Thursday 28 April 2011

ಟೀಕೆಗಳಿಗೆ ಟಿಪ್ಪಣೆ

ಹೆಚ್ಚಿನ ಕಾಮೆಂಟ್ ಗಳು ಟೀಕೆ ರೂಪದಲ್ಲಿ ಬಂದಿವೆ. ಓದುಗರ ಅಭಿಪ್ರಾಯಕ್ಕೆ ತಲೆಬಾಗುವೆವು. ಹಾಗೆಯೇ ಮೈಸೂರಿನ ನಿಮಿಷಾಂಬ ಎಂಬವರು ಒಂದು ಕಾಮೆಂಟ್ ಹಾಕಿದ್ದಾರೆ. ಅದನ್ನು ಇಲ್ಲಿ ಪ್ರಕಟಿಸಲಾಗಿದೆ.
ಟೀಕೆ ಮಾಡಿದ ಈ ಬ್ಲಾಗ್ ನ ಓದುಗರು ಕೆಲಸ ಮಾಡುವ ಕಛೇರಿಯನ್ನು ಡಬ್ಬ ಎಂದು ಕರೆಯುವುದು ಎಷ್ಟು ಸರಿ? ಎಂಬುದರ ಕುರಿತೂ ಉತ್ತರಿಸಿದ್ದರೆ ಒಳ್ಳೆಯದಿತ್ತು. ಹಾಗೆ ಮಾಡಿಲ್ಲ. ಬದಲಾಗಿ ಹಾಗೆ ಮಾಡಿದ್ದನ್ನು ಬರೆದಿದ್ದೆ ತಪ್ಪು ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಪತ್ರಕರ್ತರು ಬರವಣಿಗೆ ಮೂಲಕ ಜಗತ್ತಿಗೆಲ್ಲ ಉಪದೇಶ ನೀಡುತ್ತಾರೆ. ಅಂತಹ ಪತ್ರಕರ್ತರು ಒಂದು ಕಚೇರಿಯಲ್ಲಿ  ಕೆಲಸ ಮಾಡುವಾಗ ಅಲ್ಲಿಗೆ ನಿಷ್ಠರಾಗಿರಬೇಕು. ಇಷ್ಟವಿಲ್ಲ ಎಂದಾದರೆ ಬಿಟ್ಟು ಹೋಗಬೇಕು. ಅದು ಬಿಟ್ಟು ಅಲ್ಲೇ ಇದ್ದು, ಕಚೇರಿ ವಿರುದ್ಧ ಮಾತನಾಡುವುದು ಸರಿಯಲ್ಲ. ಇದು ಪತ್ರಕರ್ತರಿಗೆ ಎಂದಲ್ಲ ಎಲ್ಲರಿಗು ಅನ್ವಯವಾಗುವ ಮಾತು.

ಇದು ಕಾಮೆಂಟ್ ಮಾಡುವವರಿಗೆ ಗೊತ್ತಿದ್ದರೆ ಸಾಕು... ನಿಮಿಷಾಂಬ

ನಾವು ಬರೆಯುವಾಗಲೇ ಹೇಳಿದ್ದೆವು, ಇದು ಯಾರನ್ನು ನೋಯಿಸುವ, ಅವರ ಖಾಸಗಿ ವಿಷಯವನ್ನು ಹರಾಜು ಹಾಕುವ ಉದ್ದೇಶವಲ್ಲ ಎಂದು. ಅವರ ಚಾಟಿಂಗ್ ನ ವಿಷವನ್ನಷ್ಟೇ ನಾವು ಪ್ರಶ್ನಿಸಿದ್ದೆವು. ಅವರು ಕೋತಿ ಎಂದಾದರು ಕರೆಸಿಕೊಳ್ಳಲಿ, ನಿಜಕ್ಕೂ ಹಾಗೆಯೇ ಇರಲಿ ನಮಗೆ ಅದರ ಬಗ್ಗೆ ಕಾಳಜಿಯಿಲ್ಲ. ಅದರ ಕುರಿತು ನಾವು ಬರೆದೂ ಇಲ್ಲ. ಬರವಣಿಗೆಯ ಉದ್ದೇಶ ಓದುಗರಿಗೆ ಅರ್ಥವಾದರೆ ಸಾಕು.

Saturday 23 April 2011

ಚೇತನಾ-ನೇಸರ-ಶಿವ

ಪತ್ರಿಕಾ ಕಛೇರಿಗಳಲ್ಲಿ ಓತ್ಲಾ ಹೊಡೆದುಕೊಂಡು ಇರುವವರಿದ್ದಾರೆ. ಅದನ್ನು ಸ್ವಯಂ ಘೋಷಿಸಿಕೊಂಡವರು ಕಡಿಮೆ. ಇಲ್ಲೊಬ್ಬರು ಆ ಕೆಲಸವನ್ನು ಮಾಡಿದ್ದಾರೆ. ಒಬ್ಬರು ಕೆಪಿ ಬಿಟ್ಟು ವಿಜಯ ನೆಕ್ಸ್ಟ್ ಸೇರಿಕೊಂಡವರು. ಇನ್ನೊಬ್ಬರು ಕನ್ನಡಪ್ರಭದಲ್ಲಿ ಮೈಸೂರಿನಲ್ಲಿ ಇರುವವರು. ಇಬ್ಬರ ನಡುವೆ ಶಿವ!

ನೇಸರ ಕಾಡನಕುಪ್ಪೆ ಮತ್ತು ವಿಜಯ ನೆಕ್ಸ್ಟ್ ನಲ್ಲಿರುವ ಚೇತನ ತೀರ್ಥಹಳ್ಳಿ ಅವರ ನಡುವಿನ ಚಾಟ್ ಸಂಭಾಷಣೆಯನ್ನು ವಿಜಯ ನೆಕ್ಸ್ಟ್ ನಲ್ಲಿರುವ ನನ್ನ ವಿದ್ಯಾರ್ಥಿನಿ ಕಳುಹಿಸಿದ್ದಾರೆ. ಟೈಮ್ಸ್ ನಲ್ಲಿ ಇಂತಹ ಚಾಟ್ ಗಳೆಲ್ಲ ರೆಕಾರ್ಡ್ ಆಗುತ್ತಂತೆ. ಅದನ್ನೇ ಆಕೆ ಕಳುಹಿಸಿದ್ದಾಳೆ. ನಿಮ್ಮ ಅವಗಾಹನೆಗಾಗಿ ಇಲ್ಲಿ ಕೊಡಲಾಗಿದೆ.

ಕೆಲವರು ಊರಿಗೆಲ್ಲ ಉಪದೇಶ ಮಾಡುತ್ತಾರೆ. ತಾವು ಮಾತ್ರ ಕಚೇರಿಯಲ್ಲಿ ಕುಳಿತು ಇಂತಹ ಚಿಲ್ಲರೆ ಬುದ್ದಿ ತೋರಿಸುತ್ತಾರೆ. ಪ್ರೆಸ್ ಮೀಟ್ ಗಳಲ್ಲಿ ರಾಜಕಾರಣಿಗಳನ್ನು ಗೊಳುಹೊಯ್ದುಕೊಳ್ಳುವ, ಬರಹಗಳ ಮೂಲಕ ನೀತಿಪಾಠ ಹೇಳುವ, ಸಮಾಜ ಸುಧಾರಕರ ರೂಪ ಧರಿಸುವ ಪತ್ರಕರ್ತರ ಒಳಮನಸ್ಸು ಹೇಗಿರುತ್ತದೆ ಎಂಬುದು ಇದರಿಂದ ತಿಳಿಯುತ್ತದೆ.

ನೀವು ಅದನ್ನು ಓದುವುದಕ್ಕೂ ಮೊದಲು ಇನ್ನೊಂದು ವಿಷಯ. ಇದನ್ನು ಇಲ್ಲಿ ಪ್ರಕಟಿಸಿರುವುದು ಯಾರನ್ನು ಅವಹೇಳನ ಮಾಡಲು ಅಥವಾ ವ್ಯಕ್ತಿತ್ವ ಹರಣ ಮಾಡಲು ಅಲ್ಲ. ಖಾಸಗಿ ವಿಷಯದಲ್ಲಿ ಮೂಗು ತೋರಿಸುವುದು ಕೂಡ ನಮ್ಮ ಉದ್ದೇಶ ಅಲ್ಲ. ಎರಡು ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ಏನೇನು ಮಾತನಾಡಿಕೊಳ್ಳುತ್ತಾರೆ ಎಂಬುದನ್ನಷ್ಟೇ ತಿಳಿಸುವುದು ನಮ್ಮ ಉದ್ದೇಶ.

 

Friday 22 April 2011

ಇದು ವಿಚಿತ್ರ ಆದರು ಸತ್ಯ!

ಅವರು ಗ್ರೂಪ್ ಎಡಿಟರ್! 
ಗ್ರೂಪ್ ತೆಗೆದುಕೊಂಡು ಬಂದವರು ಎಂಬ ಕಾರಣಕ್ಕೆ!

ಇದು ಉದಯವಾಣಿ ಸಂಪಾದಕ ರವಿ ಹೆಗ್ಡೆ ಸ್ಥಿತಿ!

ರವಿ ಹೆಗ್ಡೆ ಇತ್ತೀಚಿಗೆ ಉದಯವಾಣಿ ಗ್ರೂಪ್ ಎಡಿಟರ್ ಆಗಿ ಸೇರಿದ್ದರು. ಎಡಿಟರ್ ಎಂದ ಮೇಲೆ ಪತ್ರಿಕೆಯಲ್ಲಿ ಅವರ ಹೆಸರು ಬರುವುದು ರೂಢಿ. ಇಂದಿಗೂ ರವಿ ಹೆಗ್ಡೆ ಹೆಸರು ಉದಯವಾಣಿ ದಕ್ಷಿಣ ಕನ್ನಡ ಎಡಿಶನ್ ನಲ್ಲಿ ಪ್ರಕಟವಾಗುತ್ತಿಲ್ಲ! ಉಡುಪಿ, ಮಂಗಳೂರು ಮುಂತಾದ ಕಡೆಗಳಲ್ಲಿ ರವಿ ಹೆಗ್ಡೆ ಹೆಸರು ಪ್ರಕಟವಾಗುತ್ತಿಲ್ಲ.!

