Thursday 5 May 2011

ಗೋಡ್ಕಿಂಡಿ ಕೊಳಲು ನಾದಕ್ಕೆ ಮೇಯರ್ ನನ್ನು ಕುಣಿಸಿದ ರವಿ


ಕೆಂಪೇಗೌಡ ಪ್ರಶಸ್ತಿಯನ್ನು ಕರೆಕರೆದು ೨೭೦ ಜನರಿಗೆ ನೀಡಿದ್ದು ನಿಮಗೆ ಗೊತ್ತಿರಬಹುದು. ಅದರ ವಿಷಯ ನಾವು ಬರೆದು ಪ್ರಯೋಜನವಿಲ್ಲ. ಪತ್ರಿಕೆಗಳು ಆ ಕೆಲಸ ಮಾಡಿವೆ. ಕೆಂಪೇಗೌಡ ಪ್ರಶಸ್ತಿ ಪಡೆದವರಲ್ಲಿ ಕಪ್ಪು ಸುಂದರಿಯ ಜೊತೆ ಇರುತ್ತ ಕಂಡ ಕಂಡ ಹುಡುಗಿಯರಿಗೂ 'ಹಾಯ್' ಹಾಕುವ ರವಿ ಬೆಳೆಗೆರೆ ಮತ್ತು ಪ್ರಸಿದ್ಧ ಕೊಳಲುವಾದಕ ಪ್ರವೀಣ ಗೋಡ್ಕಿಂಡಿ ಕೂಡ ಇದ್ದರು.

ಇಬ್ಬರು ಪ್ರಶಸ್ತಿ ಗಳಿಸಿದ್ದು ಹೇಗೆ ಗೊತ್ತೇ?

ಪ್ರವೀಣ ಗೋಡ್ಕಿಂಡಿ ಅವರ ಪತ್ನಿ ಸಾರಿಕಾ ಗೋಡ್ಕಿಂಡಿ. ಸಾರಿಕಾ ಅವರ ತಂಗಿಯ ಗಂಡ ಸುಬ್ರಹ್ಮಣ್ಯ ಎಂಬವರು ಮೇಯರ್ ಜೊತೆಯೇ ಇರುತ್ತಾರೆ. ಒಂದರ್ಥದಲ್ಲಿ ಅತ್ಯಂತ ಆಪ್ತರು. ಇವರ ಮೂಲಕ ಪ್ರವೀಣ ಗೋಡ್ಕಿಂಡಿ ಮತ್ತು ರವಿ ಬೆಳೆಗೆರೆ ಪ್ರಸಸ್ತಿ ಗಿಟ್ಟಿಸಿದ್ದಾರೆ. ಪ್ರವೀಣ ಗೋಡ್ಕಿಂಡಿ ಇದಕ್ಕೆ ಅರ್ಹರೆ. ಆದರೆ ರವಿ ಬೆಳೆಗೆರೆಗೆ ಹೀಗೆ ಯಾರನ್ನಾದರು ದುಂಬಾಲು ಬಿದ್ದು ಪ್ರಸಸ್ತಿ ಗಿಟ್ಟಿಸುವ ಗೀಳು.

