Thursday 14 April 2011

ಬದುಕಿದ್ದವರನ್ನು ಕೊಲ್ಲಬಹುದೇ ಕುಮಾರನಾಥ? ರಾಮ ರಾಮಾ!


ಕುಮಾರನಾಥ್ ಬಗ್ಗೆ ಬರೆದ ಲೇಖನಕ್ಕೆ ಓದುಗರೊಬ್ಬರು ಕಾಮೆಂಟ್ ಕಳುಹಿಸಿದ್ದಾರೆ. ಈ ಕಾಮೆಂಟಿನ ಸ್ಪೆಷಾಲಿಟಿ ಏನೆಂದರೆ ಕಾಮೆಂಟ್ ಹಾಕಿದವರು ಹೆಸರನ್ನು ಹಾಕಿದರು. ಆದರೆ ಅವರ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ.  ಅವರ ಕಾಮೆಂಟ್ ಪೂರ್ಣ ರೂಪವನ್ನು ಇಲ್ಲಿ ಪ್ರಕಟಿಸಲಾಗಿದೆ.

ಕುಮಾರ್ ನಾಥ್ ಬಗ್ಗೆ ನಮ್ಮ ಮಂಗಳೂರಲ್ಲಿ ಸಾಕಷ್ಟು ಜೋಕ್ ಗಳು ಹುಟ್ಟಿಕೊಂಡಿವೆ. ಅದರಲ್ಲಿ ಒಂದು ಹೀಗಿದೆ.
 
ಅವರು ಜೆ. ರಾಮ ಎಂಬ ಮಂಗಳೂರು ಕಾರ್ಪೊರೇಟರ್ ನಿಧನರಾಗಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಕಟಿಸಿ ಅವರನ್ನು ಜೀವಂತ ಸಾಯಿಸಿದ್ದರು.!

ಒಮ್ಮೆ ಪೋಸ್ಟ್ ನಲ್ಲಿ ಯಾರೋ ನಿಧನ ವಾರ್ತೆ ಕಳುಹಿಸಿದ್ದರು. ಅದನ್ನು ಕ್ರಮವಾಗಿ ವರದಿಗಾರರಿಗೆ ನೀಡಬೇಕಿತ್ತು. ಸದಾ ತನ್ನ ಕೆಳಗಿನ ಸಿಬ್ಬಂದಿ ತಪ್ಪು ಹಿಡಿಯುವ ಚಟದ ಕುಮಾರ ಕಾರ್ಡ್ ಬಗ್ಗೆ ಹೇಳದೆ ವರದಿಗಾರರು ಹೋದ ಬಳಿಕ ತನ್ನ ಚೇಲಾ ಉಪಸಂಪಾದಕನಿಗೆ ಅಂಚೆ ಕಾರ್ಡ್ ಕೊಟ್ಟು ನಿಧನ ಸುದ್ದಿ ಮಾಡುವಂತೆ ಹೇಳಿದ.

ಚೇಲಾ ಕೇಳಿದನಂತೆ ಕಾರ್ಡ್ ನಲ್ಲಿ ಯಾವಾಗ ನಿಧನ ಎಂದು ಬರೆದಿಲ್ಲ. ಯಾವಾಗ ಬರೆಯಲಿ ಎಂದನಂತೆ. ಅದಕ್ಕೆ ಕಾರ್ಡ್ ಬರಲು ಒಂದು ದಿನ ಬೇಕು. ನಿನ್ನೆ ನಿಧನ ಎಂದು ಬರೆಯುವಂತೆ ಅತಿ ಬುದ್ಧಿವಂತ ಕು.ನಾಥ ಹೇಳಿದ್ದ. ಅಂಚೆ ಕಾರ್ಡ್ನ್ ನಲ್ಲಿ ಜಾಹೀರಾತು ನೀಡುತ್ತೇವೆ ಎಂದು ಬರೆದಿತ್ತಂತೆ ಮತ್ತು ಶ್ರೀಯುತರು ನಿಧನರಾದರೂ ತಮ್ಮ ಸಂಪತ್ತನ್ನು ಮಕ್ಕಳಿಗೆ ನೀಡದೆ ಬೇರೆಯವರಿಗೆ ಹಂಚಿದ್ದರು ಎಂದು ಬರೆದಿತ್ತು.

