ಸಣ್ಣ ಗಿಡವನ್ನು ಪ್ರತಿದಿನ ಮುಖಪುಟದಲ್ಲಿ ಕಾಣುತ್ತಿತ್ತು. ಒಂದು ದಿನ ಬೆಳಿಗ್ಗೆ ಆ ಗಿಡ ಸಡನ್ ದೊಡ್ಡದಾಗಿತ್ತು. ಅದೊಂದನ್ನು ಬಿಟ್ಟರೆ ಉಳಿದಂತೆ ಉದಯವಾಣಿ ಬದಲಾವಣೆಯಲ್ಲಿ ಕಂಡಿದ್ದು ಕೇವಲ ನಕಲು ಮಾತ್ರ.
ಮುಖಪುಟದಲ್ಲಿ ಗ್ರೂಪ್ ಎಡಿಟರ್ ರವಿ ಹೆಗ್ಡೆ ಬರೆದ ನೋಟ್ ತುಂಬಾ ಆರ್ಡಿನರಿಯಾಗಿತ್ತು. ರವಿ ಹೆಗ್ಡೆಯವರಿಂದ ನಾವಿದನ್ನು ನಿರೀಕ್ಷಿಸಿರಲಿಲ್ಲ.
ಪುಟಕ್ಕೊಂದು ಪಂಚ್, ನಂಬರ್ ಪ್ಲೇಟ್ಗಳೆಲ್ಲ ಮೊದಲು ವಿಕದಲ್ಲಿ ಮಾಡಿದ ಪ್ರಯೋಗಗಳೇ. ಹೊಸ ಹೆಸರು, ಹೊಸ ಡಿಸೈನ್. ಅದರಲ್ಲೂ ದಂ ಇಲ್ಲ. ಓದುಗರನ್ನು ಕಣ್ಸೆಳೆಯಲು ವಿಫಲ. ಕಪ್ರದಲ್ಲಿ ಅಡ್ವಾಣಿ ಅವರ ಅಂಕಣ ಪ್ರಕಟವಾಗುತ್ತಿದ್ದಂತೆ, ಉದಯವಾಣಿಯಲ್ಲೂ ಅವರ ಲೇಖನ ಪ್ರಕಟಿಸಿದರು. ಬುಲೆಟ್ ಸಂದರ್ಶನ ಮಾದರಿಯಲ್ಲಿ ನೇರಾ ನೇರ. ಇದನ್ನೆಲ್ಲಾ ನೋಡಿದ ಮೇಲೆ ಉದಯವಾಣಿಯ ಹೊಸತು ಅಂದರೆ ಬೇರೆ ಪತ್ರಿಕೆಯಿಂದ ನಕಲು ಮಾಡಿದ್ದು ಎಂದು. ಆದರು ಕಾಡು ನೋಡೋಣ ಎಂದುಕೊಂಡಿದ್ದೆವು.
ಇಂದಿನ ಮುಖಪುಟದಲ್ಲಿ ಟ್ವೀಟರ್ ಜಾಹಿರಾತು ನೋಡಿದ ಮೇಲೆ ಖಾತ್ರಿಯಾಯಿತು, ಉದಯವಾಣಿಯ ಗಿಡ ಇನ್ಯಾರೋ ಬಿತ್ತಿದ ಬೀಜ ಎಂದು. ಕನ್ನಡದಲ್ಲಿ ಮೊದಲಬಾರಿಗೆ ಟ್ವಿಭಾಷಿತ ಹೆಸರಲ್ಲಿ ಟ್ವೀಟರ್ ಬಳಸಿದ್ದು ವಿ. ಭಟ್ಟರು, ಅವರ ವೆಬ್ ಸೈಟಿನಲ್ಲಿ. ಅದರನಂತರ ಕನ್ನಡಪ್ರಭ. ಟ್ವಿಭಾಷಿತ ಕಪ್ರದ ಎಡಿಟೋರಿಯಲ್ ಪೇಜ್ ಗೆ ವರ್ಗಾವಣೆಗೊಂಡಿತು.
ರವಿ ಹೆಗ್ಡೆ ಮತ್ತು ತಂಡದವರು ಇದನ್ನೇ ನಕಲು ಮಾಡಿದ್ದಾರೆ. ಆದರೆ ಮಾದರಿ ಬೇರೆ. ವಿ.ಭಟ್ಟರು ಒಳ್ಳೆ ಟ್ವೀಟರ್ ಆಯ್ಕೆ ಮಾಡಿ ಪ್ರಕಟಿಸಿದರೆ, ಉದಯವಾಣಿಯವರು ಒಂದು ವಿಷಯಕ್ಕೆ ಸಂಬಂಧಿಸಿದಂತೆ ಹಲವರ ಟ್ವೀಟ್ ಪ್ರಕಟಿಸಿದ್ದಾರೆ.
ರವಿ ಹೆಗ್ಡೆ ಮತ್ತು ತಂಡದವರು ಸುವರ್ಣ ಚಾನಲ್ ನಲ್ಲಿ ಇದ್ದಾಗಲೂ ಟಿವಿ ೯ ಕಾರ್ಯಕ್ರಮಗಳನ್ನು ನಕಲು ಮಾಡಿದ್ದೆ ಸಾಧನೆ. ಒಂದು ಹೊಸ ಅಥವಾ ಒರಿಜಿನಲ್ ಕಾರ್ಯಕ್ರಮ ಮಾಡಿದ್ದು ಗೊತ್ತಿಲ್ಲ.
ಕಪ್ರದವರು ಏನೇನ್ ಮಾಡ್ತೀವಿ ನೋಡ್ತಾ ಇರಿ ಅನ್ನುತ್ತಾರೆ. ಬಹುಶ ಉದಯವಾಣಿಯವರು ಏನೇನ್ ಕಳವು ಮಾಡ್ತೀವಿ ನೋಡ್ತಾ ಇರಿ ಎಂದು ಅನ್ನಬಹುದೇನೋ!