ಅಯ್ಯೋ ಯಾಕೆ ಹೀಗಾಯ್ತು? ರಂಗ ಬಿಡ್ತಾರೆ ಅನ್ನೋ ಸುದ್ದಿಯನ್ನು ಮಾಡಲು ಸ್ಫೋಟಿಸಿದ್ದೆ ಮೀಡಿಯಾಮನ. ಬಹುಷಃ ನೀವು ಬೇರಾವುದೋ ಕೆಲಸದಲ್ಲಿ ಬ್ಯುಸಿ ಆಗಿರಬೇಕು ಅನ್ಸುತ್ತೆ. ಅದ್ಕೆ ನನಗೆ ಸಿಕ್ಕ ಅಧಿಕೃತ ಮಾಹಿತಿಯನ್ನು ಪೋಸ್ಟ್ ಮಾಡುತ್ತಿದ್ದೇನೆ. ಸಾಧ್ಯವಾದರೆ ಬಳಸಿಕೊಳ್ಳಿ.
ಕ್ಯಾಪ್ಟನ್ ರಂಗನ ಕಪ್ತಾನಗಿರಿ ಮುಗಿದಿದೆ. ಅವರ ಸರ್ವಾಧಿಕಾರಿ ಧೋರಣೆಗೆ ಪೆಟ್ಟು ಬಿದ್ದಿದೆ. ಸುಮಾರು ಒಂದೂವರೆ ತಿಂಗಳ ಹಿಂದೆ ರಂಗ ಹಾಗೂ ಶಿವಸ್ವಾಮಿ ಎಂಬುವರನ್ನು ಕರೆದ ಮ್ಯಾನೇಜ್ಮೆಂಟ್ `ನಿಮ್ಮಿಂದ ಕಚೇರಿ ವಾತಾವರಣ ಹಾಳಾಗುತ್ತಿದೆ. ಇದೆಲ್ಲ ಸರಿಯಲ್ಲ' ಎಂದು ಎಚ್ಚರಿಸಿದೆ. ಅದರೂ ರಂಗ ತಮ್ಮ ಸರ್ವಾಧಿಕಾರಿ ಧೋರಣೆ ಬದಲಿಸಿಕೊಳ್ಳಲಾರದೆ ಎಲ್ಲರನ್ನೂ ಏಕವಚನದಲ್ಲಿ ಬಯ್ಯುತ್ತ, ಸಿಟ್ಟು ಮಾಡಿಕೊಳ್ಳುತ್ತ ನಂಗೆ ಇದೆಲ್ಲ ಬೇಡ ಎಂದು ಚೇಮ್ಬರಿನ ಬಾಗಿಲು ಹಾಕಿ ಮನೆ ದಾರಿ ಹಿಡಿಯುತ್ತಿದ್ದರು.
ಆದರೆ ಇಂದು ಮ್ಯಾನೇಜ್ಮೆಂಟ್ ನವರೇ ಹೋಗಿ, ನಿಮ್ಮ ಸಹವಾಸ ಸಾಕು ಎಂದರೂ `ಹೊಸ ಸಂಪಾದಕರು ಬರುವವರೆಗೆ ಇರುತ್ತೇನೆ' ಎನ್ನುತ್ತಿದ್ದಾರಂತೆ. ಇದೆಂಥ ವಿಪರ್ಯಾಸ! ಅಲ್ಲದೆ ರಂಗ ಅವರು ತಮ್ಮ ಸಹೋದ್ಯೋಗಿಗಳ ಬಳಿ `ನಂಗೆ ಆರೋಗ್ಯ ಚೆನ್ನಾಗಿಲ್ಲ. ಅದ್ಕೆ ನ್ಯೂಸ್, ಪ್ರೋಗ್ರಾಮ್ಸ್ ಮಾತ್ರ ನೋಡ್ಕೋತೀನಿ. ಆಡಳಿತ ನಿರ್ವಹಣೆ ನನ್ನಿಂದ ಸಧ್ಯ ಇಲ್ಲ ಅಂತ ಮ್ಯಾನೇಜ್ಮೆಂಟ್ ಗೆ ಹೇಳಿದೀನಿ. ನಾನೆಲ್ಲೂ ಹೋಗಲ್ಲ' ಅಂತ ಪುಂಗಿ ಊದುತ್ತಿದ್ದಾರಂತೆ.