ಉದಯವಾಣಿ ಅತ್ಯಂತ ಹೆಚ್ಚು ಪ್ರಸಾರ ಸಂಖ್ಯೆ ಹೊಂದಿರುವುದು ಈ ಪ್ರದೇಶದಲ್ಲಿ. ಅಂದರೆ ಹೆಚ್ಚು ಪ್ರಸಾರ ಇರುವಲ್ಲಿ ರವಿ ಹೆಗ್ಡೆ ಹೆಸರು ಬರುತ್ತಿಲ್ಲ!

ಇದು ವಿಚಿತ್ರ ಆದರೂ ಸತ್ಯ!

ಇದರ ಅರ್ಥ ರವಿ ಹೆಗಡೆಯನ್ನು ಉದಯವಾಣಿ ಗುಂಪು ಇನ್ನೂ ಒಳಗೆ ಬಿಟ್ಟುಕೊಂಡಿಲ್ಲ ಎಂದೇ? ರವಿ ಹೆಗ್ಡೆ ಉದಯವಾಣಿ ಗ್ರೂಪ್ ಎಡಿಟರ್ ಆಗಿ ಆಗಲೇ ೩ ತಿಂಗಳಾಗುತ್ತಿದೆ. ಅವರು ಈವರೆಗೆ ಉದಯವಾಣಿಯ ಹೃದಯ ಎಂದು ಕರೆಯಲಾಗುವ ಮಣಿಪಾಲಕ್ಕೆ ಭೇಟಿಕೊಟ್ಟಿಲ್ಲವಂತೆ!

ಈ ಬಗ್ಗೆ ಉದಯವಾಣಿಯಲ್ಲಿ ವಿಚಾರಿಸಿದಾಗ ತಿಳಿದುಬಂದಿದ್ದೇನೆಂದರೆ, ಉದಯವಾಣಿ ಗ್ರೂಪ್ ನವರಿಗೆ ರವಿ ಹೆಗ್ಡೆ ಸಾಮರ್ಥ್ಯದ ಬಗ್ಗೆ ಅನುಮಾನವಿದೆ. ಈ ಕಾರಣಕ್ಕಾಗಿ ಮಣಿಪಾಲ್ ಗ್ರೂಪಿನ ಮೋಹನದಾಸ್ ಪೈ ಅವರು ರವಿ ಹೆಗ್ಡೆ ಹೆಸರನ್ನು ಮಣಿಪಾಲದ ವ್ಯಾಪ್ತಿಯ ಪತ್ರಿಕೆಗಳಲ್ಲಿ ಸೇರಿಸದಂತೆ ಸತೀಶ್ ಪೈ ಅವರಿಗೆ ಸೂಚಿಸಿದ್ದಾರಂತೆ. ಪರಿಣಾಮ ಅಲ್ಲಿ ರವಿ ಹೆಗ್ಡೆ ಹೆಸರು ಕಟ್! 

ಬೆಂಗಳೂರು ಮತ್ತು ಹುಬ್ಬಳ್ಳಿ ಎಡಿಶನ್ ನಲ್ಲಿ ಮಾತ್ರ ಅವರ ಹೆಸರು ಪ್ರಕಟವಾಗುತ್ತಿದೆ. ಈ ಬೇಸರದಿಂದಲೋ ಏನೋ ಹುಬ್ಬಳ್ಳಿ ಎಡಿಶನ್ ಉಧ್ಘಾಟನೆಗೆ ಹೋಗಿದ್ದು ಬಿಟ್ಟರೆ ಅವರು ಮತ್ತೆ ಅಲ್ಲಿಗೂ ತಲೆ ಹಾಕಿಲ್ಲವಂತೆ.

ಹೀಗಾಗಿ ರವಿ ಹೆಗ್ಡೆ ಈಗ ಗ್ರೂಪ್ ಜೊತೆಗೆ ಉದಯವಾಣಿ ಸೇರಿಕೊಂಡವರು ಎಂಬ ಕಾರಣಕ್ಕೆ ಗ್ರೂಪ್ ಎಡಿಟರ್ ಎಂದು ಕರೆಸಿಕೊಳ್ಳುವಂತಾಗಿದೆ.

Thursday 21 April 2011

ಸುಭಾಷ್ ಹೂಗಾರ ಮರಳಿ ಹುಬ್ಬಳ್ಳಿಗೆ ಹೋಗ್ಯಾರ

ಸ್ವಲ್ಪ ದಿನದ ಪ್ರಜಾವಾಣಿ ಮತ್ತು ಸುವರ್ಣ ಚಾನಲ್ ಪ್ರವಾಸ ಮುಗಿಸಿದ ಸುಭಾಷ್ ಹೂಗಾರ ಮರಳಿ ಹಳೆ ಹೆಂಡತಿ ಪಾದವೇ ಗತಿ ಎಂದು ವಿಕ ಹುಬಳ್ಳಿ ಆವೃತ್ತಿ ಮುಖ್ಯಸ್ಥರಾಗಿ ಸೇರಿಕೊಂಡಿದ್ದಾರೆ.

ವೈದ್ಯರ ಕುರಿತು ಬರೆದರೆಂಬ ಕಾರಣಕ್ಕೆ ವಿಕ ಹಳೆಯ ಮಾಲಿಕರಾದ ವಿಜಯ ಸಂಕೇಶ್ವರರು ಸುಭಾಷ್ ಹೂಗಾರನನ್ನು ಕೆಟ್ಟದಾಗಿ ಹೊರಗಟ್ಟಿದ್ದರು. ವಿಜಯ ಸಂಕೇಶ್ವರರು ಹೀಗೆ ಹಲವರನ್ನು ಹೊರಹಾಕಿದ್ದರಂತೆ.

ಕೆಲದಿನದ ಹಿಂದೆ ಸುಭಾಷ್ ಹೂಗಾರ ವಿಕ ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥರಾದರು ಎಂಬ ಸುದ್ದಿ ಬಂದಾಗಿಂದ ಅವರ ಬಗ್ಗೆ ಮಾಹಿತಿಗಾಗಿ ನಾವು ಪ್ರಯತ್ನಿಸುತ್ತಿದ್ದೆವು. ಅಂತೂ ಹುಬ್ಬಳ್ಳಿ ಬ್ಯೂರೋದ ಡೆಸ್ಕ್ ಪತ್ರಕರ್ತರೊಬ್ಬರು ಹಾಗು ವಿಕ ಬೆಂಗಳೂರು ಕಛೇರಿಯಲ್ಲಿರುವ ನನ್ನ ವಿದ್ಯಾರ್ಥಿಯೊಬ್ಬರು ಸಹಾಯಕ್ಕೆ ಬಂದರು.
ಅವರಿಬ್ಬರೂ ಸುಭಾಷ್ ಹೂಗಾರ ಕುರಿತು ಒಂದಷ್ಟು ಮಾಹಿತಿ ಒದಗಿಸಿದರು. ಅವರಿಬ್ಬರೂ ಹೇಳಿದ್ದೇನೆಂದರೆ...
 
ಸುಭಾಷ್ ಹೂಗಾರ ಗೆಳೆಯರ ಬಳಗದಲ್ಲಿ ೩ ಎಂಡ್ ಹಾಫ್ ಎಂದೇ ಫೇಮಸ್. ಕೆಲವು ಬಾರಿ ಅವರ ಬುದ್ದಿ ಕೂಡ ಅಷ್ಟೇ ಕಳಗೆ ಇಳಿಯುವುದು. ಪರಮ ಆಲಸಿ. ವಿಕದಲ್ಲಿದ್ದಾಗ ಅವರಿಗೆ ಉತ್ತರ ಕರ್ನಾಟಕದ ಕುರಿತು ಉತ್ತರಾಯಣ ಎಂಬ ಅಂಕಣ ಬರೆಯುವಂತೆ ಸೂಚಿಸಲಾಗಿತ್ತಂತೆ. ಕಷ್ಟಪಟ್ಟು ೪ ಕಂತು ಬರೆದ ಸುಭಾಷ್ ಹೂಗಾರ ೫ನೇ ಕಂತಿಗೆ ಉತ್ತರಾಯಣ ಅಂಕಣದ ಉತ್ತರಕ್ರಿಯೆ ಮಾಡಿದ.

ಸಂಕೇಶ್ವರರು ಓಡಿಸಿದ ನಂತರ ಪ್ರಜಾವಾಣಿ ಸೇರಿದ. ಅಲ್ಲಿಂದ ಹಾರಿದ್ದು ಸುವರ್ಣಕ್ಕೆ. ಅಲ್ಲಿ ರಂಗನಾಥ್ ಸ್ವಲ್ಪದಿನ ಈತನಿಗೆ ಪ್ರೋತ್ಸ್ಸಾಹ ನೀಡಿದರು. ಆದರೆ ಸುಭಾಷ್ ಹೂಗಾರ ಸಾಮರ್ಥ್ಯ ಏನು ಎಂಬುದು ಗೊತ್ತಾದ ಮೇಲೆ ಮೂಲೆಗೆ ತಳ್ಳಿದ್ದರು. ಸುವರ್ಣದಲ್ಲಾದ ಬದಲಾವಣೆಯಿಂದಾಗಿ ಸುಭಾಷ್ ಹೂಗಾರ ಮರಳಿ ಹುಬ್ಬಳ್ಳಿ ಸೇರಿದ್ದಾರೆ. ಭೂಮಿ ರೌಂಡ್ ಆಗಿದೆ ಎಂಬುದು ಅವರ ವಿಷಯದಲ್ಲಿ ನಿಜವಾಗಿದೆ!

