿಟ್ಟು ಗಮನಿಸಿ.
ಶಿವ ಕಪ್ರದಲ್ಲಿದ್ದಾಗ ಏಕ್ ದಂ ಎಡಿಟರ್ ಸೀಟನಲ್ಲಿ ಕೂರೋವರ್ಗೂ ಚೆನ್ನಾಗೇ ಇದ್ರು. ತನ್ನ ಸಾಮರ್ಥ್ಯ ನೋಡಿ ಸಂಪಾದಕನನ್ನಾಗಿ ಮಾಡಿದ್ರು ಎಂಬ್ ಭ್ರಮೆಯಲ್ಲಿ ಮುಳುಗಿದ್ರು. ಕಂಡಕಂಡವರಿಗೆಲ್ಲಾ ನಾನು ಎಡಿಟರ್ ಕಣೋ ಎಂದು ಕೂಲಿಂಗ್ ಗ್ಲಾಸ್ ಏರಿಸಿಕೊಳ್ಳುತ್ತಾ ಜಂಭ ತೋರಿದ್ರು. ತನ್ನ ಸುತ್ತ ಹೊಗಳುಭಟ್ಟರನ್ನು ಕೂರಿಸ್ಕೊಂಡ್ರು. ಅದೇ ಅವರಿಗೆ ಮುಳುವಾಯ್ತು. ಪರಮ ಶೋಕಿಲಾಲನಾಗಿ ಪಟ್ನದಲ್ಲಿ ಕುಂತ ಶಿವ ತೋಟಕ್ಕೂ ಅನ್ ಫಿಟ್.
- ಬಿ.ಎಸ್.ಕೆ.
Post a Comment