ಇದನ್ನೆಲ್ಲಾ ಕೇಳಿಸಿಕೊಂಡ ಮ್ಯಾನೇಜ್ಮೆಂಟ್ `ಅವ್ರ ಆರೋಗ್ಯ ಸರಿ ಇಲ್ಲ ಅಂತಾನೆ ಅವ್ರಿಗೆ ರಾಜೀನಾಮೆ ಕೊಡಿ ಅಂದ್ವಿ. ಅವ್ರು ಒಪ್ಪಲಿಲ್ಲ. ಆದ್ದರಿಂದ ರಂಗ ಅವರನ್ನು ಹಲವು ಕೆಲಸಗಳಿಂದ ಮುಕ್ತಿಗೊಳಿಸಿದ್ದೇವೆ. ಅವರು ಇನ್ಮುಂದೆ ಕೇವಲ ಸಂಪಾದಕೀಯ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ. ಅವರು ಜುಗಲ್ಬಂದಿ ಹಾಗೂ ಪಬ್ಲಿಕ್ ವಾಯ್ಸ್ ಕಾರ್ಯಕ್ರಮ ಮಾತ್ರ ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮಗಳಿಗೆ ಅತಿಥಿಗಳನ್ನು ಕರೆಸುವ ಜವಾಬ್ದಾರಿಯನ್ನು ನಾಲ್ಕೈದು ದಿನಗಳಲ್ಲಿ ರಚನೆಯಾಗಲಿರುವ ಕೋರ್ ಕಮಿಟಿ ಮಾಡಲಿದೆ. ಅಂದರೆ ಕ್ಯಾಪ್ಟನ್ ರಂಗ ಅವ್ರು ಕೇವಲ ಕಾರ್ಯಕ್ರಮ ನಿರೂಪಕರು ಮಾತ್ರ!' ಎಂದು ಮ್ಯಾನೇಜ್ಮೆಂಟ್ ಸ್ಪಷ್ಟವಾಗಿ ಹೇಳಿದೆ.
ಮುಂದಿನ ಬದಲಾವಣೆ ವರೆಗೆ ನಿರೂಪಕ ಹಮೀದ್ ಪಾಳ್ಯ ಸಂಪಾದಕೀಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ರಂಗ ಅವರು ಇತ್ತೀಚಿಗೆ ಹತಾಶೆಗೆ ಒಳಗಾಗಿದ್ದರಾ? ಅವರು ವರ್ತಿಸುತ್ತಿದ್ದ ರೀತಿ ನೋಡಿದರೆ ಹೌದು ಎನ್ನುತ್ತಾರೆ ಸುವರ್ಣ ನ್ಯೂಸ್ ನ ಹಲವರು. ಟಿವಿ ೯ ನಲ್ಲಿ ವಿಶೇಷ ವರದಿ ಬಂದರೂ ಅದು ನಮ್ಮಲ್ಲಿ ಯಾಕೆ ಬರಲಿಲ್ಲ ಎಂದು ದಬಾಯಿಸುತ್ತಿದ್ದರಂತೆ. ಅವರ ಅಧಿಕಾರಾವಧಿಯ ಆರಂಭದಿಂದ ಕೊನೆವರೆಗೂ ಅವರು ಟಿವಿ ೯ ಅನ್ನು ಯಶಸ್ವಿಯಾಗಿ ಅನುಕರಣೆ ಮಾಡಿದರು. ಎರಡು ವಾರದ ಹಿಂದೆ ಸುವರ್ಣ ನ್ಯೂಸ್ ಪಿಸಿಆರ್ (ಪ್ಯಾನೆಲ್ ಕಂಟ್ರೋಲ್ ರೂಂ) ನಲ್ಲಿದ್ದ ಇಬ್ಬರ ಮೇಲೆ ಹಲ್ಲೆಯನ್ನೂ ನಡೆಸಿದ್ದರಂತೆ ರಂಗ. ಇದನ್ನು ತಿಳಿದ ಮ್ಯಾನೇಜ್ಮೆಂಟ್ ಅವರಿಂದ ರಾಜೀನಾಮೆ ಪಡೆಯಲು ಮುಂದಾಯಿತು.