ಹುಬ್ಬಳ್ಳಿಗೆ ಹೋಗಿ ಸೇರಿದ ನಂತರ ಸುಭಾಷ್ ಹೂಗಾರ ಕಚೇರಿಯಲ್ಲಿ ಫುಲ್ ದರ್ಬಾರು ನಡೆಸಿದ್ದರಂತೆ. ನೀನು ಏನು ಮಾಡಿದ್ದಿ ಎಂಬುದು ಗೊತ್ತು ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದಾರಂತೆ. ಆದರೆ ಹುಬ್ಬಳ್ಳಿ ಕಚೇರಿ ಸಿಬ್ಬಂದಿಗೂ ಬೆಂಗಳೂರಿಗೆ ಹೋಗಿ ಏನು ಮಾಡಿದರು ಎಂಬುದು ಗೊತ್ತು. ಹೀಗಾಗಿ ಹಿಂದಿನಿಂದಾ ನಗುತ್ತಿದ್ದಾರಂತೆ.

ಸುಭಾಷ್ ಹೂಗಾರ ಎಂತಹ ವ್ಯಕ್ತಿ ಎಂದರೆ ಬ್ಲಾಗಲ್ಲಿ ತಮ್ಮ ಕುರಿತು ಬರೆದದ್ದನ್ನು ಓದಿ ನಾನು ಇಷ್ಟು ದೊಡ್ಡ ವ್ಯಕ್ತಿಯಾದೆ ಎಂದು ಸಂತೋಷ ಪಟ್ಟರು ಅಚ್ಚರಿಯಿಲ್ಲ!

Sunday 17 April 2011

ಯಾರಿವನ್, ಈ ರಾಘವನ್?

ಹೆಸರು ತಮಿಳರದ್ದು
ಹುಟ್ಟಿದ್ದು ಕರ್ನಾಟಕದಲ್ಲಿ
ಕೆಲಸ ಮಾಡಿದ್ದು ಇಂಗ್ಲಿಶ್ ಪತ್ರಿಕೆಯಲ್ಲಿ
ಈಗ ಕನ್ನಡ ಪತ್ರಿಕೆ ಸಂಪಾದಕ
ಯಾರಿವನ್?

ಅವರೇ ಈ ರಾಘವನ್!!!!!!!!!!!

ಇದು ಮಾಧ್ಯಮ ವಲಯದಲ್ಲಿ ಸದ್ಯ ಚಾಲ್ತಿಯಲ್ಲಿರುವ ಹೊಸ ಒಗಟು.

ಕಂಡು ಕೇಳರಿಯದ, ಗೊತ್ತಿಲ್ಲದ ವ್ಯಕ್ತಿಯೊಬ್ಬರು ದಿಧೀರನೆ ಕನ್ನಡ ಪತ್ರಿಕೋದ್ಯಮಕ್ಕೆ ಕಾಲಿರಿಸಿದಾಗ, ಅದೃಷ್ಟವಶಾತ್ ಕನ್ನಡ ನಂಬರ್ ಒನ್ ಪತ್ರಿಕೆ ಸಂಪಾದಕರು ಆದಾಗ ಕನ್ನಡ ಓದುಗರು ಯಾರಿವನ್ ಎಂದು ತಲೆ ಕೆರೆದುಕೊಂಡಿದ್ದರು.  ಹಾಗೆ ತಲೆ ಕೆರೆದು ಗಾಯ ಮಾಡಿಕೊಂಡವರಲ್ಲಿ ನಾವು ಇದ್ದೆವು. ಪತ್ರಕರ್ತರು ಅಚ್ಚರಿಪಟ್ಟಿದ್ದರು. ಹೆಚ್ಚಿನವರಿಗೆ ಇಂದಿಗೂ ಈ ರಾಘವನ್ ಯಾರೆಂಬುದು ಗೊತ್ತಿಲ್ಲ. ಇಂಟರ್ ನೆಟ್ನಲ್ಲಿ ಹುಡುಕಿದರು ಸಿಗಲಿಲ್ಲ. ಯಾಕೆಂದರೆ ಇವರು ಕನ್ನಡ ಪತ್ರಿಕೋದ್ಯಮದ ಧೀಮಂತ ಪತ್ರಕರ್ತರು ಅಲ್ಲ, ಇಂಗ್ಲೀಷ್ ನಲ್ಲಿ ಅಂತಹ ಸಾಧನೆಯನ್ನು ಮಾಡಲಿಲ್ಲ.

ಇವರು ಹುಟ್ಟಿದ್ದು ಮೈಸೂರಿನಲ್ಲಿ. ಆರಂಭದಲ್ಲಿ ಕೆಲಸ ಮಾಡಿದ್ದು ಇಂಡಿಯನ್ ಎಕ್ಸ್ಪ್ರೆಸ್ಸ್ ನಲ್ಲಿ. ಆಮೇಲೆ ಸೇರಿಕೊಂಡಿದ್ದು ಟೈಮ್ಸ್ ಆಪ್ ಇಂಡಿಯಾ. ಅಲ್ಲಿಂದ ಅವರನ್ನು ಇಕನಾಮಿಕ್ ಟೈಮ್ಸ್ ಗೆ ವಾರ್ಗಾಯಿಸಲಾಗಿತ್ತು. ಬಹುಷಃ ವಯಸ್ಸಾಯಿತು ಎಂಬ ಕಾರಣಕ್ಕೆ. ಇಕನಾಮಿಕ್ಸ್ ಟೈಮ್ಸ್ ನಲ್ಲಿ ಅವರು ರಾಜಕೀಯ ವರದಿ ಮಾಡುತ್ತಿದ್ದರು! ಅನುಭವಿ ಪತ್ರಕರ್ತರು!

ಕರ್ನಾಟಕದಲ್ಲಿ  ಇಕನಾಮಿಕ್ ಟೈಮ್ಸ್ ಇನ್ಚಾರ್ಜ್ ಆಗಿದ್ದರು, ಇಲ್ಲಿ ಸಿದ್ಧವಾಗುತ್ತಿದ್ದುದು ಕೇವಲ ೨ ಪುಟ ಮಾತ್ರ. ಉಳಿದ ಪುಟಗಳೆಲ್ಲ ಮುಂಬಯಿಯಿಂದ ಬರುತ್ತಿದ್ದವು. ಇಂತಿಪ್ಪ ರಾಘವನ್ ವಯಸ್ಸಿನ ಆಧಾರದಲ್ಲಿ ನಿವೃತ್ತಿಯಾಗಿದ್ದರು. ನಿವೃತ್ತಿಯಾಗಿ ೫ ವರ್ಷ ಮನೆಯಲ್ಲಿದ್ದರು.

ಮನೆಯಲ್ಲಿ ನಿವೃತ್ತಿ ಜೀವನ ನಡೆಸುತ್ತ, ಸಮಯದೂಡುತಿದ್ದ ರಾಘವನ್ ಅವರನ್ನು ಟೈಮ್ಸ್ ಮ್ಯಾನೇಜ್ಮೆಂಟ್ ಹೊಸದಾಗಿ ಆರಂಭಿಸಿದ ವಿಜಯ ನೆಕ್ಸ್ಟ್ ಗೆ ಸಂಪಾದಕರಾಗಿ ಕರೆದು ಕೂರಿಸಿತು. ಈ ಮೂಲಕ ಅವರು ಕನ್ನಡ ಪತ್ರಿಕೋದ್ಯಮ ಪ್ರವೇಶಿಸಿದರು. ಇದಕ್ಕೆ ಅವರಿಗಿದ್ದ ಏಕೈಕ ಅರ್ಹತೆಯೆಂದರೆ ವಿಪಿಎಲ್ ಸಿಇಓ ಸುನೀಲ್ ರಾಜಶೇಖರ್ ಅವರ ಜೊತೆಗಿನ ಸ್ನೇಹ.

ಈ ಸ್ನೇಹದ ಪರಿಣಾಮವಾಗಿಯೇ ಕನ್ನಡ ಪತ್ರಿಕೋದ್ಯಮದ ಗಂಧಗಾಳಿ ಇಲ್ಲದ ಇ. ರಾಘವನ್ ಇಂದು ಕನ್ನಡದ ನಂಬರ್ ೧ ದಿನಪತ್ರಿಕೆಯ ಸಂಪಾದಕರು! ಕನ್ನಡ ಪತ್ರಿಕೋದ್ಯಮ ಪ್ರವೇಶಿಸಿದ ಅತ್ಯಲ್ಪ ಅವಧಿಯಲ್ಲಿ ನಂಬರ್ ೧ ಪತ್ರಿಕೆ ಸಂಪಾದಕರಾದ ಅವರ ಸಾಧನೆ ಮೆಚ್ಚುವಂತದ್ದು! ಸಾಧನೆಯ ಹಿಂದೆ ಅಪಾರ ಪರಿಶ್ರಮ ಇದೆ!