ಪ್ರಶಸ್ತಿ ಪ್ರಧಾನ ಸಮಾರಂಭದ ದಿನ ಪ್ರವೀಣ ಗೋಡ್ಕಿಂಡಿ ಬರಲಿಲ್ಲ. ಅದಕ್ಕೂ ಸುಬ್ರಹ್ಮಣ್ಯ ಅವರು ಪ್ರಭಾವ ಬೀರಿ ಮೇಯರ್ ಕಚೇರಿಯಲ್ಲಿ ಪ್ರವೀಣ ಗೋಡ್ಕಿಂಡಿಗೆ ಪ್ರಶಸ್ತಿ ಕೊಡಿಸುವ ವ್ಯವಸ್ಥೆ ಮಾಡಿದರು. ಮಧ್ಯಾಹ್ನ ೩.೩೦ಕ್ಕೆ ಮೇಯರ್ ಚೇಂಬರ್ ನಲ್ಲಿ ಪ್ರಶಸ್ತಿ ಕೊಡುವುದು ನಿಗದಿಯಾಗಿತ್ತು. ಸುಬ್ರಹ್ಮಣ್ಯ ಅವರು ಕೆಲವು ಕಾರ್ಪೊರೇಟರ್ ಗಳಿಗೂ ಬರಲು ಹೇಳಿದ್ದರು. ಎಲ್ಲರು ಬಂದು ಕಾಯುತ್ತಿದ್ದರೆ ಪ್ರವೀಣ ಗೋಡ್ಕಿಂಡಿ ಸುಳಿವಿಲ್ಲ. ಕೊಂಚ ಹೊತ್ತಿನಲ್ಲಿ ದೂರವಾಣಿ ಕರೆ ಮಾಡಿದ ಪ್ರವೀಣ ಗೋಡ್ಕಿಂಡಿ "ತನ್ನ ಮನೆಗೆ ರವಿ ಬೆಳೆಗೆರೆ ಮಧ್ಯಾಹ್ನದ ಊಟಕ್ಕೆ ಬಂದಿದ್ದರು. ಅವರು ಇನ್ನು ನನ್ನ ಮನೆಯಲ್ಲೇ ಇದ್ದಾರೆ. ಆದ್ದರಿಂದ ಬರುವುದು ವಿಳಂಬವಾಗುತ್ತಿದೆ. ಕಾರ್ಯಕ್ರಮವನ್ನು ೧-೨ ಗಂಟೆ ಮುಂದೂಡಿ" ಎಂದರು.

ಇದು ಕಾದು ಕುಳಿತಿದ್ದ ಮೇಯರ್ ಹಾಗು ಪ್ರಸಸ್ತಿ ಕೊಡಿಸಿದ ಸುಬ್ರಹ್ಮಣ್ಯ ಹಾಗು ಇತರರಿಗೆ ಕೋಪ ತರಿಸಿತ್ತು. ದೂರವಾಣಿಯಲ್ಲಿ ಪ್ರವೀಣ ಗೋಡ್ಕಿಂಡಿ ಆಡಿದ ಮಾತು ರವಿ ಬೆಳೆಗೆರೆ ಕಿವಿಗೆ ಬಿಟ್ಟು. ಅರೆ ನೀವೇನ್ರಿ ಅಲ್ಲಿಗೆ ಹೋಗೋದು. ಅವರನ್ನೇ ಇಲ್ಲಿಗೆ ಕರೆಸೋಣ. ಅವರಿಗೇನು ಸರಕಾರೀ ಕಾರಿದೆ. ಬರ್ತಾರೆ. ಬರಲ್ಲ ಅಂದ್ರೆ ಕರೆಸೋಣ. ನಾನಿಲ್ವೆ ಎಂದ ರವಿ ಬೆಳೆಗೆರೆ ಮೊಬೈಲ್ ಕೈಗೆತ್ತಿಕೊಂಡರು.

ಆಗ ಬಂತು ನೋಡಿ ಮೇಯರ್ ಗೆ ಬೆಳೆಗೆರೆ ಫೋನು!
"ಏನ್ರೀ ಪ್ರವೀಣ ಗೋಡ್ಕಿಂಡಿ ಯಾರು ಗೊತ್ತ? ಅವರು ಅಂತರಾಷ್ಟ್ರೀಯ ಕಲಾವಿದರು. ಅವರು ನಿಮ್ಮ ಚೇಂಬರ್ ಗೆ ಬಂದು ಪ್ರಶಸ್ತಿ ತಗೋಬೇಕ? ನೀವೇ ಅವರ ಮನೆಗೆ ಹೋಗಿ ಪ್ರಶಸ್ತಿ ಕೊಡಬೇಕು. ನಾನು ಅಲ್ಲೇ ಇದ್ದೀನಿ ಮನೆಗೆ ಬಂದು ಬಿಡಿ" ಎಂದು ಧಮಕಿ ಹಾಕಿದ್ದಾರೆ.
ಮೇಯರ್ ಹಾಗು ಸಂಗಡಿಗರಿಗೆ ಮೈಯ್ಯೆಲ್ಲ ಉರಿದುಹೋಗಿದೆ. ಅಲ್ಲೇ ಬೈದುಕೊಂಡಿದ್ದಾರೆ. ಮಹಾನ್ ಪತ್ರಕರ್ತನಿಗೆ ಛೀ ಥೂ ಎಂದು ಉಗಿದುಕೊಂಡಿದ್ದಾರೆ. ಸುಬ್ರಹ್ಮಣ್ಯ ಅವರಿಗೂ ಯಾಕಾದರೂ ಪ್ರಶಸ್ತಿ ಕೊಡಿಸಿದೇನೋ ಅನ್ನಿಸಿದೆ. ಆದರೆ ಬೇರೆ ಮಾರ್ಗ ಕಾಣದೆ ಪ್ರವೀಣ ಗೋಡ್ಕಿಂಡಿ ಮನೆಗೆ ಹೋಗಿ ಪ್ರಶಸ್ತಿ ಕೊಟ್ಟು ಬಂದಿದ್ದಾರೆ.