ಇದೇನೇ ಇರಲಿ. ರಂಗ ಮತ್ತು ರವಿ ಹೆಗ್ಡೆ ಕಳೆದ ಒಂದೂವರೆ ವರ್ಷದಲ್ಲಿ ಸುವರ್ಣ ನ್ಯೂಸ್ ನಲ್ಲಿ ಮಾಡಬಾರದ ಎಲ್ಲ ಅನಾಹುತಗಳನ್ನೂ ಮಾಡಿದ್ದಾರೆ. *(ಕಳೆದ ಒಂದೂವರೆ ತಿಂಗಳಿನಿಂದ ರವಿ ಹೆಗ್ಡೆ ಉದಯವಾಣಿ ಸಂಪಾದಕರು.) ಮುಖ್ಯವಾಗಿ ಹೇಳುವುದಾದರೆ, ವೇತನ ತಾರತಮ್ಯ. ರವಿ ಹೆಗ್ಡೆ ಎಲ್ಲ ಮಹಿಳಾ ಆಂಕರ್ ಗಳ ಸಂಬಳವನ್ನು ಹೆಚ್ಚಿಸಿದರು. ಆದರೆ ಇತರ ಮಹಿಳಾ ಸಿಬ್ಬಂದಿಗೆ metarnity ರಜೆಯ ಸಂಬಳ ಕೊಡುವುದಕ್ಕೂ ನಿರಾಕರಿಸಿದ ಉದಾಹರಣೆಗಳಿವೆ. ಯಾಕೆ ಈ ತಾರತಮ್ಯ?
ರಂಗ ಅವರಂತೂ ತಮ್ಮವರಿಗೆ ಅಂದರೆ ಲಾಬಿ ಮಾಡುವವರಿಗೆ, ಬಕೆಟ್ ಹಿಡಿಯುವವರಿಗೆ, ಭ್ರಷ್ಟಾಚಾರ ಮಾಡುವವರಿಗೆ ಮನಸೋ ಇಚ್ಛೆ ವೇತನ ಹೆಚ್ಚಿಸಿದರು. ಸಂಬಳ ಹೆಚ್ಚಿಸಿಕೊಳ್ಳಬೇಕು ಎನಿಸಿದವರೆಲ್ಲ ಅವರಿಗೆ ಕಚೇರಿ ಒಳಗಿನ, ಹೊರಗಿನ ಮಾಹಿತಿಗಳನ್ನು ನೀಡುತ್ತ, ತನಗೆ ಬೇರೆ ಚಾನಲ್ ನಿಂದ ಆಫರ್ ಇದೆ ಎಂದರೆ ಸಾಕು. ಇಲ್ಲ, ನೀನೆಲ್ಲೂ ಹೋಗಬೇಡ. ಸಂಬಳ ಜಾಸ್ತಿ ಮಾಡ್ತೀನಿ ಎಂದು ಅದೇ ತಿಂಗಳಲ್ಲೇ ಸ್ಯಾಲರಿ ಹೆಚ್ಚಿಸುತ್ತಿದ್ದರು.