ಸಂಪಾದಕರಾಗಿ ಅವರು ಮಾಡಿದ ಸಾಧನೆ ವಿಕ ಓದುವವರಿಗೆ ಗೊತ್ತು. ಬಜೆಟ್ ದಿನ 'ಡಬ್ಬಲ್ ಬ್ಯಾರಲ್ ಗನ್' ತನ್ನೆಡೆಗೆ ಗುರಿ ಇಟ್ಟು ಟ್ರಿಗರ್ ಒತ್ತಿದಾಗಲೇ ವಿಕ ಸಿಬ್ಬಂದಿಗೆ ರಾಘವನ್ ಏನು ಎಂಬುದು ಅರ್ಥವಾದಂತಿದೆ. ಕಚೇರಿಯಲ್ಲಿ ದಿನಕ್ಕೆ ೧೦-೨೦ ಸಿಗರೇಟು ಸೇದುವುದೇ ರಾಘವನ್ ಸಾಧನೆ ಎಂಬ ಮಾತಿದೆ. ಬಾಯಿಂದ ಸಿಗರೇಟು ಹೋಗೆ ಬಿಡುವುದನ್ನು ನೋಡಿದ ವಿಕ ಸಿಬ್ಬಂದಿ ಈತ ವಿಕದ ಹೊಗೆಯನ್ನು ಹೀಗೆ ಹಾರಿಸುವುದು ಗ್ಯಾರಂಟಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

Thursday 14 April 2011

ಬದುಕಿದ್ದವರನ್ನು ಕೊಲ್ಲಬಹುದೇ ಕುಮಾರನಾಥ? ರಾಮ ರಾಮಾ!


ಕುಮಾರನಾಥ್ ಬಗ್ಗೆ ಬರೆದ ಲೇಖನಕ್ಕೆ ಓದುಗರೊಬ್ಬರು ಕಾಮೆಂಟ್ ಕಳುಹಿಸಿದ್ದಾರೆ. ಈ ಕಾಮೆಂಟಿನ ಸ್ಪೆಷಾಲಿಟಿ ಏನೆಂದರೆ ಕಾಮೆಂಟ್ ಹಾಕಿದವರು ಹೆಸರನ್ನು ಹಾಕಿದರು. ಆದರೆ ಅವರ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ.  ಅವರ ಕಾಮೆಂಟ್ ಪೂರ್ಣ ರೂಪವನ್ನು ಇಲ್ಲಿ ಪ್ರಕಟಿಸಲಾಗಿದೆ.

ಕುಮಾರ್ ನಾಥ್ ಬಗ್ಗೆ ನಮ್ಮ ಮಂಗಳೂರಲ್ಲಿ ಸಾಕಷ್ಟು ಜೋಕ್ ಗಳು ಹುಟ್ಟಿಕೊಂಡಿವೆ. ಅದರಲ್ಲಿ ಒಂದು ಹೀಗಿದೆ.
 
ಅವರು ಜೆ. ರಾಮ ಎಂಬ ಮಂಗಳೂರು ಕಾರ್ಪೊರೇಟರ್ ನಿಧನರಾಗಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಕಟಿಸಿ ಅವರನ್ನು ಜೀವಂತ ಸಾಯಿಸಿದ್ದರು.!

ಒಮ್ಮೆ ಪೋಸ್ಟ್ ನಲ್ಲಿ ಯಾರೋ ನಿಧನ ವಾರ್ತೆ ಕಳುಹಿಸಿದ್ದರು. ಅದನ್ನು ಕ್ರಮವಾಗಿ ವರದಿಗಾರರಿಗೆ ನೀಡಬೇಕಿತ್ತು. ಸದಾ ತನ್ನ ಕೆಳಗಿನ ಸಿಬ್ಬಂದಿ ತಪ್ಪು ಹಿಡಿಯುವ ಚಟದ ಕುಮಾರ ಕಾರ್ಡ್ ಬಗ್ಗೆ ಹೇಳದೆ ವರದಿಗಾರರು ಹೋದ ಬಳಿಕ ತನ್ನ ಚೇಲಾ ಉಪಸಂಪಾದಕನಿಗೆ ಅಂಚೆ ಕಾರ್ಡ್ ಕೊಟ್ಟು ನಿಧನ ಸುದ್ದಿ ಮಾಡುವಂತೆ ಹೇಳಿದ.

ಚೇಲಾ ಕೇಳಿದನಂತೆ ಕಾರ್ಡ್ ನಲ್ಲಿ ಯಾವಾಗ ನಿಧನ ಎಂದು ಬರೆದಿಲ್ಲ. ಯಾವಾಗ ಬರೆಯಲಿ ಎಂದನಂತೆ. ಅದಕ್ಕೆ ಕಾರ್ಡ್ ಬರಲು ಒಂದು ದಿನ ಬೇಕು. ನಿನ್ನೆ ನಿಧನ ಎಂದು ಬರೆಯುವಂತೆ ಅತಿ ಬುದ್ಧಿವಂತ ಕು.ನಾಥ ಹೇಳಿದ್ದ. ಅಂಚೆ ಕಾರ್ಡ್ನ್ ನಲ್ಲಿ ಜಾಹೀರಾತು ನೀಡುತ್ತೇವೆ ಎಂದು ಬರೆದಿತ್ತಂತೆ ಮತ್ತು ಶ್ರೀಯುತರು ನಿಧನರಾದರೂ ತಮ್ಮ ಸಂಪತ್ತನ್ನು ಮಕ್ಕಳಿಗೆ ನೀಡದೆ ಬೇರೆಯವರಿಗೆ ಹಂಚಿದ್ದರು ಎಂದು ಬರೆದಿತ್ತು.

ಸಾಮಾನ್ಯ ಜನರಿಗೂ ಇದು ವಂಚನೆ ಇರಬಹುದು ಎಂದು ಗೊತ್ತಾಗುವಂತಿತ್ತು. ಆದರೆ ಕುಮಾರ ಮತ್ತು ಶಿಷ್ಯ ನಿಧನ ಸುದ್ದಿ ಬರೆದೇ ಬಿಟ್ಟರು. ಮರುದಿನ ಬೆಳಗ್ಗೆ ವರದಿಗಾರರಿಗೆ ದಬಾಯಿಸಬೇಕು ಎನ್ನುವುದು ಕುಮಾರನ ಉದ್ದೇಶ. ಆದರೆ ಎಡವಟ್ಟಾಗಿದ್ದೇ ಮರುದಿನ.

ಬೆಳಿಗ್ಗೆ ಜೆ.ರಾಮ ಮನೆಗೆ ಹೂಗುಚ್ಛ ನೀಡಲು ಸಾಲು ಸಾಲು ಮಂದಿ. ಸಾಯದೆ ಜೀವಂತ ಇದ್ದು ಬೆಳ್ಳಂಬೆಳಗ್ಗೆ ಚಾ ಕುಡಿಯುತ್ತಿದ್ದ ಜೆ.ರಾಮರಿಗೆ ಸಿಟ್ಟು, ಆಕ್ರೋಶ. ಸಂತಾಪ ಎಲ್ಲ ಬಂದಿತ್ತು. ಸಂಜೆ ಪತ್ರಿಕೆ ವರದಿಗಾರನೊಬ್ಬ ಜೆ.ರಾಮ ಅವರ ಮೊಬೈಲ್ಗೆ ಕರೆ ಮಾಡಿ "ಏಪ ದೆಪ್ಪರೆಗೆ" (ಯಾವಾಗ ಶವ ಎತ್ತಿ ಸಂಸಸ್ಕಾರ ಮಾಡುತ್ತಾರೆ) ಕೇಳಿದ್ದ. ಜನ ಜಂಗುಳಿ ಹೆಚ್ಚಾಗಿ ಗಲಾಟೆ ಆಗಿ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು.

ಇದೊಂದೇ ಅಲ್ಲ. ಅನೇಕ ಮಂದಿ ಜೀವಂತ ಇದ್ದವರನ್ನು ನಿಧನ ಕಾಲಂನಲ್ಲಿ ಪ್ರಕಟಿಸಿದ ಕೀರ್ತಿ ನಾಥನದ್ದು. ತಾನೇ ಮಾಡಿದರೂ ಇದನ್ನು ಸಿಬ್ಬಂದಿ ಮೇಲೆ ತಪ್ಪು ಹೊರಿಸಿ ಬಚಾವ್ ಆಗಿದ್ದಾನೆ. 

ನಿಜಕ್ಕೂ ಕತ್ತಿಗಿಂತ ಪೆನ್ನು ಹರಿತ!!!!!!!!!!!!!

ಇದು ಕುಮಾರ ವಿಶೇಷತೆ. ಆದರೆ ಸುದ್ದಿಮನೆ ಕಾಲಂನಲ್ಲಿ ಒಂದೂ ಬಾರಿಯೂ ಈ ಕು.ನಾಥನ ಸಾಹಸ ಬರೆಯದೆ ವಿ. ಭಟ್ಟರು ಪ್ರೀತಿ ತೋರಿಸಿದ್ದು ಇಂದಿಗು ಅರ್ಥವಾಗಿಲ್ಲ.

ವಿ.ಭಟ್ಟರಿಗೆ ಈಗ ಅರ್ಥ ಆಗಿರಬಹುದು! ಆದರೆ ಕು.ನಾಥ ವಿಕ ಮೇಲೆ ಚಪ್ಪಡಿ ಕಲ್ಲು ಎಳೆದಾಗಿದೆ. 75 ಸಾವಿರ ವಿಕ ಮಂಗಳೂರು ಸರ್ಕ್ಯುಲೇಶನ್ 45 ಸಾವಿರಕ್ಕೆ ಇಳಿಸಿದ ಕೀರ್ತಿಯೂ ಈತನಿಗೆ ಸಲ್ಲಬೇಕು.

ಈ ಬಗ್ಗೆ ವಿಸ್ತ್ರುತ ಕಮೆಂಟ್ ಇನ್ನೊಮ್ಮೆ ಕಳುಹಿಸುತ್ತೇನೆ.

(ಕಾಮೆಂಟು ಕಳುಹಿಸಿದವರಿಗೆ ದನ್ಯವಾದ. ಸತ್ಯ ಮಾಹಿತಿಗಳಿಗೆ ಸದಾ ಸ್ವಾಗತ)

Monday 11 April 2011

ಅರವಿಂದ ನಾವಡ ಮಂಗಳೂರಿಗೆ, ಕುಮಾರನಾಥ?