ಕೆಂಪೇಗೌಡ ಪ್ರಶಸ್ತಿ ಪಡೆದ ಹಲವರು ಪ್ರಶಸ್ತಿ ಪಡೆಯಲು ಸಮಾರಂಭಕ್ಕೆ ಬಂದಿಲ್ಲ. ಅವರಲ್ಲಿ ಎಷ್ಟು ಜನರ ಮನೆಗೆ ಮೇಯರ್ ಹೋಗಿ ಪ್ರಶಸ್ತಿ ನೀಡಿದ್ದಾರೆ? ಪ್ರವೀಣ ಗೋಡ್ಕಿಂಡಿ ಅಂತರಾಷ್ಟ್ರೀಯ ಕಲಾವಿದರೇ ಇರಬಹುದು ಆದರೆ ಮೇಯರ್ ಬೆಂಗಳೂರಿನ ಪ್ರಥಮ ಪ್ರಜೆ. ಇದನ್ನು ರವಿ ಬೆಳೆಗೆರೆ ಮರೆಯಬಾರದಿತ್ತು.

ಏನೋ ಸಮಾಜಕ್ಕೆ ಕೆಲಸ ಮಾಡುವವರು ಪತ್ರಕರ್ತರಿಗೆ ಜನ ಗೌರವ ಕೊಡುತ್ತಾರೆ. ಅವರು ಕೊಡುವ ಗೌರವವನ್ನು ಈ ರೀತಿ ದುರ್ಬಳಕೆ ಮಾಡುವುದು ಎಷ್ಟು ಸರಿ? ಇಂತಹ ಸಾಮಾನ್ಯ ಜ್ಞಾನವು ರವಿ ಬೆಳೆಗೆರೆಯಂತಹ ನುರಿತ ಮತ್ತು ನೆರೆತ ಪತ್ರಕರ್ತರಿಗೆ ಇಲ್ಲದಿದ್ದರೆ ಹೇಗೆ?

ಇಂತಹ ಚಿಕ್ಕ ಚಿಕ್ಕ ವಿಷಯಕ್ಕೆಲ್ಲ ಪತ್ರಕರ್ತರು ಪ್ರಭಾವ ಬೀರುತ್ತಾರಾ? ಛೀ ಛೀ!
ನಾಚಿಕೆಯಾಗಬೇಕು! ಕೆಲವರಿಗೆ ಅದು ಇರುವುದಿಲ್ಲ!

4 comments:

People Links said...

This 23rd TV9 Rehman going to marry TV9 Sameena.

Anonymous said...

ರವಿ ಯನ್ನು ಒಂದು ಶಬ್ದದಲ್ಲಿ ಹೇಳ್ಬೇಕುಂದ್ರೆ ದೊಡ್ಡ ತಿಕ್ಲ..

Anonymous said...

