ಸ್ವಲ್ಪ ದಿನದ ಪ್ರಜಾವಾಣಿ ಮತ್ತು ಸುವರ್ಣ ಚಾನಲ್ ಪ್ರವಾಸ ಮುಗಿಸಿದ ಸುಭಾಷ್ ಹೂಗಾರ ಮರಳಿ ಹಳೆ ಹೆಂಡತಿ ಪಾದವೇ ಗತಿ ಎಂದು ವಿಕ ಹುಬಳ್ಳಿ ಆವೃತ್ತಿ ಮುಖ್ಯಸ್ಥರಾಗಿ ಸೇರಿಕೊಂಡಿದ್ದಾರೆ.
ವೈದ್ಯರ ಕುರಿತು ಬರೆದರೆಂಬ ಕಾರಣಕ್ಕೆ ವಿಕ ಹಳೆಯ ಮಾಲಿಕರಾದ ವಿಜಯ ಸಂಕೇಶ್ವರರು ಸುಭಾಷ್ ಹೂಗಾರನನ್ನು ಕೆಟ್ಟದಾಗಿ ಹೊರಗಟ್ಟಿದ್ದರು. ವಿಜಯ ಸಂಕೇಶ್ವರರು ಹೀಗೆ ಹಲವರನ್ನು ಹೊರಹಾಕಿದ್ದರಂತೆ.
ಕೆಲದಿನದ ಹಿಂದೆ ಸುಭಾಷ್ ಹೂಗಾರ ವಿಕ ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥರಾದರು ಎಂಬ ಸುದ್ದಿ ಬಂದಾಗಿಂದ ಅವರ ಬಗ್ಗೆ ಮಾಹಿತಿಗಾಗಿ ನಾವು ಪ್ರಯತ್ನಿಸುತ್ತಿದ್ದೆವು. ಅಂತೂ ಹುಬ್ಬಳ್ಳಿ ಬ್ಯೂರೋದ ಡೆಸ್ಕ್ ಪತ್ರಕರ್ತರೊಬ್ಬರು ಹಾಗು ವಿಕ ಬೆಂಗಳೂರು ಕಛೇರಿಯಲ್ಲಿರುವ ನನ್ನ ವಿದ್ಯಾರ್ಥಿಯೊಬ್ಬರು ಸಹಾಯಕ್ಕೆ ಬಂದರು.
ಅವರಿಬ್ಬರೂ ಸುಭಾಷ್ ಹೂಗಾರ ಕುರಿತು ಒಂದಷ್ಟು ಮಾಹಿತಿ ಒದಗಿಸಿದರು. ಅವರಿಬ್ಬರೂ ಹೇಳಿದ್ದೇನೆಂದರೆ...
ಸುಭಾಷ್ ಹೂಗಾರ ಗೆಳೆಯರ ಬಳಗದಲ್ಲಿ ೩ ಎಂಡ್ ಹಾಫ್ ಎಂದೇ ಫೇಮಸ್. ಕೆಲವು ಬಾರಿ ಅವರ ಬುದ್ದಿ ಕೂಡ ಅಷ್ಟೇ ಕಳಗೆ ಇಳಿಯುವುದು. ಪರಮ ಆಲಸಿ. ವಿಕದಲ್ಲಿದ್ದಾಗ ಅವರಿಗೆ ಉತ್ತರ ಕರ್ನಾಟಕದ ಕುರಿತು ಉತ್ತರಾಯಣ ಎಂಬ ಅಂಕಣ ಬರೆಯುವಂತೆ ಸೂಚಿಸಲಾಗಿತ್ತಂತೆ. ಕಷ್ಟಪಟ್ಟು ೪ ಕಂತು ಬರೆದ ಸುಭಾಷ್ ಹೂಗಾರ ೫ನೇ ಕಂತಿಗೆ ಉತ್ತರಾಯಣ ಅಂಕಣದ ಉತ್ತರಕ್ರಿಯೆ ಮಾಡಿದ.