ಓದುಗರೊಬ್ಬರು ಕಾಮೆಂಟಿಸಿದ್ದರು. ಆಗ ಗೊತ್ತಾಯ್ತು ಕುಮಾರನಾಥ್ ಎಂಬೊಬ್ಬ ವ್ಯಕ್ತಿ ಪತ್ರಿಕೊದ್ಯಮದಲ್ಲಿದ್ದಾನೆ, ಬ್ಯೂರೋಚೀಪ್ ಆಗಿದ್ದಾನೆ ಎಂದು.


ವಿಕ ಮೈಸೂರು ಬ್ಯೂರೋ ಮುಖ್ಯಸ್ಥರಾಗಿರುವ ಅರವಿಂದ ನಾವಡ ಅವರನ್ನು ಮಂಗಳೂರಿಗೆ ವರ್ಗಾಯಿಸಲಾಗಿದೆಯಂತೆ. ಅವರು ಮಕ್ಕಳ ಕಾರಣಕ್ಕೆ ಮಂಗಳೂರಿಗೆ ವರ್ಗಾವಣೆ ಬೇಕು ಎಂದು ಬಹು ಸಮಯದಿಂದ ಬೇಡಿಕೆ ಇಟ್ಟಿದ್ದರಂತೆ. ವಿ.ಭಟ್ಟರು ಕುಮಾರನಾಥನ ಮೇಲೆ ಅದೇನು ಪ್ರೀತಿ ಇಟ್ಟಿದ್ದರೋ, ಅವನನ್ನು ವರ್ಗಾಯಿಸಲಿಲ್ಲ. ನಾವಡರ ಆಸೆ ತೀರಲಿಲ್ಲ. ಹೊಸ ಸಂಪಾದಕರು ಬಂದ ಮೇಲೆ ನಾವಡರನ್ನು ಮಂಗಳೂರಿಗೆ ವರ್ಗಾಯಿಸಿದ್ದಾರೆ. ವಿಚಿತ್ರವೆಂದರೆ ಕುಮಾರನಾಥನನ್ನು ವರ್ಗಾಯಿಸಲಾಗಿಲ್ಲ.

ಈ ಬಗ್ಗೆ ಸ್ವಲ್ಪ ಗೊಂದಲವಿದೆ. ನಾವಡರು ಮೈಸೂರಿನಲ್ಲಿ ಬ್ಯೂರೋ ಮುಖಸ್ಥರಾಗಿದ್ದವರು. ಅವರು ಮಂಗಳೂರಿನಲ್ಲಿ ಕುಮಾರನಾಥನ ಕೈ ಕೆಳಗೆ ಕೆಲಸ ಮಾಡಬೇಕೇ? ಇಲ್ಲ ಇನ್ನೊಬ್ಬ ಬ್ಯೂರೋ ಮುಖಸ್ಥನನ್ನು ಮಂಗಳೂರಿಗೆ ವರ್ಗ ಮಾಡಿದ್ದು ಕುಮಾರನಾಥನಿಗೆ ಬಿಟ್ಟು ಹೋಗು ಎಂಬ ಸೂಚನೆಯೇ? ಎಂಬ ಬಗ್ಗೆ ಗೊಂದಲವಿದೆ.

ಕುಮಾರನಾಥ ಯಾರು ಎಂದು ವಿಚಾರಿಸಿದಾಗ ಗೊತ್ತಾದದ್ದು ಇಷ್ಟು.

ಕುಮಾರನಾಥ ೧೦ ವರ್ಷದಿಂದ ವಿಕ ಮಂಗಳೂರು ಬ್ಯೂರೋಚೀಪ್. ಸಾಧನೆ ಸೊನ್ನೆ. ಸಾಧನೆಗಳ ಬಗ್ಗೆ ದಾಖಲೆಗಳನ್ನು ಇಡುವುದರಲ್ಲಿ ನಿಸ್ಸೀಮ. ಯಾರಿಗೆ ಸಾಧ್ಯವೋ ಅವರಿಗೆಲ್ಲ ಬಕೆಟ್ ಹಿಡಿದು ಸ್ಥಾನ ಉಳಿಸಿಕೊಂಡ ಚಾಣಾಕ್ಷ. ವಿಆರ್ ಎಲ್ ನ ರಮಾನಂದ ಭಟ್, ವಿ.ಭಟ್ಟರಿಗೆ, ಸಂಕೇಶ್ವರರಿಗೆ ಹೀಗೆ ಹಲವರಿಗೆ ಬಕೆಟ್ ಹಿಡಿದ ಖ್ಯಾತಿ ಇದೆಯಂತೆ. ವರ್ಷಕ್ಕೊಮ್ಮೆ ನಿಷ್ಪ್ರಯೋಜಕ ಲೇಖನ ಬರೆದರೆ ಅದೇ ದೊಡ್ಡ ಸಾಧನೆ.

ಕೆಲಸ ಮಾಡುವ, ಹೆಚ್ಚು ಬರೆಯುವ ಪತ್ರಕರ್ತರಿಗೆ ಕಿರಿಕಿರಿ ಕೊಡುವುದು ಇವರ ಮುಖ್ಯ ಗುಣವಂತೆ. ಇದಕ್ಕಿಂತ ಹೆಚ್ಚಿನ ಮಾಹಿತಿ ತಿಳಿದಿಲ್ಲ.
ಮಂಗಳೂರಿನ ಹೆಚ್ಚಿನ ಪತ್ರಕರ್ತರು ಅವರನ್ನು ನೋಡಿಲ್ಲವಂತೆ. ಇನ್ನು ಬೆಂಗಳೂರಿನವರು ನೋಡುವ ಸಾದ್ಯತೆ ಇಲ್ಲ.
ಹೀಗಾಗಿ  ತಿಳಿದ ಕೂಡಲೇ ಪ್ರಕಟಿಸಲಾಗುವುದು.

ಇದೆ ಮೊದಲ ಬಾರಿಗೆ ಮೀಡಿಯಾ ಮನ ಬೆಂಗಳೂರು ಬಿಟ್ಟು ಹೊರಗಿನ ಪತ್ರಕರ್ತರ ಕುರಿತು ಬರೆದಿದೆ. ಇದು ಸಾಧ್ಯವಾಗಿದ್ದು ಓದುಗರಿಂದ ಹಾಗು ಅವರ ಕಾಮೆಂಟಿನಿಂದ. ತುಂಬಾ ಥ್ಯಾಂಕ್ಸ್.

Thursday 7 April 2011

ನಿಮ್ಮ ಕಳಕಳಿ, ಅವರಿಗೆ ದುಡ್ಡಿನ ಬಳುವಳಿ

ಅಣ್ಣಾ ಹಜಾರೆಗೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದೆ. ಎಲ್ಲ ಮಾಧ್ಯಮಗಳು ಬೆಂಬಲಕ್ಕೆ ನಿಂತಿವೆ. ಕನ್ನಡದಲ್ಲಿ ಉದಯವಾಣಿ ಮೊದಲು ಬೆಂಬಲ ವ್ಯಕ್ತಪಡಿಸಿತು. ಇಂದು ವಿಕ ಕೂಡ ಬೆಂಬಲ ವ್ಯಕ್ತಪಡಿಸಿದೆ. ವಿಚಿತ್ರ ರೀತಿಯಲ್ಲಿ.

ಲಾಭವಿಲ್ಲದೆ ವಿಕ ಮತ್ತು ಟೈಮ್ಸ್ ಮ್ಯಾನೇಜ್ಮೆಂಟ್ ಯಾವ ಕೆಲಸವನ್ನು ಮಾಡುವುದಿಲ್ಲ. ದೇಶಾದ್ಯಂತ ಅಣ್ಣಾ ಹಜಾರೆಗೆ ಉಂಟಾದ ಬೆಂಬಲವನ್ನು ಏನ್ ಕ್ಯಾಶ್ ಮಾಡಿಕೊಳ್ಳಲು ವಿಕ ಮುಂದಾಗಿದೆ. ಅದಕ್ಕಾಗಿ "ನೀವು ಅಣ್ಣಾ ಹಜಾರೆಯನ್ನು ಬೆಂಬಲಿಸುವುದಾದರೆ ನಮಗೆ ಎಸ್ಎಂಎಸ್ ಕಳುಹಿಸಿ. ನಾವು ಅದನ್ನು ಪ್ರಕಟಿಸುತ್ತೇವೆ" ಎಂಬ ಘೋಷಣೆ ಪ್ರಕಟಿಸಿದೆ.

ನೀವು ಎಸ್ಎಂಎಸ್ ಕಳುಹಿಸಿ ಅಣ್ಣಾ ಹಜಾರೆಗೆ ಬೆಂಬಲ ವ್ಯಕ್ತಪಡಿಸಿ. ನಿಮ್ಮ ಈ ಕಾಳಜಿಯನ್ನು ಬಳಸಿಕೊಂಡು ನಾವು ದುಡ್ಡು ಮಾಡಿಕೊಳ್ಳುತ್ತೇವೆ ಎಂಬುದು ಇದರ ಒಳಾರ್ಥ!