ಕೆಲವರಿಗಂತೂ ಆರು ತಿಂಗಳಲ್ಲಿ ಮೂರು ಬಾರಿ ಸಂಬಳ ಹೆಚ್ಚಳವಾದ ಉದಾಹರಣೆಗಳೂ ಇವೆ. ಆರು ತಿಂಗಳ ಹಿಂದೆ 25 ಸಾವಿರ ರೂ. ಪಡೆಯುತ್ತಿದ್ದವರು ಈಗ 45 ಸಾವಿರ ರೂ. ಪಡೆಯುತ್ತಿದ್ದಾರೆ! ಆರಂಭದಿಂದಲೂ ಇಲ್ಲೇ ಇರುವ ಕೆಲವರ ಸಂಬಳ 12 ಸಾವಿರವೂ ದಾಟಿಲ್ಲ. ಕೆಲ ಕಾಪಿ ಎಡಿಟರ್, ರಿಪೋರ್ಟರ್ ಗಳು ಈಗಲೂ 6 ರಿಂದ 8 ಸಾವಿರ ಸಂಬಳ ಪಡೆಯುತ್ತಿದ್ದಾರೆ. ಅದೇ ಸುವರ್ಣ ನ್ಯೂಸ್ ಗೆ ಕನ್ನದಪ್ರಭದಿಂದ ವರ್ಷದ ಹಿಂದಷ್ಟೇ ಬಂದ ಕೆಲವರು 38000, 45000 ರೂ. ಸಂಬಳ ಪಡೆಯುತ್ತಿದ್ದಾರೆ. ತಮ್ಮ ಪಾಡಿಗೆ ಕೆಲಸ ಮಾಡಿಕೊಂಡಿರುವ ನಿಷ್ಠಾವಂತರಿಗೆ ಉಂಡೆ ನಾಮ ಹಾಕುವಲ್ಲಿ ರಂಗ ಯಶಸ್ವಿಯಾಗಿದ್ದಾರೆ.
ಇನ್ನೂ ಒಂದು ಸೋಜಿಗವಿದೆ- ಸುವರ್ಣ ನ್ಯೂಸ್ ಪತ್ರಿಕೆಗೆ ಅಂತಾ ಕನ್ನದಪ್ರಭದಿಂದ ಬಂದ 15 ಕ್ಕೂ ಹೆಚ್ಚು ಮಂದಿಗೆ 20000 , 40000 ಸಂಬಳ ನೀಡಲಾಗಿತ್ತು. ಕೆಲಸವೇ ಇಲ್ಲದೆ ಅವರೆಲ್ಲ ಓತ್ಲಾ ಹೊಡೆಯುತ್ತ ಸಂಬಳ ಎಣಿಸುತ್ತಿದ್ದರು. ಇದನ್ನೆಲ್ಲಾ ಮಾಡಿದ್ದು ರಂಗ ಮತ್ತು ರವಿ ಹೆಗ್ಡೆ. *(ಈಗ ಅದೇ ರವಿ ಹೆಗ್ಡೆ ಉದಯವಾಣಿಯಲ್ಲಿ ಸುವರ್ಣ ನ್ಯೂಸ್ ನಿಂದ ಬಂದವರಿಗೆ ಅಷ್ಟು ಸಂಬಳ ಕೊಡಿಸಲಾಗದೆ ಒದ್ದಾಡುತ್ತಿದ್ದಾರೆ ಎಂಬುದು ಬೇರೆ ಮಾತು.) ಕಾರ್ಯಕ್ಷಮತೆ ನೋಡಿ ಸಂಬಳ ಕೊಡಬೇಕೇ ಹೊರತು ಲಾಬಿ, ಬಕೆಟ್ ಹಿಡಿಯುವವರಿಗೆಲ್ಲ ಮನಬಂದಂತೆ ಸಂಬಳ ಕೊಟ್ಟರೆ ಹೇಗೆ? ಸುವರ್ಣ ನ್ಯೂಸ್ ನಲ್ಲಿ ರಂಗ ಮಾಡಿರುವ ಅನಾಹುತ ಸರಿಪಡಿಸಲು ವರ್ಷವೇ ಬೇಕಾದೀತು.
(ಓದುಗರೊಬ್ಬರೊಬ್ಬರು ಕಾಮೆಂಟಿಸಿದ್ದನ್ನು ಯಥಾವತ್ ಪ್ರಕಟಿಸಲಾಗಿದೆ. ಮಾಹಿತಿಯ ಜೊತೆಗೆ ಲೇಖನವನ್ನು ಕಳುಹಿಸಿಕೊಟ್ಟಿರುವ ಓದುಗರಿಗೆ ಥ್ಯಾಂಕ್ಸ್. ಪ್ರೀತಿ ಹೀಗೆ ಮುಂದುವರಿಯಲಿ)
9 comments:
This is 100% TRUE.