ನಾವು ಓದುಗರು, ನೋಡುಗರು ಅಮಾಯಕರು ರಂಗನಾಥ್ ಹೇಳೋದನ್ನು ನಂಬುತ್ತೇವೆ. ರವಿಬೆಳೆಗೆರೆ ಹೇಳೋದನ್ನು ನಂಬುತ್ತೇವೆ. ವಿಶ್ವೇಶ್ವರ ಭಟ್, ಪ್ರಾತಾಪ ಸಿಂಹರನ್ನು ನಂಬುತ್ತೇವೆ. ಅವರಿಂದ ಈ ರಾಜ್ಯಕ್ಕೆ ಯಾವುದಾರು ರೀತಿಯಲ್ಲಿ ಸಹಕಾರ ಆಗುತ್ತೆ ಅಂತ ಬಯಸುತ್ತೇವೆ.
ಅವರನ್ನು ಮನಸಿನ್ನಲ್ಲಿ ಇಟ್ಟುಕೊಂಡು ಪತ್ರಗಳನ್ನು ಬರಿತಿವಿ. ಈ ಮಹಾನುಭಾವರು ನಮ್ಮ ಪತ್ರಗಳನ್ನು ನಮ್ಮ ಪ್ರಶ್ನೆಗಳನ್ನು ತಮ್ಮ ಅಂದಿನ ಕೆಳಗೆ ಹಾಕಿಕೊಂಡು ಕುಳಿತು ಬಿಡುತ್ತಾರೆ. ಸುವರ್ಣ ವಾಹಿನಿಯಲ್ಲಿ ಪ್ರತಿನಿತ್ಯ ಕನ್ನಡದ ಕೊಲೆ ಆಗುತ್ತಿದೆ ಅಕ್ಷರಗಳು ತಪ್ಪು ತಪ್ಪು ಅದರ ಬಗ್ಗೆ ಒಂದು ವರ್ಷದಿಂದ ಬರೆದರೂ ಯಾವುದೇ ಪ್ರತಿಕ್ರಿಯೆ ಇಲ್ಲ !!
ಭ್ರಷ್ಟಾಚಾರದ ವಿರುದ್ಧ ಆಂದೋಲನ ಅಭಿಯಾನ ಮಾಡುತ್ತಾರೆ .
(ನಮ್ಮ ನಾಡಿನ ಭ್ರಷ್ಟಾಚಾರವನ್ನು ತಡೆಯುವುದು ಹೇಗೆ ?
ದಯವಿಟ್ಟು ಈ ಲಿಂಕನ್ನು ಓದಿ .... http://www.facebook.com/profile.php?id=100001508660835

ಈ ಲಿಂಕನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ,
ರಾಜು
rajudavanagere@gmail.ಕಂ)
ಸಾಮಾನ್ಯ ಜನರು ಯಾವುದಾದರೋ ಒಂದು ತಪ್ಪು ಮಾಡಿದರೆ ಬೆಳಗಿನಿಂದ ಸಂಜೆ ವರೆಗೂ ತೋರಿಸಿಸುವುದನ್ನು ತೋರಿಸುತ್ತಾರೆ.
೨೦ ತಿಂಗಳ ಜನಪ್ರಿಯ ಮುಖ್ಯಮಂತ್ರಿ ಯಾ ಮ್ದುಅವೆ ವಿಚಾರಗಳು ಫೋಟೋ ಸಮೇತ ಆಧಾರ ಸಿಕ್ಕಿದರು ಅದರ ಬಗ್ಗೆ ಚಕ್ರ ಎತ್ತುವುದಿಲ್ಲ. ಅದ್ರ ಬಗ್ಗೆ ಬರೆದು ಬರೆದು ಹುಚ್ಚರಾ ಗಬೇಕು ನಾವು
http://www.facebook.com/profile.php?id=100001225067997#!/media/set/?set=a.198736523496913.42221.100000816996773

ಸ್ವಂತಿಕ, ಜವಾಬ್ಧಾರಿ, ಸ್ವಾಭಿಮಾನ ಇಲ್ಲದ ಪತ್ರಿಕೋದ್ಯಮ ಇಲ್ಲವೇ ?
ಸ್ವಾರ್ಥ ವೆ ಮುಖ್ಯವಾ ?
ರಾಜು
ದಾವಣಗೆರೆ
rajudavanagere@gmail.com

Anonymous said...

ಮೊದಲು ಈ ಬ್ಲಾಗ್ ಬರೆದವನು ತಿಕ್ಕಲ