ನೀವು ಒಂದು ಎಸ್ಎಂಎಸ್ ಕಳುಹಿಸಿದರೆ ಅದಕ್ಕೆ ೬ ರೂಪಾಯಿ ತೆರಬೇಕು. ಅದರಲ್ಲಿ ೩ ರೂಪಾಯಿ ವಿಕ ಕಿಸೆಗೆ. ಉಳಿದ ೩ ರೂಪಾಯಿ ಮೊಬೈಲ್ ಕಂಪನಿಗೆ. ಹೀಗೆ ನಿಮ್ಮ ಕಾಳಜಿಯನ್ನು ವಿಕ ತನ್ನ ಕಾಳಜಿಗೆ ಬಳಸಿಕೊಳ್ಳಲು ಮುಂದಾಗಿದೆ. ದೇಶದ ಜನರೆಲ್ಲಾ ಕಾಳಜಿಯಿಂದ ಭ್ರಷ್ಟಾಚಾರದ ವಿರುಧ್ಧ ಹೋರಾಟದಲ್ಲಿ ತೊಡಗಿದ್ದಾರೆ . ವಿಕ ಮ್ಯಾನೇಜ್ಮೆಂಟ್ ಮಾತ್ರ ದುಡ್ಡು ಮಾಡುವದರಲ್ಲಿ ನಿರತವಾಗಿದೆ.

ಇವರೆಲ್ಲ ಬೆಂಕಿ ಬಿದ್ದ ಮನೆಯಲ್ಲಿ ಬೀಡಿ ಹಚ್ಚಿಕೊಳ್ಳುವ ಬುದ್ದಿ ಬಿಡುವುದು ಯಾವಾಗ?

Tuesday 5 April 2011

ನಿಲ್ಲದ ತಲ್ಲಣಗಳ ಅಲೆ

ವಿ.ಭಟ್ಟರು ವಿಕ ಬಿಟ್ಟಮೇಲೆ ಮಾಧ್ಯಮ ಕ್ಷೇತ್ರದಲ್ಲಿ ಎದ್ದ ತಲ್ಲಣದ ಅಲೆಗಳು ಇನ್ನು ತಣ್ಣಗಾಗಿಲ್ಲ.

ಕಪ್ರದಿಂದ ೩ ಜನ ಹೊರನಡೆದರು. ವಿಕದಿಂದಲೂ ೩ ಜನ ಹೊರಬಂದಿದ್ದಾರೆ. ಕಪ್ರದಿಂದ ದೆಹಲಿಯ ಉಮಾಪತಿ ವಿಕಕ್ಕೆ ಹಾರಿದರೆ, ಬೆಂಗಳೂರಿನಲ್ಲಿದ್ದ ವಿಜಯ್ ಮಲ್ಲಿಗೆಹಾಳ್ ಮತ್ತು ಗಿರೀಶ್ ಬಾಬು ಉದಯವಾಣಿಗೆ ವಲಸೆ ಹೊರಟಿದ್ದಾರೆ.

ಈಗ ವಿಕದಿಂದ ಕೆ.ವಿ. ಪ್ರಭಾಕರ್, ರಾಘವೇಂದ್ರ ಭಟ್ಟ, ಚೈತನ್ಯ ಹೆಗಡೆ ಕಪ್ರಕ್ಕೆ ವಲಸೆ ಹೊರಟಿದ್ದಾರೆ. ಹಾಗಂತ ವಿ.ಭಟ್ಟರು ಎಪ್ರಿಲ್ ೧ರನ್ದು ಪ್ರಕಟಿಸಿದ್ದಾರೆ. ಮೂರ್ಖರದಿನದಂದು ಸತ್ಯ ಸುದ್ದಿ ಪ್ರಕಟಿಸಿದ್ದು ವಿಚಿತ್ರ.

ವಿಕದಿಂದ ಇನ್ನು ಕೆಲವರು ಕಪ್ರಕ್ಕೆ ವಲಸೆ ಹೋಗಬಹುದು ಎಂಬ ನಿರೀಕ್ಷೆಯಿದೆ. ಎಲ್ಲೋ ಆರಂಭವಾದ ಭೂಕಂಪ ಇನ್ನೆಲ್ಲೋ ಪರಿಣಾಮ ಬೀರಿದಂತೆ, ಮಾಧ್ಯಮ ವಲಯದಲ್ಲಿ ಬದಲಾವಣೆ ಅಲೆಗಳು ಎಲ್ಲೆಲ್ಲೋ ಪರಿಣಾಮ ಬೀರುತ್ತಿವೆ.

ಇನ್ನು ಏನೇನು ಬದಲಾವಣೆ ಆಗಲಿದೆಯೋ?

Monday 4 April 2011

ಅಂದವಾಗಿ ವಿಶ್ವಕಪ್ ಕವರೇಜ್ ಮಾಡಿದ್ದು ಯಾರು?

ಕನ್ನಡದಲ್ಲಿ ಪ್ರಮುಖವಾಗಿ ೬ ಪತ್ರಿಕೆಗಳಿವೆ. ಅದರಲ್ಲಿ ಸಂಯುಕ್ತ ಕರ್ನಾಟಕವನ್ನು ಈ ಸ್ಪರ್ಧೆಯಿಂದ ಹೊರಗಿಡುವುದು ಒಳಿತು. ಉಳಿದ ೫ ಪತ್ರಿಕೆಗಳ ಕುರಿತು ಮಾತ್ರ ಚರ್ಚಿಸೋಣ.

ಭಾರತ ಫೈನಲ್ ಗೆದ್ದಾಗ ಉದಯವಾಣಿ ಸಂಪೂರ್ಣ ಪತ್ರಿಕೆಯನ್ನು ಅದಕ್ಕೆ ಅರ್ಪಿಸಿತು. ಇದು ಹೊಸ ಪ್ರಯೋಗ. ಸಂಪೂರ್ಣ ಪತ್ರಿಕೆಯನ್ನು ಒಂದು ವಿಷಯಕ್ಕೆ ಸಮರ್ಪಿಸಿದ್ದು ಇದೇ ಮೊದಲೇನೋ. ಇದರ ಶ್ರೇಯಸ್ಸು ರವಿ ಹೆಗಡೆ ಅವರಿಗೆ. ಆದರೆ ಬೇರೆ ಸುದ್ದಿಯನ್ನೇ ಪ್ರಕಟಿಸದಿರುವುದು ಅಷ್ಟು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಎಲ್ಲರಿಗು ಕ್ರಿಕೆಟ್ನಲ್ಲಿ ಆಸಕ್ತಿ ಇರಬೇಕೆಂದು ನಿಯಮವೇನೂ ಇಲ್ಲ. ಅಂತಹ ಓದುಗರಿಗಾಗಿ ಬೇರೆ ಸುದ್ದಿ ಹಾಕಬೇಕಿತ್ತು.

ಪಾಕಿಸ್ತಾನ ವಿರುದ್ಧ ಭಾರತ ಗೆದ್ದಗಲೇ 'ಉದಯವಾಣಿ' ಎಂಬ ಹೆಸರನ್ನು ಕೂಡ ಕೆಳಗೆ ಪ್ರಕಟಿಸಲಾಗಿತ್ತು. ಅದು ಸಾಲದೆಂಬಂತೆ ಮುಖಪುಟಕ್ಕೆ ನೀಲಿ ಬಣ್ಣ ತುಂಬಲಾಗಿತ್ತು. ಹೀಗಾಗಿ ಭಾರತ ಫೈನಲ್ ಗೆದ್ದಾಗ ಮಾಡಲು ಹೆಚ್ಚಿನದು ಏನು ಉಳಿದಿರಲ್ಲಿಲ್ಲ.

ಕನ್ನಡಪ್ರಭ ಉತ್ತಮವಾಗಿ ಕವರೇಜ್ ಮಾಡಿದೆ ಎಂಬುದಕ್ಕಿಂತ ಅಂದವಾಗಿ ಓದುಗರ ಮುಂದಿಟ್ಟಿದೆ. ಪುಟ ವಿನ್ಯಾಸ, ಹೆಡ್ಲೈನ್ ನಲ್ಲಿ ಕಪ್ರ ಮಿಂಚಿದೆ. 'ಭಾರತ ಭೂಶಿರ' ಹೆಡ್ಲೈನ್ ಸೂಪರ್. ಆದರೆ ಕ್ರಿಕೆಟ್ ವರದಿಗಳಲ್ಲಿ ಹಲವು ತಪ್ಪುಗಳಿದ್ದವು. ಇದು "ತಪ್ಪಾಯ್ತು ತಿದ್ಕೊತೀವಿ"ಯಲ್ಲೂ ಕಾಣಿಸಿಕೊಂಡಿಲ್ಲ. ಇದನ್ನು ಸರಿಪಡಿಸಿಕೊಂಡರೆ ಉಳಿದದ್ದೆಲ್ಲ ಓಕೆ.

ಹೊಸದಿಗಂತವನ್ನು ನಿಜಕ್ಕೂ ಮೆಚ್ಚಬೇಕು. ಆದರೆ ಪತ್ರಿಕೆಗೆ ಓದುಗರ ಕೊರತೆಯಿದೆ. ಸಂಘದ ಪತ್ರಿಕೆ ಎಂಬ ಇಮೇಜ್ ನಿಂದಾಗಿ ಹೀಗಾಗುತ್ತಿದೆ. ಆದರೆ ಇತ್ತೀಚಿಗೆ ಪತ್ರಿಕೆ ಅಂದವಾಗಿ ಮೂಡಿಬರುತ್ತಿದೆ. ಕ್ರಿಕೆಟ್ ಕವರೇಜ್, ವಿನ್ಯಾಸ ಕೂಡ ಉತ್ತಮವಾಗಿತ್ತು. ಆದರೆ ಫೈನಲ್ ದಿನ ಇಂಗ್ಲೀಷ್ ಹೆಡ್ಲೈನ್ ಹಾಕಿ ಎಡವಟ್ಟು ಮಾಡಿತು. ಕನ್ನಡಿಗರು ತಲೆತಗ್ಗಿಸುವಂತೆ ಮಾಡಿತು. ಅಡ್ಡಡ್ಡವಾಗಿ ಸುದ್ದಿ ಪ್ರಕಟಿಸಿದ್ದು ಓಕೆ.

