Friday 20 May 2011

ಉದಯವಾಣಿ ಹೊಸತನದಲ್ಲಿ ನಕಲಿನ ಘಮಲು

ಸಣ್ಣ ಗಿಡವನ್ನು ಪ್ರತಿದಿನ ಮುಖಪುಟದಲ್ಲಿ ಕಾಣುತ್ತಿತ್ತು. ಒಂದು ದಿನ ಬೆಳಿಗ್ಗೆ ಆ ಗಿಡ ಸಡನ್ ದೊಡ್ಡದಾಗಿತ್ತು. ಅದೊಂದನ್ನು ಬಿಟ್ಟರೆ ಉಳಿದಂತೆ ಉದಯವಾಣಿ ಬದಲಾವಣೆಯಲ್ಲಿ ಕಂಡಿದ್ದು ಕೇವಲ ನಕಲು ಮಾತ್ರ.

ಮುಖಪುಟದಲ್ಲಿ ಗ್ರೂಪ್ ಎಡಿಟರ್ ರವಿ ಹೆಗ್ಡೆ ಬರೆದ ನೋಟ್  ತುಂಬಾ ಆರ್ಡಿನರಿಯಾಗಿತ್ತು. ರವಿ ಹೆಗ್ಡೆಯವರಿಂದ ನಾವಿದನ್ನು ನಿರೀಕ್ಷಿಸಿರಲಿಲ್ಲ.

ಪುಟಕ್ಕೊಂದು ಪಂಚ್, ನಂಬರ್ ಪ್ಲೇಟ್ಗಳೆಲ್ಲ ಮೊದಲು ವಿಕದಲ್ಲಿ ಮಾಡಿದ ಪ್ರಯೋಗಗಳೇ. ಹೊಸ ಹೆಸರು, ಹೊಸ ಡಿಸೈನ್. ಅದರಲ್ಲೂ ದಂ ಇಲ್ಲ. ಓದುಗರನ್ನು ಕಣ್ಸೆಳೆಯಲು ವಿಫಲ. ಕಪ್ರದಲ್ಲಿ ಅಡ್ವಾಣಿ ಅವರ ಅಂಕಣ ಪ್ರಕಟವಾಗುತ್ತಿದ್ದಂತೆ, ಉದಯವಾಣಿಯಲ್ಲೂ ಅವರ ಲೇಖನ ಪ್ರಕಟಿಸಿದರು. ಬುಲೆಟ್ ಸಂದರ್ಶನ ಮಾದರಿಯಲ್ಲಿ ನೇರಾ ನೇರ. ಇದನ್ನೆಲ್ಲಾ ನೋಡಿದ ಮೇಲೆ ಉದಯವಾಣಿಯ ಹೊಸತು ಅಂದರೆ ಬೇರೆ ಪತ್ರಿಕೆಯಿಂದ ನಕಲು ಮಾಡಿದ್ದು ಎಂದು. ಆದರು ಕಾಡು ನೋಡೋಣ ಎಂದುಕೊಂಡಿದ್ದೆವು.

ಇಂದಿನ ಮುಖಪುಟದಲ್ಲಿ ಟ್ವೀಟರ್ ಜಾಹಿರಾತು ನೋಡಿದ ಮೇಲೆ ಖಾತ್ರಿಯಾಯಿತು, ಉದಯವಾಣಿಯ ಗಿಡ ಇನ್ಯಾರೋ ಬಿತ್ತಿದ ಬೀಜ ಎಂದು. ಕನ್ನಡದಲ್ಲಿ ಮೊದಲಬಾರಿಗೆ ಟ್ವಿಭಾಷಿತ ಹೆಸರಲ್ಲಿ ಟ್ವೀಟರ್ ಬಳಸಿದ್ದು ವಿ. ಭಟ್ಟರು, ಅವರ ವೆಬ್ ಸೈಟಿನಲ್ಲಿ. ಅದರನಂತರ ಕನ್ನಡಪ್ರಭ. ಟ್ವಿಭಾಷಿತ ಕಪ್ರದ ಎಡಿಟೋರಿಯಲ್ ಪೇಜ್ ಗೆ ವರ್ಗಾವಣೆಗೊಂಡಿತು.

ರವಿ ಹೆಗ್ಡೆ ಮತ್ತು ತಂಡದವರು ಇದನ್ನೇ ನಕಲು ಮಾಡಿದ್ದಾರೆ. ಆದರೆ ಮಾದರಿ ಬೇರೆ. ವಿ.ಭಟ್ಟರು ಒಳ್ಳೆ ಟ್ವೀಟರ್ ಆಯ್ಕೆ ಮಾಡಿ ಪ್ರಕಟಿಸಿದರೆ, ಉದಯವಾಣಿಯವರು ಒಂದು ವಿಷಯಕ್ಕೆ ಸಂಬಂಧಿಸಿದಂತೆ ಹಲವರ ಟ್ವೀಟ್ ಪ್ರಕಟಿಸಿದ್ದಾರೆ.

ರವಿ ಹೆಗ್ಡೆ ಮತ್ತು ತಂಡದವರು ಸುವರ್ಣ ಚಾನಲ್ ನಲ್ಲಿ ಇದ್ದಾಗಲೂ ಟಿವಿ ೯ ಕಾರ್ಯಕ್ರಮಗಳನ್ನು ನಕಲು ಮಾಡಿದ್ದೆ ಸಾಧನೆ. ಒಂದು ಹೊಸ ಅಥವಾ ಒರಿಜಿನಲ್ ಕಾರ್ಯಕ್ರಮ ಮಾಡಿದ್ದು ಗೊತ್ತಿಲ್ಲ.