ಸಂಕೇಶ್ವರರು ಓಡಿಸಿದ ನಂತರ ಪ್ರಜಾವಾಣಿ ಸೇರಿದ. ಅಲ್ಲಿಂದ ಹಾರಿದ್ದು ಸುವರ್ಣಕ್ಕೆ. ಅಲ್ಲಿ ರಂಗನಾಥ್ ಸ್ವಲ್ಪದಿನ ಈತನಿಗೆ ಪ್ರೋತ್ಸ್ಸಾಹ ನೀಡಿದರು. ಆದರೆ ಸುಭಾಷ್ ಹೂಗಾರ ಸಾಮರ್ಥ್ಯ ಏನು ಎಂಬುದು ಗೊತ್ತಾದ ಮೇಲೆ ಮೂಲೆಗೆ ತಳ್ಳಿದ್ದರು. ಸುವರ್ಣದಲ್ಲಾದ ಬದಲಾವಣೆಯಿಂದಾಗಿ ಸುಭಾಷ್ ಹೂಗಾರ ಮರಳಿ ಹುಬ್ಬಳ್ಳಿ ಸೇರಿದ್ದಾರೆ. ಭೂಮಿ ರೌಂಡ್ ಆಗಿದೆ ಎಂಬುದು ಅವರ ವಿಷಯದಲ್ಲಿ ನಿಜವಾಗಿದೆ!
ಹುಬ್ಬಳ್ಳಿಗೆ ಹೋಗಿ ಸೇರಿದ ನಂತರ ಸುಭಾಷ್ ಹೂಗಾರ ಕಚೇರಿಯಲ್ಲಿ ಫುಲ್ ದರ್ಬಾರು ನಡೆಸಿದ್ದರಂತೆ. ನೀನು ಏನು ಮಾಡಿದ್ದಿ ಎಂಬುದು ಗೊತ್ತು ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದಾರಂತೆ. ಆದರೆ ಹುಬ್ಬಳ್ಳಿ ಕಚೇರಿ ಸಿಬ್ಬಂದಿಗೂ ಬೆಂಗಳೂರಿಗೆ ಹೋಗಿ ಏನು ಮಾಡಿದರು ಎಂಬುದು ಗೊತ್ತು. ಹೀಗಾಗಿ ಹಿಂದಿನಿಂದಾ ನಗುತ್ತಿದ್ದಾರಂತೆ.
ಸುಭಾಷ್ ಹೂಗಾರ ಎಂತಹ ವ್ಯಕ್ತಿ ಎಂದರೆ ಬ್ಲಾಗಲ್ಲಿ ತಮ್ಮ ಕುರಿತು ಬರೆದದ್ದನ್ನು ಓದಿ ನಾನು ಇಷ್ಟು ದೊಡ್ಡ ವ್ಯಕ್ತಿಯಾದೆ ಎಂದು ಸಂತೋಷ ಪಟ್ಟರು ಅಚ್ಚರಿಯಿಲ್ಲ!
2 comments:
Self Declared Scholer Mr. Subash Hoogar.
ಬೇರೆಯವರನು ದೂರುವುದೇ ನಿಮ್ಮ ಕುಲಕಸುಬು. ಬೇರೆಯವರನ್ನು ದೂರುವ ಮೊದಲು ನಿಮ್ಮದನ್ನು ಸರಿಮಾಡಿಕೊಳ್ಳಿ. ಆ ಭಗವಂತ ಸಾಯಿ ಬಾಬಾ ನಿಮಗೆ ಒಳ್ಳೆ ಬುದ್ದಿ ಕೊಡಲಿ....
ಓಂ ಸಾಯಿ, ಸಾಯಿ, ಬಾಬಾ, ಬಾಬಾ.
ಸ್ಥಿಮಿತ ಕಳೆದುಕೊಂಡಿರುವ ನಿಮ್ಮ ಮನಸ್ಸುಗಳನ್ನು ಆದಷ್ಟು ಸರಿ ಮಾಡಲಿ, ಆ ಬಾಬಾನಲ್ಲಿ ನಿಮ್ಮ ಪರವಾಗಿ ನಮ್ಮದೊಂದು ಪ್ರಾಥನೆ....
Post a Comment