ವಿಶ್ವಕಪ್ ಉದ್ದಕ್ಕೂ ವಿಫಲವಾದ ಪತ್ರಿಕೆಗಳೆಂದರೆ ಪ್ರಜಾವಾಣಿ ಮತ್ತು ವಿಕ. ಪ್ರಜಾವಾಣಿ ಪತ್ರಿಕೆ ಮೊದಲಿನಿಂದಲೂ ಕ್ರೀಡೆ ವರದಿಗೆ ಫೇಮಸ್. ಆದರೆ ಈ ಬಾರಿಯ ವಿಶ್ವಕಪ್ ನಲ್ಲಿ ಇದು ಸುಳ್ಳಾಗಿದೆ. ಇಬ್ಬರು ವರದಿಗಾರರನ್ನು ಮುಂಬಯಿಗೆ ಕಳುಹಿಸಿ, ಭಾರತ ವಿಶ್ವಕಪ್ ಗೆದ್ದಿದ್ದನ್ನು ಸಾಮಾನ್ಯ ಸುದ್ದಿಯಂತೆ ಪ್ರಕಟಿಸಿತು. ವಿಶೇಷ ಮುಖಪುಟ ವಿನ್ಯಾಸ ಕೂಡ ಇರಲಿಲ್ಲ. ಸಾಕಷ್ಟು ಇತರೆ ಸುದ್ದಿಗಳನ್ನು ಮುಖಪುಟದಲ್ಲಿ ಪ್ರಕಟಿಸಿತ್ತು. ಪತ್ರಿಕೆಯಲ್ಲಿ ಕೆಲಸ ಮಾಡುವವರು, ಮಾಡಿಸುವವರು ಜಡ್ಡು ಗಟ್ಟಿದರೆ ಹೀಗೆ ಆಗೋದು. ಇಷ್ಟೇ ಮಾಡುವುದಾದರೆ ಇಬ್ಬರನ್ನು ಮುಂಬಯಿಗೆ ಕಳುಹಿಸುವ ಅಗತ್ಯ ಇರಲ್ಲಿಲ್ಲ.

ವಿ.ಭಟ್ಟರು ಬಿಟ್ಟಮೇಲೆ ವಿಕಕ್ಕೆ ಗರ ಬಡಿದಂತಾಗಿದೆ. ವಿ.ಭಟ್ಟರು ವಿಕ ಬಿಟ್ಟು ೪ ತಿಂಗಳಾಯಿತು. ಈ ಅವಧಿಯಲ್ಲಿ ಒಂದು ಹೊಸ ಪ್ರಯೋಗವನ್ನು ವಿಕ ಮಾಡಿಲ್ಲ. ಅದು ಹೊಸ ಸಂಪಾದಕರ ಸಾಮರ್ಥ್ಯವನ್ನು ತೋರಿಸುತ್ತದೆ! ವಿಶ್ವಕಪ್ ಅವಧಿಯಲ್ಲೂ ಅವರ ಹಾಗು ವಿಕ ಸಿಬ್ಬಂದಿ ಸಾಮರ್ಥ್ಯ ಜಗಜ್ಜಾಹೀರಾಯಿತು. ಮುಖಪುಟಗಳಂತೂ ತುಂಬಾ ಸಪ್ಪೆಯಾಗಿದ್ದವು.

ಇದು ನಮ್ಮ ಅಭಿಪ್ರಾಯ. ನಿಮ್ಮ ಅಭಿಪ್ರಾಯ ಏನು?

Friday 1 April 2011

ಮುಗಿಯಿತು ಕ್ಯಾಪ್ಟನ್ ರಂಗನ ಕಪ್ತಾನಗಿರಿ!

ಅಯ್ಯೋ ಯಾಕೆ ಹೀಗಾಯ್ತು? ರಂಗ ಬಿಡ್ತಾರೆ ಅನ್ನೋ ಸುದ್ದಿಯನ್ನು ಮಾಡಲು ಸ್ಫೋಟಿಸಿದ್ದೆ ಮೀಡಿಯಾಮನ. ಬಹುಷಃ ನೀವು ಬೇರಾವುದೋ ಕೆಲಸದಲ್ಲಿ ಬ್ಯುಸಿ ಆಗಿರಬೇಕು ಅನ್ಸುತ್ತೆ. ಅದ್ಕೆ ನನಗೆ ಸಿಕ್ಕ ಅಧಿಕೃತ ಮಾಹಿತಿಯನ್ನು ಪೋಸ್ಟ್ ಮಾಡುತ್ತಿದ್ದೇನೆ. ಸಾಧ್ಯವಾದರೆ ಬಳಸಿಕೊಳ್ಳಿ.

 ಕ್ಯಾಪ್ಟನ್ ರಂಗನ ಕಪ್ತಾನಗಿರಿ ಮುಗಿದಿದೆ. ಅವರ ಸರ್ವಾಧಿಕಾರಿ ಧೋರಣೆಗೆ ಪೆಟ್ಟು ಬಿದ್ದಿದೆ. ಸುಮಾರು ಒಂದೂವರೆ ತಿಂಗಳ ಹಿಂದೆ ರಂಗ ಹಾಗೂ ಶಿವಸ್ವಾಮಿ ಎಂಬುವರನ್ನು ಕರೆದ ಮ್ಯಾನೇಜ್ಮೆಂಟ್ `ನಿಮ್ಮಿಂದ ಕಚೇರಿ ವಾತಾವರಣ ಹಾಳಾಗುತ್ತಿದೆ. ಇದೆಲ್ಲ ಸರಿಯಲ್ಲ' ಎಂದು ಎಚ್ಚರಿಸಿದೆ. ಅದರೂ ರಂಗ ತಮ್ಮ ಸರ್ವಾಧಿಕಾರಿ ಧೋರಣೆ ಬದಲಿಸಿಕೊಳ್ಳಲಾರದೆ ಎಲ್ಲರನ್ನೂ ಏಕವಚನದಲ್ಲಿ ಬಯ್ಯುತ್ತ, ಸಿಟ್ಟು ಮಾಡಿಕೊಳ್ಳುತ್ತ ನಂಗೆ ಇದೆಲ್ಲ ಬೇಡ ಎಂದು ಚೇಮ್ಬರಿನ ಬಾಗಿಲು ಹಾಕಿ ಮನೆ ದಾರಿ ಹಿಡಿಯುತ್ತಿದ್ದರು.

ಆದರೆ ಇಂದು ಮ್ಯಾನೇಜ್ಮೆಂಟ್ ನವರೇ ಹೋಗಿ, ನಿಮ್ಮ ಸಹವಾಸ ಸಾಕು ಎಂದರೂ `ಹೊಸ ಸಂಪಾದಕರು ಬರುವವರೆಗೆ ಇರುತ್ತೇನೆ' ಎನ್ನುತ್ತಿದ್ದಾರಂತೆ. ಇದೆಂಥ ವಿಪರ್ಯಾಸ! ಅಲ್ಲದೆ ರಂಗ ಅವರು ತಮ್ಮ ಸಹೋದ್ಯೋಗಿಗಳ ಬಳಿ `ನಂಗೆ ಆರೋಗ್ಯ ಚೆನ್ನಾಗಿಲ್ಲ. ಅದ್ಕೆ ನ್ಯೂಸ್, ಪ್ರೋಗ್ರಾಮ್ಸ್ ಮಾತ್ರ ನೋಡ್ಕೋತೀನಿ. ಆಡಳಿತ ನಿರ್ವಹಣೆ ನನ್ನಿಂದ ಸಧ್ಯ ಇಲ್ಲ ಅಂತ ಮ್ಯಾನೇಜ್ಮೆಂಟ್ ಗೆ ಹೇಳಿದೀನಿ. ನಾನೆಲ್ಲೂ ಹೋಗಲ್ಲ' ಅಂತ ಪುಂಗಿ ಊದುತ್ತಿದ್ದಾರಂತೆ.

ಇದನ್ನೆಲ್ಲಾ ಕೇಳಿಸಿಕೊಂಡ ಮ್ಯಾನೇಜ್ಮೆಂಟ್ `ಅವ್ರ ಆರೋಗ್ಯ ಸರಿ ಇಲ್ಲ ಅಂತಾನೆ ಅವ್ರಿಗೆ ರಾಜೀನಾಮೆ ಕೊಡಿ ಅಂದ್ವಿ. ಅವ್ರು ಒಪ್ಪಲಿಲ್ಲ. ಆದ್ದರಿಂದ ರಂಗ ಅವರನ್ನು ಹಲವು ಕೆಲಸಗಳಿಂದ ಮುಕ್ತಿಗೊಳಿಸಿದ್ದೇವೆ. ಅವರು ಇನ್ಮುಂದೆ ಕೇವಲ ಸಂಪಾದಕೀಯ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ. ಅವರು ಜುಗಲ್ಬಂದಿ ಹಾಗೂ ಪಬ್ಲಿಕ್ ವಾಯ್ಸ್ ಕಾರ್ಯಕ್ರಮ ಮಾತ್ರ ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮಗಳಿಗೆ ಅತಿಥಿಗಳನ್ನು ಕರೆಸುವ ಜವಾಬ್ದಾರಿಯನ್ನು ನಾಲ್ಕೈದು ದಿನಗಳಲ್ಲಿ ರಚನೆಯಾಗಲಿರುವ ಕೋರ್ ಕಮಿಟಿ ಮಾಡಲಿದೆ. ಅಂದರೆ ಕ್ಯಾಪ್ಟನ್ ರಂಗ ಅವ್ರು ಕೇವಲ ಕಾರ್ಯಕ್ರಮ ನಿರೂಪಕರು ಮಾತ್ರ!' ಎಂದು ಮ್ಯಾನೇಜ್ಮೆಂಟ್ ಸ್ಪಷ್ಟವಾಗಿ ಹೇಳಿದೆ.

