Tuesday 14 June 2011

ಬರಲಿದೆ ಸಂಕೇಶ್ವರರ ಪತ್ರಿಕೆ

ಟೈಮ್ಸ್ ಬಳಗ ಸಂಕೇಶ್ವರರಿಗೆ ವಿಧಿಸಿದ್ದ ಕರಾರು ಮುಗಿದಿದೆ!

ಬಹಳಷ್ಟು ಜನ  ಅಂದುಕೊಂಡಿರುವಂತೆ ಸಂಕೇಶ್ವರ ಮತ್ತು ಟೈಮ್ಸ್ ನಡುವಿನ ಕರಾರು ಆಗಸ್ಟ್ ತಿಂಗಳಲ್ಲಿ ಮುಗಿಯುತ್ತೆ ಎಂದು ನಂಬಿದ್ದರು. ಆದರೆ ಸಂಕೇಶ್ವರ ಅವರ ಆಪ್ತರೊಬ್ಬರು ನೀಡಿದ ಮಾಹಿತಿ ಪ್ರಕಾರ ವಿಜಯ ಕರ್ನಾಟಕ ಖರೀದಿಸಿದಾಗ ೫ ವರ್ಷ ಹೊಸ ಪತ್ರಿಕೆ ಆರಂಭಿಸಬಾರದು ಎಂದು ಟೈಮ್ಸ್ ವಿಧಿಸಿದ್ದ ಕರಾರಿನ ಅವಧಿ ಜೂನ್ ೧೪ಕ್ಕೆ ಕೊನೆಗೊಂಡಿದೆ!

ವಿಜಯ ಕರ್ನಾಟಕ ಮೂಲಕ ವಿಜಯ ಸಂಕೇಶ್ವರರು ಕನ್ನಡ ಪತ್ರಿಕೋದ್ಯಮದಲ್ಲಿ ಕ್ರಾಂತಿ ಮಾಡಿದವರು. ಹೊಸ ಆಯಾಮ ಕೊಟ್ಟವರು. ಅವರು ಈಗ ಮತ್ತೊಮ್ಮೆ ಕನ್ನಡ ಪತ್ರಿಕೋದ್ಯಮದಲ್ಲಿ ಕಾಲಿಡಲು ಕಾತುರರಾಗಿದ್ದಾರೆ. ತಂದೆಗಿಂತ ಅವರ ಪುತ್ರ ಆನಂದ ಸಂಕೇಶ್ವರ ಹೆಚ್ಚು ಆಸಕ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಹಲವು ಪತ್ರಕರ್ತರು ಹೊಸ ಪತ್ರಿಕೆಗೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಸಂಪಾದಕರ ಹುದ್ದೆಗೆ ಕಪ್ರ ಮಾಜಿ ಸಂಪಾದಕ ಶಿವಸುಬ್ರಹ್ಮಣ್ಯ ಟಾವೆಲ್ ಹಾಕಿದ್ದಾರಂತೆ. ಅವರು ಶ್ರೀರಾಮುಲು ಅವರ ಬಂಟನೊಬ್ಬನ ಮೂಲಕ ಸಂಕೇಶ್ವರ್ ಅವರೊಂದಿಗೆ ಭೇಟಿ ಅವಕಾಶ ಗಿಟ್ಟಿಸಿದ್ದಾರೆ. ಆದರೆ ಸಂಕೇಶ್ವರರು "ಅವನೇನು ಅನ್ನೋದು ಗೊತ್ತು ಬಿಡಿ'" ಎಂದು ಭೇಟಿಗೆ ಮೊದಲೇ ನಿರ್ಣಯ ಘೋಷಿಸಿದ್ದಾರೆ!

ಸಂಕೇಶ್ವರರ ಪತ್ರಿಕೆಗೆ ಹೋಗುವವರು ಹೋಗಲಿ ಎಂಬ ಕಾರಣಕ್ಕೆ ಟೈಮ್ಸ್ ಪತ್ರಿಕೆ ವಿಕದಲ್ಲಿ ಇನ್ನು ಸ್ಯಾಲರಿ ಹೆಚ್ಚಿಸಿಲ್ಲ. ಹಿಂದಿನ ವರ್ಷ ಸಾಕಷ್ಟು ಸ್ಯಾಲರಿ ಹೆಚ್ಚಿಸಿದ್ದೇವೆ. ಈ ವರ್ಷ ಮತ್ತೆ ಹೆಚ್ಚಳ ಇಲ್ಲ ಎಂದೂ ಹೇಳಲಾಗುತಿದೆ. ಅಂತು ಈವರೆಗೆ ಸ್ಯಾಲರಿ ಹೆಚ್ಚಿಸಿಲ್ಲ.

ಸಂಕೇಶ್ವರರು ಹೊಸ ಪತ್ರಿಕೆ ಆರಂಭಿಸಿದರೆ ಕನ್ನಡ ಪತ್ರಿಕೋದ್ಯಮದಲ್ಲಿ ಮತ್ತೊಮ್ಮೆ ಭಾರಿ ಪಲ್ಲಟಗಳು ನೋಡಲು ಸಿಗಬಹುದು.

4 comments:

Anonymous said...

sir
yella madhyama gala bagge bari thira adre etv bagge,adara news bagge bareyode ella. ethichina dina galalli etv news thanna gambhirathe kaledu kolluthide.

Anonymous said...

ayyo, eegale udayavani yalli sakastu avantara agide, adara bagge belaku chelli, editior assinment hakodu yelladaru keliddira, udayavani yalli ide

Anonymous said...

ವಿ ಆರ್ ಎಲ್ ಸಮೂಹದ ಬಹುನಿರೀಕ್ಷಿತ ಕನ್ನಡ ದಿನಪತ್ರಿಕೆ ಸಂಪಾದಕರಾಗಿ ತಿಮ್ಮಪ್ಪ ಭಟ್ ನೇಮಕಗೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಜೂ.೨೦ ರಂದು ನಡೆದ ಮಹತ್ವದ ಸಭೆಯಲ್ಲಿ ವಿಜಯಸಂಕೇಶ್ವರ್ ಈ ನಿರ್ಧಾರ ಕೈಗೊಂಡಿದ್ದಾರೆ. ಇದರೊಂದಿಗೆ ಕನ್ನಡ ಪತ್ರಿಕೋದ್ಯಮದಲ್ಲಿ ವಿಜಯಕರ್ನಾಟಕವನ್ನು ಆರಂಭಿಸಿ ನಂಬರ್ ವನ್ ಮಾಡಿದ್ದ ವಿ ಆರ್ ಎಲ್ ಮತ್ತೊಮ್ಮೆ ಸಾಹಸಕ್ಕಿಳಿದಿದೆ. ನವೆಂಬರ್ ನಲ್ಲಿ ಪತ್ರಿಕೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ತಿಮ್ಮಪ್ಪ ಭಟ್ಟರು ಈ ಮೊದಲು ಉದಯವಾಣಿಯಲ್ಲಿ ಸಂಪಾದಕರಾಗಿದ್ದರು. ರವಿ ಹೆಗಡೆಯವರ ವಲಸೆಯಿಂದಾಗಿ ತಿಮ್ಮಪ್ಪ ಭಟ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Anonymous said...

ಒಂದು ವೇಳೆ ಶಿವನ ಕೈಗೆ ಸಂಕೇಶ್ವರ್ ಪತ್ರಿಕೆ ಇಟ್ಟರೆ ಓಂ ನಮಃ ಶಿವಾಯ ಎನ್ನುವುದು ಗ್ಯಾರಂಟಿ....