ಸಾಮಾನ್ಯ ಜನರಿಗೂ ಇದು ವಂಚನೆ ಇರಬಹುದು ಎಂದು ಗೊತ್ತಾಗುವಂತಿತ್ತು. ಆದರೆ ಕುಮಾರ ಮತ್ತು ಶಿಷ್ಯ ನಿಧನ ಸುದ್ದಿ ಬರೆದೇ ಬಿಟ್ಟರು. ಮರುದಿನ ಬೆಳಗ್ಗೆ ವರದಿಗಾರರಿಗೆ ದಬಾಯಿಸಬೇಕು ಎನ್ನುವುದು ಕುಮಾರನ ಉದ್ದೇಶ. ಆದರೆ ಎಡವಟ್ಟಾಗಿದ್ದೇ ಮರುದಿನ.

ಬೆಳಿಗ್ಗೆ ಜೆ.ರಾಮ ಮನೆಗೆ ಹೂಗುಚ್ಛ ನೀಡಲು ಸಾಲು ಸಾಲು ಮಂದಿ. ಸಾಯದೆ ಜೀವಂತ ಇದ್ದು ಬೆಳ್ಳಂಬೆಳಗ್ಗೆ ಚಾ ಕುಡಿಯುತ್ತಿದ್ದ ಜೆ.ರಾಮರಿಗೆ ಸಿಟ್ಟು, ಆಕ್ರೋಶ. ಸಂತಾಪ ಎಲ್ಲ ಬಂದಿತ್ತು. ಸಂಜೆ ಪತ್ರಿಕೆ ವರದಿಗಾರನೊಬ್ಬ ಜೆ.ರಾಮ ಅವರ ಮೊಬೈಲ್ಗೆ ಕರೆ ಮಾಡಿ "ಏಪ ದೆಪ್ಪರೆಗೆ" (ಯಾವಾಗ ಶವ ಎತ್ತಿ ಸಂಸಸ್ಕಾರ ಮಾಡುತ್ತಾರೆ) ಕೇಳಿದ್ದ. ಜನ ಜಂಗುಳಿ ಹೆಚ್ಚಾಗಿ ಗಲಾಟೆ ಆಗಿ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು.

ಇದೊಂದೇ ಅಲ್ಲ. ಅನೇಕ ಮಂದಿ ಜೀವಂತ ಇದ್ದವರನ್ನು ನಿಧನ ಕಾಲಂನಲ್ಲಿ ಪ್ರಕಟಿಸಿದ ಕೀರ್ತಿ ನಾಥನದ್ದು. ತಾನೇ ಮಾಡಿದರೂ ಇದನ್ನು ಸಿಬ್ಬಂದಿ ಮೇಲೆ ತಪ್ಪು ಹೊರಿಸಿ ಬಚಾವ್ ಆಗಿದ್ದಾನೆ. 

ನಿಜಕ್ಕೂ ಕತ್ತಿಗಿಂತ ಪೆನ್ನು ಹರಿತ!!!!!!!!!!!!!

ಇದು ಕುಮಾರ ವಿಶೇಷತೆ. ಆದರೆ ಸುದ್ದಿಮನೆ ಕಾಲಂನಲ್ಲಿ ಒಂದೂ ಬಾರಿಯೂ ಈ ಕು.ನಾಥನ ಸಾಹಸ ಬರೆಯದೆ ವಿ. ಭಟ್ಟರು ಪ್ರೀತಿ ತೋರಿಸಿದ್ದು ಇಂದಿಗು ಅರ್ಥವಾಗಿಲ್ಲ.