ಮುಂದಿನ ಬದಲಾವಣೆ ವರೆಗೆ ನಿರೂಪಕ ಹಮೀದ್ ಪಾಳ್ಯ ಸಂಪಾದಕೀಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ರಂಗ ಅವರು ಇತ್ತೀಚಿಗೆ ಹತಾಶೆಗೆ ಒಳಗಾಗಿದ್ದರಾ? ಅವರು ವರ್ತಿಸುತ್ತಿದ್ದ ರೀತಿ ನೋಡಿದರೆ ಹೌದು ಎನ್ನುತ್ತಾರೆ ಸುವರ್ಣ ನ್ಯೂಸ್ ನ ಹಲವರು. ಟಿವಿ ೯ ನಲ್ಲಿ ವಿಶೇಷ ವರದಿ ಬಂದರೂ ಅದು ನಮ್ಮಲ್ಲಿ ಯಾಕೆ ಬರಲಿಲ್ಲ ಎಂದು ದಬಾಯಿಸುತ್ತಿದ್ದರಂತೆ. ಅವರ ಅಧಿಕಾರಾವಧಿಯ ಆರಂಭದಿಂದ ಕೊನೆವರೆಗೂ ಅವರು ಟಿವಿ ೯ ಅನ್ನು ಯಶಸ್ವಿಯಾಗಿ ಅನುಕರಣೆ ಮಾಡಿದರು. ಎರಡು ವಾರದ ಹಿಂದೆ ಸುವರ್ಣ ನ್ಯೂಸ್ ಪಿಸಿಆರ್ (ಪ್ಯಾನೆಲ್ ಕಂಟ್ರೋಲ್ ರೂಂ) ನಲ್ಲಿದ್ದ ಇಬ್ಬರ ಮೇಲೆ ಹಲ್ಲೆಯನ್ನೂ ನಡೆಸಿದ್ದರಂತೆ ರಂಗ. ಇದನ್ನು ತಿಳಿದ ಮ್ಯಾನೇಜ್ಮೆಂಟ್ ಅವರಿಂದ ರಾಜೀನಾಮೆ ಪಡೆಯಲು ಮುಂದಾಯಿತು.

ಇದೇನೇ ಇರಲಿ. ರಂಗ ಮತ್ತು ರವಿ ಹೆಗ್ಡೆ ಕಳೆದ ಒಂದೂವರೆ ವರ್ಷದಲ್ಲಿ ಸುವರ್ಣ ನ್ಯೂಸ್ ನಲ್ಲಿ ಮಾಡಬಾರದ ಎಲ್ಲ ಅನಾಹುತಗಳನ್ನೂ ಮಾಡಿದ್ದಾರೆ. *(ಕಳೆದ ಒಂದೂವರೆ ತಿಂಗಳಿನಿಂದ ರವಿ ಹೆಗ್ಡೆ ಉದಯವಾಣಿ ಸಂಪಾದಕರು.) ಮುಖ್ಯವಾಗಿ ಹೇಳುವುದಾದರೆ, ವೇತನ ತಾರತಮ್ಯ. ರವಿ ಹೆಗ್ಡೆ ಎಲ್ಲ ಮಹಿಳಾ ಆಂಕರ್ ಗಳ ಸಂಬಳವನ್ನು ಹೆಚ್ಚಿಸಿದರು. ಆದರೆ ಇತರ ಮಹಿಳಾ ಸಿಬ್ಬಂದಿಗೆ metarnity ರಜೆಯ ಸಂಬಳ ಕೊಡುವುದಕ್ಕೂ ನಿರಾಕರಿಸಿದ ಉದಾಹರಣೆಗಳಿವೆ. ಯಾಕೆ ಈ ತಾರತಮ್ಯ?

ರಂಗ ಅವರಂತೂ ತಮ್ಮವರಿಗೆ ಅಂದರೆ ಲಾಬಿ ಮಾಡುವವರಿಗೆ, ಬಕೆಟ್ ಹಿಡಿಯುವವರಿಗೆ, ಭ್ರಷ್ಟಾಚಾರ ಮಾಡುವವರಿಗೆ ಮನಸೋ ಇಚ್ಛೆ ವೇತನ ಹೆಚ್ಚಿಸಿದರು. ಸಂಬಳ ಹೆಚ್ಚಿಸಿಕೊಳ್ಳಬೇಕು ಎನಿಸಿದವರೆಲ್ಲ ಅವರಿಗೆ ಕಚೇರಿ ಒಳಗಿನ, ಹೊರಗಿನ ಮಾಹಿತಿಗಳನ್ನು ನೀಡುತ್ತ, ತನಗೆ ಬೇರೆ ಚಾನಲ್ ನಿಂದ ಆಫರ್ ಇದೆ ಎಂದರೆ ಸಾಕು. ಇಲ್ಲ, ನೀನೆಲ್ಲೂ ಹೋಗಬೇಡ. ಸಂಬಳ ಜಾಸ್ತಿ ಮಾಡ್ತೀನಿ ಎಂದು ಅದೇ ತಿಂಗಳಲ್ಲೇ ಸ್ಯಾಲರಿ ಹೆಚ್ಚಿಸುತ್ತಿದ್ದರು.

ಕೆಲವರಿಗಂತೂ ಆರು ತಿಂಗಳಲ್ಲಿ ಮೂರು ಬಾರಿ ಸಂಬಳ ಹೆಚ್ಚಳವಾದ ಉದಾಹರಣೆಗಳೂ ಇವೆ. ಆರು ತಿಂಗಳ ಹಿಂದೆ 25 ಸಾವಿರ ರೂ. ಪಡೆಯುತ್ತಿದ್ದವರು ಈಗ 45 ಸಾವಿರ ರೂ. ಪಡೆಯುತ್ತಿದ್ದಾರೆ! ಆರಂಭದಿಂದಲೂ ಇಲ್ಲೇ ಇರುವ ಕೆಲವರ ಸಂಬಳ 12 ಸಾವಿರವೂ ದಾಟಿಲ್ಲ. ಕೆಲ ಕಾಪಿ ಎಡಿಟರ್, ರಿಪೋರ್ಟರ್ ಗಳು ಈಗಲೂ 6 ರಿಂದ 8 ಸಾವಿರ ಸಂಬಳ ಪಡೆಯುತ್ತಿದ್ದಾರೆ. ಅದೇ ಸುವರ್ಣ ನ್ಯೂಸ್ ಗೆ ಕನ್ನದಪ್ರಭದಿಂದ ವರ್ಷದ ಹಿಂದಷ್ಟೇ ಬಂದ ಕೆಲವರು 38000, 45000 ರೂ. ಸಂಬಳ ಪಡೆಯುತ್ತಿದ್ದಾರೆ. ತಮ್ಮ ಪಾಡಿಗೆ ಕೆಲಸ ಮಾಡಿಕೊಂಡಿರುವ ನಿಷ್ಠಾವಂತರಿಗೆ ಉಂಡೆ ನಾಮ ಹಾಕುವಲ್ಲಿ ರಂಗ ಯಶಸ್ವಿಯಾಗಿದ್ದಾರೆ.

ಇನ್ನೂ ಒಂದು ಸೋಜಿಗವಿದೆ- ಸುವರ್ಣ ನ್ಯೂಸ್ ಪತ್ರಿಕೆಗೆ ಅಂತಾ ಕನ್ನದಪ್ರಭದಿಂದ ಬಂದ 15 ಕ್ಕೂ ಹೆಚ್ಚು ಮಂದಿಗೆ 20000 , 40000 ಸಂಬಳ ನೀಡಲಾಗಿತ್ತು. ಕೆಲಸವೇ ಇಲ್ಲದೆ ಅವರೆಲ್ಲ ಓತ್ಲಾ ಹೊಡೆಯುತ್ತ ಸಂಬಳ ಎಣಿಸುತ್ತಿದ್ದರು. ಇದನ್ನೆಲ್ಲಾ ಮಾಡಿದ್ದು ರಂಗ ಮತ್ತು ರವಿ ಹೆಗ್ಡೆ. *(ಈಗ ಅದೇ ರವಿ ಹೆಗ್ಡೆ ಉದಯವಾಣಿಯಲ್ಲಿ ಸುವರ್ಣ ನ್ಯೂಸ್ ನಿಂದ ಬಂದವರಿಗೆ ಅಷ್ಟು ಸಂಬಳ ಕೊಡಿಸಲಾಗದೆ ಒದ್ದಾಡುತ್ತಿದ್ದಾರೆ ಎಂಬುದು ಬೇರೆ ಮಾತು.) ಕಾರ್ಯಕ್ಷಮತೆ ನೋಡಿ ಸಂಬಳ ಕೊಡಬೇಕೇ ಹೊರತು ಲಾಬಿ, ಬಕೆಟ್ ಹಿಡಿಯುವವರಿಗೆಲ್ಲ ಮನಬಂದಂತೆ ಸಂಬಳ ಕೊಟ್ಟರೆ ಹೇಗೆ? ಸುವರ್ಣ ನ್ಯೂಸ್ ನಲ್ಲಿ ರಂಗ ಮಾಡಿರುವ ಅನಾಹುತ ಸರಿಪಡಿಸಲು ವರ್ಷವೇ ಬೇಕಾದೀತು.

(ಓದುಗರೊಬ್ಬರೊಬ್ಬರು ಕಾಮೆಂಟಿಸಿದ್ದನ್ನು ಯಥಾವತ್ ಪ್ರಕಟಿಸಲಾಗಿದೆ. ಮಾಹಿತಿಯ ಜೊತೆಗೆ ಲೇಖನವನ್ನು ಕಳುಹಿಸಿಕೊಟ್ಟಿರುವ ಓದುಗರಿಗೆ ಥ್ಯಾಂಕ್ಸ್. ಪ್ರೀತಿ ಹೀಗೆ ಮುಂದುವರಿಯಲಿ)