Duo did same in Kannada Prabha.
In KP some dist reporters minting money like anything. Vbhat dont knwo.
ರಂಗ ಹೋದದ್ದು ಶುಭ ಲಕ್ಷಣ ಅಂತ ಕಾಣುತ್ತೆ.ಇನ್ನಾದರೂ ಇತರ ಚಾನೆಲ್ಲೂಗಳನ್ನು ಅನುಕರಣೆ ಮಾಡದೇ ತನ್ನ ಸ್ವಂತ ದಾರಿಯಲ್ಲಿ ಸುವರ್ಣ ಚಾನೆಲ್ ಮುಂದೇ ಸಾಗಲಿ..
avru namma channel ge bandaga yeeno uddara madthare ankondiddevu. aadre yella cheif gala thara ivru bucketgalige mane hakidru. katthe, goobe, idiot, rascal, dabba idu ivara nitya pada balakeya sample. avra makkalanna heege baitharo ilvo gottilla aadre employs ge balakeyallidda pada idene. kelsa kalkondavra sankata yenu annodu avrige inmeladru thiliyali. devru avranna chennagi ittirli...ugadi habbakke avru namge kotta dodda gift `bhrama nirasana'. aadre indigu avra baala hididavru eegagle hosabara baalakkagi hodukata nadisiddare...
swamy mediadalli hosa belavanigegalu dinada 24 ganteyu aaguttiruttave. ee belavanigegalalli uttamavaadavuu iruttave. anta issuegalannu ittukondu aarogyapoorna charchege vedike odagisi.media housegalalli nadeyu intaha vidyamaanagalannu oodi patrakartaru maatra maza tagoltare. saamaanya readersge idannu kattikondu enaagabekide.idu kevala udyoga illada patrakartaru nadesuva charcheyantaagide.
ಮೀಡಿಯಾ ಮನ ಬ್ಲಾಗಿಗೆ ನೂರು ಧನ್ಯವಾದ. ರಂಗನ ನಿಜವಾದ ಬಣ್ಣವನ್ನು ಬಯಲುಮಾಡಿದೆ. ನಮಗೆಲ್ಲ ರಂಗನಿಂದಾಗಿ ಕಚೇರಿಯಲ್ಲಿ ಕೆಲಸ ಮಾಡಲು ಆಗದೇ ಬೇರೆ ಚಾನಲ್ ಹುಡುಕಿಕೊಂಡೆವು. ಅಬ್ಬಾ ಆ ರಂಗ ಬಾಯಿ ತೆರೆದ ಅಂದ್ರೆ ಕೆಟ್ಟ ಕೆಟ್ಟ ಶಬ್ದಗಳೇ ಬರ್ತಾವೆ. ರಂಗನಿಗೆ ಚಾಡಿ ಹೇಳೋರು ಅಂದ್ರೆ ಬೋ ಪ್ರೀತಿ. ಆದ್ರೆ, ಯಾಕೋ ರವಿ ಸರ್ ಬಗ್ಗೆ ನೀವು ಬರೆದಿದ್ದು ಸರಿ ಕಾಣಲಿಲ್ಲ. ಅವರು ಯಾವತ್ತೂ ಯಾರನ್ನೂ ಕೆಟ್ಟದಾಗಿ ನಡೆಸಿಕೊಂಡಿಲ್ಲ. ಬೈದಿಲ್ಲ. ಅವರ ಬಾಯಿಂದ ನಾನಂತೂ ಒಂದೂ ಕೆಟ್ಟ ಮಾತು ಯಾವತ್ತೂ ಕೇಳಿಲ್ಲ. ನಾನಷ್ಟೇ ಅಲ್ಲ ಸುವರ್ಣನ್ಯೂಸ್ನ ಎಲ್ಲರೂ ಇದನ್ನೇ ಹೇಳ್ತಾರೆ. ಬೇಕಾದ್ರೆ ದಯವಿಟ್ಟು ಕೇಳಿನೋಡಿ. ರವಿ ಸರ್ ಡಿಪಾರ್ಟ್ಮೆಂಟಲ್ಲಿ ಕೆಲಸ ಮಾಡೋರು ಲಕ್ಕಿಗಳು ಅಂತ ನಾವು ಮಾತಾಡಿಕೊಳ್ತಿದ್ವಿ. ಅವರು ಮಹಿಳಾ ಆಂಕರ್ಗಳಿಗೆ ಮಾತ್ರ ಸಂಬಳ ಹೆಚ್ಚು ಕೊಡಿಸಿದ್ದಾರೆ ಅನ್ನೋದು ಸರಿಯಲ್ಲ. ಮಹಿಳೆ ಹಾಗೂ ಪುರುಷ ಅಂತ ನೋಡದೇ ಎಲ್ಲರಿಗೂ ವೇತನ ಹೆಚ್ಚು ಕೊಡಿಸಿದ್ದಾರೆ. ಸುವರ್ಣ ನ್ಯೂಸ್ನಲ್ಲಿ ಹೆರಿಗೆ ರಜೆ ಹಾಗೂ ಹೆರಿಗೆ ವೇತನ ವ್ಯವಸ್ಥೆಯೇ ಇಲ್ಲ ಅಂತ ಗೊತ್ತಾದಾಗ ಆ ಯೋಜನೆಯನ್ನು ಮ್ಯಾನೇಜ್ಮೆಂಟಿಗೆ ಹೇಳಿ ಜಾರಿಗೊಳಿಸಿದ್ದು ರವಿ ಸರೇ. ಅಷ್ಟೇ ಅಲ್ಲ, ಸಿಬ್ಬಂದಿಗೆ ಆರೋಗ್ಯ ವಿಮೆ ಮಾಡಿಸಿದ್ದು ಸಹ ರವಿ ಸರೇ. ಗ್ರಾಫಿಕ್ಸ್, ಎಡಿಟಿಂಗ್, ಕ್ಯಾಮರಾ, ಪಿಸಿಆರ್, ಲೈಬ್ರರಿ ಡಿಪಾರ್ಟ್ಮೆಂಟುಗಳನ್ನು ಇಂಪ್ರೂ ಮಾಡಿದ್ದೇ ರವಿ ಸರ್. ಇವತ್ತು ಸುವರ್ಣ ನ್ಯೂಸ್ನಲ್ಲಿ ಎಷ್ಟೋ ಜನರ ಕೆಲಸ ಉಳಿಯಲು ರವಿ ಸರೇ ಕಾರಣ. ರವಿ ಸರ್ ಬಿಟ್ಟು ಉದಯವಾಣಿಗೆ ಹೊರಟಾಗಲೇ, ಸುವರ್ಣ ನ್ಯೂಸ್ ಈ ದುಸ್ಥಿತಿಗೆ ಬರುತ್ತದೆ ಅಂತ ನಮಗೆಲ್ಲಾ ಗೊತ್ತಾಗಿತ್ತು. ಈಗ ನೋಡಿ ಉದಯವಾಣಿ ಹೇಗೆ ಇಂಪ್ರೂ ಆಗುತ್ತಿದೆ ಅಂತ.
ರವಿ ಸರೇ ಕಾರಣ. ರವಿ ಸರ್ ...
This is cheating...
Poster boy Ranga can't forget Ranga.
Mind it
Dont forget this duo...
Both are same...two faces of one single coin
Now, anchor Jayaprakash Shetty is Politicakll bureau chief of Suvarna Tv 24*7
How can he handle who can't file a political development properly.
Suvarna kaala yaarige ?!
Miss Sangeetha Wrote that anchor Jayaprakash Shetty is Politicakll bureau chief& Hameed is News Chif in 24x7 Suvarna.For How many days they R?