ಕಪ್ರದವರು ಏನೇನ್ ಮಾಡ್ತೀವಿ ನೋಡ್ತಾ ಇರಿ ಅನ್ನುತ್ತಾರೆ. ಬಹುಶ ಉದಯವಾಣಿಯವರು ಏನೇನ್ ಕಳವು ಮಾಡ್ತೀವಿ ನೋಡ್ತಾ ಇರಿ ಎಂದು ಅನ್ನಬಹುದೇನೋ!

11 comments:

Anonymous said...

chennagi helideri....

gump editor ravi hegde UDAYAVANI annu enenu halu madbekooo adanella madi rangana chennelge hogtare antha hosa suddi bandide....
idu nijave adre.... udayavani GOVINDA......

Anonymous said...

Andre Rangana hosa channell enadru barta idya.. Swalpa rangana bagge information idre heli

Anonymous said...

ಪಡ್ರೆ ಅಂತ ಉತ್ತಮ ಕೆಲಸಗಾರರನ್ನು ಸರಿಯಾಗಿ ಉಪಯೋಗಿಸಿಕೊಳ್ಳದ ಉದಯವಾಣಿ , ಹೆಗ್ಡೆ ಯಲ್ಲಿ ಏನು ನೋಡಿ ಕರ್ಕೊಂಡು ಬಂದರೋ ಆ ಉಡುಪಿ ಕೃಷ್ಣನಿಗೆ ಗೊತ್ತು

Anonymous said...

innondu neevu gamanisilla, Kannada prabhadalli barutidda daridra sbdha chitra Udayavaniyalli barutide.
avaru kpyalli eddaage kooda ade maadiddu, avaru hoda mele KPyalli baakiyada hudugau kooda bre kaddiddu bantu..originality ella...

Anonymous said...

varshakomme pepar oduvavarige hage ansodu. kannada prabhadalli vanya jeevigala bagge,neerina bagge, krishi bagge,aasare bagge banda pckage nodilla ansutte.ajnanigale nimma jnyana swalpa hecchisikolli.matte comment haki...

Anonymous said...

enri pathe illa update regular illa..?
udayavanili benki hothide. ravi hegde jothe gurumurthy open war start madiddare. old team thumba jana raje hogthiddare. guru, channegowda, bharathi hegde varagatle raja hakiddaranthe. prabhudev, hari prakash elru ache hogok kaithiddare antha suddi ide. swalpa nodi saar enen hagthide antha...?

sudheersanu said...

ನಮಸ್ಕಾರ ಸರ್, ಅದ್ಯಾರೋ ಬ್ಯೂರೋ ಮುಖ್ಯಸ್ಥರೊಬ್ಬರು ತನ್ನ ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ಕೊಟ್ಟು ಮನೆ ದಾರಿ ಹಿಡಿದಿದ್ದಾರಂತಲ್ಲ. ಆ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಿ.

Anonymous said...

ಪ್ರಾದ್ಯಾಪಕರೇ ಮಂಡೆ ಕಾಲಿ ಆಗಿದೆಯಾ? ಬರಿ ವಿಕೆ ಬಗ್ಗೆ ಸುವರ್ಣ ಬಗ್ಗೆ ಸುದ್ದಿ ಬರೀತಿದ್ರಲ್ಲ ಉದಯಟಿವಿ ನೂ ನೋಡ್ರಿ

Anonymous said...

ರವಿ ಹೆಗಡೆ ಬಂಟರಿಗೆ ಕೈತುಂಬಾ ಸಂಬಳ ಕೊಡಿಸಿದ್ದೇ ಸಾಧನೆ. ಅವರ ಕೆಲ ಬಂಟರು ನಲ್ವತ್ತು ಐವತ್ತು ಸಾವಿರ ತಿಂಗಳಿಗೆ ಪೀಕಿಸಿಕೊಂಡು ಅವರೇ ಪೇಜ್ ಮಾಡಿ, ಅದನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸಿ ಅವರೇ ನೋಡುತ್ತಾರಂತೆ. ಉದಯವಾಣಿಯನ್ನು ತಮ್ಮದೇ ಪತ್ರಿಕೆ ಎಂಬಂತೆ ಪ್ರೀತಿಸಿ ವರ್ಷಗಟ್ಟಲೆ ಮಣಿಪಾಲದಲ್ಲೇ ಸೇವೆ ಸಲ್ಲಿಸಿದ ಉಪಸಂಪಾದಕರಿಗೆ ಪೈಗಳು ಏನೂ ಕೊಟ್ಟಿಲ್ಲ. ಬೆಂಗಳೂರಿನವರು ಪೈಗಳು ಕೂಡಿಟ್ಟಿದ್ದನ್ನೆಲ್ಲಾ ಕೊಳ್ಳೆ ಹೊಡೆಯುತ್ತಿದ್ದಾರೆ.
- santap

Anonymous said...

chennagi helidriiiii

Anonymous said...

ರವಿ ಹೆಗಡೆ ಪ್ರತಿಕ್ರಿಯೆ ಅವರ ಬ್ಲಾಗಲ್ಲಿ ಪ್ರಕಟವಾಗಿದೆ. ನೋಡಿ...

http://glocalfunda.blogspot.com/2011/06/blog-post.html