ವಿ.ಭಟ್ಟರಿಗೆ ಈಗ ಅರ್ಥ ಆಗಿರಬಹುದು! ಆದರೆ ಕು.ನಾಥ ವಿಕ ಮೇಲೆ ಚಪ್ಪಡಿ ಕಲ್ಲು ಎಳೆದಾಗಿದೆ. 75 ಸಾವಿರ ವಿಕ ಮಂಗಳೂರು ಸರ್ಕ್ಯುಲೇಶನ್ 45 ಸಾವಿರಕ್ಕೆ ಇಳಿಸಿದ ಕೀರ್ತಿಯೂ ಈತನಿಗೆ ಸಲ್ಲಬೇಕು.

ಈ ಬಗ್ಗೆ ವಿಸ್ತ್ರುತ ಕಮೆಂಟ್ ಇನ್ನೊಮ್ಮೆ ಕಳುಹಿಸುತ್ತೇನೆ.

(ಕಾಮೆಂಟು ಕಳುಹಿಸಿದವರಿಗೆ ದನ್ಯವಾದ. ಸತ್ಯ ಮಾಹಿತಿಗಳಿಗೆ ಸದಾ ಸ್ವಾಗತ)

14 comments:

Anonymous said...

Friend,

Where is Our Boss Mr. H R Ranganath. i am not watching him in any TV. where he is now? i got a information ie, he is going to Join Udayavani, his friend is also invited him. at the same time Udayavani CEO Mr. Vinod submited papers to his Boss for this reason. Vinod want to take Mr. Ranga to Udayavani.



Pls find, i am FAN of RANGA i want to follow him. i hope you will do.

Anonymous said...

ree swami...
75 laksha allari... 75 savir irbeku nodi....

anda

Anonymous said...

75 ಲಕ್ಷ ವಿಕ ಮಂಗಳೂರು ಸರ್ಕ್ಯುಲೇಶನ್ 45 ಸಾವಿರಕ್ಕೆ ಇಳಿಸಿದ ಕೀರ್ತಿಯೂ ಈತನಿಗೆ ಸಲ್ಲಬೇಕು.
75 ಲಕ್ಷ ......!!!!! ???

Anonymous said...

There are several such stories/bloomer/blunders willfully committed by Kumaranatha.
One some Fire broke out in Campco godown Mamayee Temple road puttur.
Kumaranatha, who dont kbwo basic journalsim , deleted date line puttur and put Mangalore...the road made the diffrence..
There is no MT road in Mangalore ..

Media Mind said...

75 ಲಕ್ಷದ ತಪ್ಪನ್ನು ಸರಿಪಡಿಸಲಾಗಿದೆ.

ಯಾವನೊ ಬುದ್ದಿಗೇಡಿ ಕು.ನಾಥನ ಕುರಿತು ಸುಳ್ಳು ಬರೆದಿದ್ದೀರಿ ಎಂದಿದ್ದಾನೆ. ಒಂದು ವಿಷಯ ಸುಳ್ಳಾಗಿದ್ದರೂ ನಾವು ತಕ್ಷಣದಿಂದ ಬ್ಲಾಗು ನಿಲ್ಲಿಸಲು ಸಿದ್ಧರಿದ್ದೇವೆ. ಸತ್ಯವಾಗಿದ್ದಲ್ಲಿ ಕು.ನಾಥ ಅಥವಾ ಕಾಮೆಂಟ್ ಹಾಕಿದವರು ಪತ್ರಿಕೋದ್ಯಮ ಬಿಡಲು ಸಿದ್ಧರಿದ್ದಾರೆಯೇ?

Mediapepper said...

If U Don't Mind not 75 or 45 that is only 25.. Is Right..?

Anonymous said...

Dear Media mind,
We have documental evidence against Kumaranatha"s misdeeds. We have copies of J.Rama death news press release, paper cuttings of major bloomers, CD's, some bills of making money,BAR & restora bills etc
Don't worry, let his he & his Chelas file case against you. We have documents against his chelas, money collectors as well...

Anonymous said...

Vijay karnataka mangalore lost 3/4 of copies last five years.
Vijay karnataka subscribed in rural areas where Udayavani and Hosadigntha not available.
Times of India dumps copies for ciculation figure..
And, there whooping 51 reporters and sub editors are iN MaNgalore VK and 99% useless people, who are all broght from Karavali Ale evening paper of BVC and Communal Hosadiganth paper by KUmaranatha

Anonymous said...