ನಾವು ಓದುಗರು, ನೋಡುಗರು ಅಮಾಯಕರು ರಂಗನಾಥ್ ಹೇಳೋದನ್ನು ನಂಬುತ್ತೇವೆ. ರವಿಬೆಳೆಗೆರೆ ಹೇಳೋದನ್ನು ನಂಬುತ್ತೇವೆ. ವಿಶ್ವೇಶ್ವರ ಭಟ್, ಪ್ರಾತಾಪ ಸಿಂಹರನ್ನು ನಂಬುತ್ತೇವೆ. ಅವರಿಂದ ಈ ರಾಜ್ಯಕ್ಕೆ ಯಾವುದಾರು ರೀತಿಯಲ್ಲಿ ಸಹಕಾರ ಆಗುತ್ತೆ ಅಂತ ಬಯಸುತ್ತೇವೆ.
ಅವರನ್ನು ಮನಸಿನ್ನಲ್ಲಿ ಇಟ್ಟುಕೊಂಡು ಪತ್ರಗಳನ್ನು ಬರಿತಿವಿ. ಈ ಮಹಾನುಭಾವರು ನಮ್ಮ ಪತ್ರಗಳನ್ನು ನಮ್ಮ ಪ್ರಶ್ನೆಗಳನ್ನು ತಮ್ಮ ಅಂದಿನ ಕೆಳಗೆ ಹಾಕಿಕೊಂಡು ಕುಳಿತು ಬಿಡುತ್ತಾರೆ. ಸುವರ್ಣ ವಾಹಿನಿಯಲ್ಲಿ ಪ್ರತಿನಿತ್ಯ ಕನ್ನಡದ ಕೊಲೆ ಆಗುತ್ತಿದೆ ಅಕ್ಷರಗಳು ತಪ್ಪು ತಪ್ಪು ಅದರ ಬಗ್ಗೆ ಒಂದು ವರ್ಷದಿಂದ ಬರೆದರೂ ಯಾವುದೇ ಪ್ರತಿಕ್ರಿಯೆ ಇಲ್ಲ !!
ಭ್ರಷ್ಟಾಚಾರದ ವಿರುದ್ಧ ಆಂದೋಲನ ಅಭಿಯಾನ ಮಾಡುತ್ತಾರೆ .
(ನಮ್ಮ ನಾಡಿನ ಭ್ರಷ್ಟಾಚಾರವನ್ನು ತಡೆಯುವುದು ಹೇಗೆ ?
ದಯವಿಟ್ಟು ಈ ಲಿಂಕನ್ನು ಓದಿ .... http://www.facebook.com/profile.php?id=100001508660835
ಈ ಲಿಂಕನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ,
ರಾಜು
rajudavanagere@gmail.ಕಂ)
ಸಾಮಾನ್ಯ ಜನರು ಯಾವುದಾದರೋ ಒಂದು ತಪ್ಪು ಮಾಡಿದರೆ ಬೆಳಗಿನಿಂದ ಸಂಜೆ ವರೆಗೂ ತೋರಿಸಿಸುವುದನ್ನು ತೋರಿಸುತ್ತಾರೆ.
೨೦ ತಿಂಗಳ ಜನಪ್ರಿಯ ಮುಖ್ಯಮಂತ್ರಿ ಯಾ ಮ್ದುಅವೆ ವಿಚಾರಗಳು ಫೋಟೋ ಸಮೇತ ಆಧಾರ ಸಿಕ್ಕಿದರು ಅದರ ಬಗ್ಗೆ ಚಕ್ರ ಎತ್ತುವುದಿಲ್ಲ. ಅದ್ರ ಬಗ್ಗೆ ಬರೆದು ಬರೆದು ಹುಚ್ಚರಾ ಗಬೇಕು ನಾವು
http://www.facebook.com/profile.php?id=100001225067997#!/media/set/?set=a.198736523496913.42221.100000816996773
ಸ್ವಂತಿಕ, ಜವಾಬ್ಧಾರಿ, ಸ್ವಾಭಿಮಾನ ಇಲ್ಲದ ಪತ್ರಿಕೋದ್ಯಮ ಇಲ್ಲವೇ ?
ಸ್ವಾರ್ಥ ವೆ ಮುಖ್ಯವಾ ?
ರಾಜು
ದಾವಣಗೆರೆ
rajudavanagere@gmail.com
Post a Comment