ಸಾರ್ ಕು.ನಾಥನ ವಿಕ ಕುಲಗೆಡಿಸಿದ ಇನ್ನೂ ಜ್ವಲಂತ ಜೋಕುಗಳಿವೆ. ವಿಮಾನ ದುರಂತ ಆದಾಗ ಸ್ಪೆಷಲ್ ಬುಲೆಟಿನ್ ಮಾಡಿದ್ರು. ಇದು ಬಿಸಿ, ಬಿಸಿ ದೋಸೆ ಹಾಗೆ ಖರ್ಚಾಯಿತು ಎಂದು ಆತನೇ ಹೆಸರು ಹಾಕಿ ಸಂಪಾದಕೀಯ ಬರೆದಿದ್ದ. ಪಾಪ ಯಾರ್ಯಾರು ಜೀವ ಕಳೆದುಕೊಂಡರೂ ಈತನಿಗೆ ಪೇಪರ್ ಖರ್ಚಾಗಿರುವುದು ಖುಷಿ ಕೊಟ್ಟಿದೆ. ಇದ್ದರೆ ಇಂಥವರು ಇರಬೇಕಯ್ಯ ? ಇದನ್ನು ನೀವೆ ತನಿಖೆ ಮಾಡಿ ಬರೆದರೆ ಚೆನ್ನ. ಇಂಟರ್ನೆಟ್ಗ್ ಗಳಲ್ಲಿ ಈ ಸುದ್ದಿ ಹರಿದಾಡಿತ್ತು.

Mediapepper said...

I think for costal Belt is Udayavani is & For state Kannada prabha is best Dailys.. am I Right.?

Anonymous said...

@strightforward, you may right. Udayavani was never a instrument for communal clash in Mangalore.
But, Carstreet born Ukumarnath & his ilk in Vijay Karnataka sole intension is make communal clash...
He is Gosumbe...
B.V.Seetaram & M.FSaldhana filed several cases against Kumarnath & VK..
Kumarnath misuesd V.Bhta's name..
Kumarnath is in teh pay list of Sangha Parivar thats secret...

Anonymous said...

Kumaranatha mathu Ramakrishna Eegagale Aravinda Navada viruddha Shadtantra arambisiddane anthe...

Anonymous said...

Dalith Organisation in Mangalore now Planing to sue Vijay karnataka Resident Editor Kumarnath, E.Raghavan, Sunil Rajshekhar, Dwarakanath for Anti-Dalith stance of Kumarnatah and his team.
THey already filed memorandum to the Government t/h DC Dakshina Kannada.
Vijay Karnataka in Mangalore faceing highest number of criminal cases for malicious, defamatory,one sides, unethical practice of journalism.

Anonymous said...

ನಾ ಕೇಳಿದ್ದು,ಇದು ವಿಕ ಮಂಗಳೂರು ಕಚೇರಿಯ ಹಿರಿಯ ವರದಿಗಾರ ಹೇಳಿದ ಮಾತಿದು.ಕುಮಾರನಾಥನ (ಕೆಲಸದ)ಮೇಲೆ ವಿಕ ಕ ಮಾಜಿ ಒಡೆಯರಾದ ಸಂಕೇಶ್ವರರು ಎಷ್ಟು ಇಂಪ್ರೆಸ್ ಆಗಿದ್ದರೆಂದರೆ ಅವರ ಖಾಸಾಗಿ ಅಕೌಂಟಿನಿಂದ ಪ್ರತಿ ತಿಂಗಳು ಕುಮಾರನಾಥರ ಹೆಂಡತಿಗೆ ರೂ.3,000 ಕೊಡ್ತಾ ಇದ್ದರಂತೆ.ಆದ್ದರಿಂದ ಕುಮಾರನಾಥರ ಬಗ್ಗೆ ಅಲ್ಲಸಲ್ಲದು ಬರೆಯುವುದು ಸರಿಯಲ್ಲವಂತೆ..